ಮಡಿಕೇರಿ, ಮಾ. ೨೨: ದೇಶದಲ್ಲಿ ಎಲ್ಲಾ ವಾಹನಗಳಿಗೂ ಏಕರೂಪ ನೋಂದಣಿ ನಾಮಫಲಕವಿರುವಂತೆ ಮಾಡಲು ಹಾಗೂ ಅಪರಾಧ ಪತ್ತೆ ಹಚ್ಚಲು ನೆರವಾಗುವ ಹೆಚ್‌ಎಸ್‌ಆರ್‌ಪಿ (ಊigh Seಛಿuಡಿiಣಥಿ ಖegisಣಡಿಚಿಣioಟಿ Pಟಚಿಣes) ಅತೀ ಸುರಕ್ಷತಾ ನೋಂದಣಿ ಫಲಕ (ನಂಬರ್ ಪ್ಲೇಟ್) ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಅಳವಡಿಕೆ ಗಡುವನ್ನು ವಿಸ್ತರಿಸಲು ಕೋರಿ ಕೆಲವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಅದು ಇನ್ನೂ ವಿಚಾರಣೆಯ ಹಂತದಲ್ಲಿದೆ. ವಾಹನಗಳಿಗೆ ಅಳವಡಿಸುವ ಸಂಬAಧ ಹಲವು ಬಾರಿ ನ್ಯಾಯಾಲಯ ಗಡುವು ವಿಸ್ತರಿಸಿದರೂ ಸವಾರರಿಂದ ಸೂಕ್ತ ಸ್ಪಂದನ ವ್ಯಕ್ತವಾಗುತ್ತಿಲ್ಲ. ರಾಜ್ಯದಲ್ಲಿ ೨ ಕೋಟಿ ವಾಹನಗಳ ಪೈಕಿ ಕಳೆದ ಫೆಬ್ರುವರಿ ಅಂತ್ಯಕ್ಕೆ ೫೮,೧೨ ಲಕ್ಷ ಸವಾರರು ಮಾತ್ರ ಹೊಸ ನೋಂದಣಿ ಫಲಕ ಅಳವಡಿಸಿಕೊಂಡಿದ್ದು, ಈ ಮೂಲಕ ಶೇ.೨೯ರಷ್ಟು ಮಾತ್ರ ಪ್ರಗತಿ ದಾಖಲಾಗಿದೆ.

ಪುಟ್ಟ ಜಿಲ್ಲೆ ಕೊಡಗಿನಲ್ಲಿಯೇ ೪೮,೬೬೪ ವಾಹನಗಳು ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಬಾಕಿ ಇದೆ. ೨೦೧೯ ಏಪ್ರಿಲ್ ೧ರ ಮುನ್ನ ನೋಂದಣಿಯಾದ ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಕೆಂದು ೨೦೨೩ರಲ್ಲಿ ಕೇಂದ್ರ ಅಧಿಸೂಚನೆ ಹೊರಡಿಸಿತ್ತು. ನೋಂದಣಿಯಾಗಿರುವ ೨.೪೫ ಕೋಟಿ ವಾಹನಗಳ ಪೈಕಿ ಸುಮಾರು ೨ ಕೋಟಿ ವಾಹನಗಳು ಅಸ್ವಿತ್ವದಲ್ಲಿವೆ. ಸುಮಾರು ೫೮ ಲಕ್ಷ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಸಭೆಯಲ್ಲಿ ಉತ್ತರಿಸಿದ್ದಾರೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ೨೦೨೩ರಿಂದ ಈವರೆಗೂ ೭ ಬಾರಿ ಗಡುವು ವಿಸ್ತರಿಸಲಾಗಿದೆ. ಮಾರ್ಚ್ ೩೧ರವರೆಗೂ ಅಳವಡಿಸುವಂತೆ ಕಾಲಾವಕಾಶ ನೀಡಿದರೂ ವಾಹನ ಸವಾರರು ನಿರ್ಲಕ್ಷö್ಯ ತೋರುತ್ತಿದ್ದಾರೆ. ಆರಂಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊರತೆ, ವೆಬ್‌ಪೋರ್ಟಲ್‌ನಲ್ಲಿ ಸರ್ವರ್ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು. ೨೦೧೯ರ ಏಪ್ರಿಲ್ ೧ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು ೯೦ ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿದ್ದ ಭಾರತೀಯ ಅತಿ ಸುರಕ್ಷಿತ ನಂಬರ್ ಫಲಕಗಳ ಉತ್ಪಾದಕರ ಒಕ್ಕೂಟ, ಹೈಕೋರ್ಟ್ ಮೆಟ್ಟಿಲೇರಿ, ಕೆಲ ಕಂಪನಿಗಳಿಗೆ ಮಾತ್ರ ನಂಬರ್ ಪ್ಲೇಟ್ ಉತ್ಪಾದನೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಅಸಲಿ ಹಾಗೂ ನಕಲಿ ನಂಬರ್ ಪ್ಲೇಟ್‌ಗಳನ್ನು ಸುಲಭವಾಗಿ ಗುರುತಿಸಲು ಇದು ಸಹಕಾರಿಯಾಗಲಿದೆ. ವಾಹನ ಕಳ್ಳತನವಾದ ಸಂದರ್ಭ ಹಾಗೂ ಅಪಘಾತ ಸಂದರ್ಭಗಳಲ್ಲಿ ಹೊಸದಾದ ನಂಬರ್ ಪ್ಲೇಟ್ ಅಳವಡಿಸಿಕೊಂಡರೆ ಅನುಕೂಲವಾಗಲಿದೆ. ಇವುಗಳನ್ನು ಬದಲಿಸಿ ವಿರೂಪಗೊಳಿಸುವುದು ಸಾಧ್ಯವಿಲ್ಲ. ದ್ವಿಚಕ್ರ ಅಥವಾ ಕಾರಿನ ನಾಮಫಲಕದ ಮೇಲೆ ನೋಂದಣಿ ಸಂಖ್ಯೆ ಜೊತೆ ಲೇಸರ್ ಕೋಡ್ ಇರಲಿದೆ. ಇದರಲ್ಲಿ ಇಂಜಿನ್ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿದಂತೆ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಹಲವು ಮಾಹಿತಿಗಳು ಕೇಂದ್ರೀಯ ಡೇಟಾದಲ್ಲಿ ಅಡಕವಾಗಿರಲಿದೆ. ಈ ಮಾಹಿತಿ ಬಳಸಿಕೊಂಡು ವಾಹನ ಕಳ್ಳತನವಾದಾಗ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಖದೀಮರ ಕೈಗೆ ಸಿಕ್ಕಾಗ ವಿರೂಪಗೊಳಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ಭಯೋತ್ಪಾದಕ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳವುದನ್ನ ತಡೆಗಟ್ಟಬಹುದಾಗಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ದ್ವಿಚಕ್ರ ವಾಹನಕ್ಕೆ ೪೫೦ ರೂ., ತ್ರಿಚಕ್ರ ವಾಹನಗಳಿಗೆ ೫೫೦ ರೂ., ಕಾರುಗಳಿಗೆ ೬೫೦ ರೂ., ಇತರೆ ನಾಲ್ಕು ಚಕ್ರದ ವಾಹನಗಳಿಗೆ ೭೮೦ ರೂ. ಹಾಗೂ ಭಾರೀ ವಾಹನಗಳು ಹಾಗೂ ೧೦ ಚಕ್ರದ ವಾಹನಗಳಿಗೆ ೬೫೦ ರಿಂದ ೮೦೦ ರೂ. ಶುಲ್ಕ ನಿಗದಿ ಮಾಡಲಾಗಿದೆ. ಒಂದು ವೇಳೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ ೫೦೦ರಿಂದ ೧ ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

ಪುಟ್ಟ ಜಿಲ್ಲೆ ಕೊಡಗಿನಲ್ಲಿ ೪೮೬೬೪ ವಾಹನಗಳ ಮಾಲೀಕರು ಇನ್ನೂ ಸುರಕ್ಷತಾ ನೋಂದಣಿ ಫಲಕ ಅಳವಡಿಸಿಕೊಂಡಿಲ್ಲ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಮಾರ್ಚ್ ೧೫ ರ ವರೆಗೆ ಒಟ್ಟು ೨.೪೮, ೬೦೮ ವಾಹನಗಳು ನೋಂದಾಯಿತವಾಗಿದ್ದು ಇವುಗಳಲ್ಲಿ ೧,೩೭,೧೬೨ ವಾಹನಗಳಿಗೆ ಮಾತ್ರ ಹೆಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ವಾಹನಗಳ ನೋಂದಣಿ ಹಾಗೂ ಚಾಲನಾ ಪರವಾನಗಿ ನೀಡಿಕೆ ಕೂಡ ಚುರುಕಾಗಿದ್ದು ತಿಂಗಳೊAದರಲ್ಲಿ ಸುಮಾರು ೬೦೦ ರಿಂದ ೮೦೦ ನೂತನ ವಾಹನಗಳು ನೋಂದಣಿ ಆಗುತ್ತಿವೆ. ಕಳೆದ ೨೦೨೪ ರ ಏಪ್ರಿಲ್ ಒಂದರಿAದ ಇಂದಿನ ಮಾರ್ಚ್ ೧೫ ರ ವರೆಗೆ ಸುಮಾರು ೧೧,೧೮೬ ಜನರು ವಾಹನ ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಇವರಲ್ಲಿ ೨೫೩೮ ಮಹಿಳೆಯರೂ ಇದ್ದಾರೆ ಎಂದು ಅಧಿಕಾರಿ ನಾಗರಾಜಾಚಾರ್ ಮಾಹಿತಿ ನೀಡಿದ್ದಾರೆ.