ಮಡಿಕೇರಿ, ಮಾ. ೨೨: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮಡಿಕೇರಿ ಮತ್ತು ರಾಷ್ಟಿçÃಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ, ಬೆಂಗಳೂರು ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮಡಿಕೇರಿ ಸಭಾಂಗಣದಲ್ಲಿ “ಆಧುನಿಕ ತೋಟಗಾರಿಕೆ ಮತ್ತು ಸಾಂಬಾರ ಬೆಳೆಗಳ ತಂತ್ರಜ್ಞಾನಗಳು ಮತ್ತು ಸಮಗ್ರ ಆರೋಗ್ಯ ನಿರ್ವಹಣೆ ಮೂಲಕ ಪರಿಶಿಷ್ಟ ಜಾತಿ ರೈತರಿಗಾಗಿ ಸಾಮಾಜಿಕ, ಆರ್ಥಿಕ ಸಬಲೀಕರಣ ಮತ್ತು ಸಾಮರ್ಥ್ಯಾಭಿವೃದ್ಧಿ” ಕುರಿತು ತರಬೇತಿ ಹಾಗೂ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಜಂಟಿ ಕೃಷಿ ನಿರ್ದೇಶಕರಾದ ಡಾ. ಚಂದ್ರಶೇಖರ್ ಬಿ.ಎಸ್. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಸಂಶೋಧಕರಾದ ಡಾ.ಲತಾ ಹೆಚ್.ಸಿ, ಕ್ಷೇತ್ರಾಧಿಕ್ಷಕರು, ಕೃಷಿ ಮತ್ತುತೋಟಗಾರಿಕೆ ಸಂಶೋಧನಾ ಕೇಂದ್ರ, ಮಡಿಕೇರಿ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು ನುಡಿದರು. ಈ ಕಾರ್ಯಕ್ರಮದಲ್ಲಿ ಆಧುನಿಕ ತಂತ್ರಜ್ಞಾನಗಳ ತರಬೇತಿಯನ್ನು ನೀಡುತ್ತೇವೆ ಹಾಗೂ ಪರಿಕರಗಳಾದ ಜೈವಿಕ ಗೊಬ್ಬರಗಳು, ಪೀಡೆನಾಶಕ, ಶಿಲೀಂದ್ರ ನಾಶಕಗಳು ಮತ್ತು ತೋಟಗಾರಿಕಾ ಗಿಡಗಳಾದ ಬೆಣ್ಣೆ ಹಣ್ಣು, ಲಿಚ್ಚಿ, ಚರ‍್ರಿಗೋವಾ, ರೋಸ್‌ಆಪಲ್, ವೆಲ್‌ವೆಟ್‌ಆಪಲ್ ಮುಂತಾದ ಹತ್ತು ಬಗೆಯ ಹಣ್ಣಿನ ಗಿಡಗಳನ್ನು ನೀಡಲು ಈ ಕಾರ್ಯಕ್ರಮದಲ್ಲಿ ಅವಕಾಶ ಇದೆ, ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಯೋಗೇಶ್ ಹೆಚ್.ಆರ್. ಉಪಸ್ಥಿತರಿದ್ದರು, ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ಆರ್.ಎನ್. ಕೆಂಚರೆಡ್ಡಿ, ಡಾ. ಬಸವಲಿಂಗಯ್ಯ, ಡಾ. ದೇವರಾಜು ಹಾಗೂ ಅರಣ್ಯ ಮಹಾವಿದ್ಯಾಲಯದ ವಿಜ್ಞಾನಿ ಡಾ. ಮೋಹನ್ ಕುಮಾರ್ ಪರಿಶಿಷ್ಟ ಜಾತಿ ರೈತರಿಗೆ ತಾಂತ್ರಿಕ ಮಾಹಿತಿಯನ್ನು ತರಬೇತಿಯಲ್ಲಿ ನೀಡಿದರು. ಈ ತರಬೇತಿಯಲ್ಲಿ ಸುಮಾರು ೫೦ ಮಂದಿ ರೈತರು ಪಾಲ್ಗೊಂಡು ಸದುಪಯೋಗಪಡೆದುಕೊಂಡರು.