ಮಡಿಕೇರಿ, ಮಾ. ೨೩: ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬಳಿ ಇರುವ ಅಂಕನಹಳ್ಳಿಯ ತಪೋಕ್ಷೇತ್ರ ಮನೆಹಳ್ಳಿ ಶ್ರೀ ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಏ. ೧೨ರಿಂದ ೧೪ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರಾಧ್ಯಕ್ಷ ಮಹಾಂತಶಿವಲಿAಗ ಸ್ವಾಮಿಗಳು, ಸ್ವಾಮಿಯವರ ಜಾತ್ರಾ ಮಹೋತ್ಸವ ಅಂಗವಾಗಿ ತಾ. ೧೨ರಂದು ಬೆಳಿಗ್ಗೆ ಧ್ವಜಾರೋಹಣ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಸ್ವಾಮಿಯವರಿಗೆ ಕಂಕಣಧಾರಣೆ, ಮಹಾಮಂಗಳಾರತಿ, ೭ ಗಂಟೆಗೆ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿಯವರಿಗೆ ಸೂರ್ಯ ಮಂಡಲೋತ್ಸವ ನಡೆಯಲಿದೆ ಎಂದರು.

ತಾ. ೧೩ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ಮದನಾದಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ ೬.೩೦ ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ, ರಾತ್ರಿ ೮.೩೦ ಗಂಟೆಗೆ ದಾಸೋಹ ನಡೆಯಲಿದೆ.

ತಾ. ೧೪ರಂದು ಬೆಳಿಗ್ಗೆ ೫ ಗಂಟೆಗೆ ವೀರಭದ್ರೇಶ್ವರ ಸ್ವಾಮೀಜಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಕೊಂಡೋತ್ಸವ ಸೇವೆ, ೬ ಗಂಟೆಗೆ ವಟುಗಳಿಗೆ ಉಚಿತ ಲಿಂಗ ದೀಕ್ಷಾ ಕಾರ್ಯಕ್ರಮ, ೭ ಗಂಟೆಗೆ ಸಣ್ಣಚಂದ್ರ ಮಂಡಲೋತ್ಸವ ನಡೆಯಲಿದೆ. ೧೧ ಗಂಟೆಗೆ ಮುತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ, ಅಪರಾಹ್ನ ೧೨ ಗಂಟೆಗೆ ದಾಸೋಹ ಸೇವೆ ನಡೆಯಲಿದೆ ಎಂದು ತಿಳಿಸಿದರು.

ರಥೋತ್ಸವ

ದೇವಾಲಯ ಸಮಿತಿ ಪದಾಧಿಕಾರಿ ಎಸ್. ಮಹೇಶ್ ಮಾತನಾಡಿ, ತಾ. ೧೪ರಂದು ಸಂಜೆ ೫.೩೦ ಗಂಟೆಗೆ ಸ್ವಾಮಿಯವರ ಪ್ರಾಕಾರ ಪಲ್ಲಕ್ಕಿ ಉತ್ಸವದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ೬.೩೦ ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡುವರು. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರುಗಳು, ಶಿವಮೊಗ್ಗ ವಿಧಾನಪರಿಷತ್ ಸದಸೆÀ್ಯ ಭಾರತಿ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತ ರಿರುವರು. ಇದೇ ಸಂದರ್ಭದಲ್ಲಿ ಸಮುದಾಯ ಭವನಕ್ಕೆ ಭೂಮಿಪೂಜೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಪ್ರಮುಖವಾಗಿ ಕೊಕೊ ವಿಶ್ವಕಪ್‌ನಲ್ಲಿ ಪಾಳ್ಗೊಂಡು ಜಯಗಳಿಸಿದ ಚೈತ್ರ ಹಾಗೂ ಜೂನಿಯರ್ ಹಾಕಿ ತರಬೇತುದಾರ ರಾದ ಜನಾರ್ಧನ ಅವರುಗಳನ್ನು ಸನ್ಮಾನಿಸಲಾಗುವುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಕ್ಷೇತ್ರದ ಪದಾಧಿಕಾರಿಗಳಾದ ಬಸಪ್ಪ, ಪ್ರಕಾಶ್, ರಾಜಶೇಖರ್, ನಾರಾಯಣ ಸ್ವಾಮಿ ಇದ್ದರು.