ನಾಪೋಕ್ಲು ನಾಡು ಶ್ರೀ ಭಗವತಿ ದೇವರ ಉತ್ಸವ
ನಾಪೋಕ್ಲು: ಇಲ್ಲಿಯ ನಾಡು ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಬುಧವಾರ ವಿಜೃಂಭಣೆಯಿAದ ಜರುಗಿತು. ಮಾರ್ಚ್ ೧೭ ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಾಂಪ್ರದಾಯಕವಾಗಿ ಹಾಗೂ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು.
ಆರAಭದಲ್ಲಿ ತಕ್ಕರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ, ದೇವರ ಊರ ಪ್ರದಕ್ಷಿಣೆ ನೆರವೇರಿತು. ಬುಧವಾರ ಪಟ್ಟಣಿ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಿಗ್ಗೆ ದೇವರ ದರ್ಶನ ಅನಂತರ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಧಾನ ಕಾರ್ಯಕ್ರಮ ಜರುಗಿ. ಮಧ್ಯಾಹ್ನದ ಬಳಿಕ ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ಉತ್ಸವದ ಧಾರ್ಮಿಕ ಪೂಜಾ ವಿಧಿವಿಧಾನವನ್ನು ಹರೀಶ್ ತಂತ್ರಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೆಕುಣ್ಣಾಯ, ಸುರೇಶ್ ಹಾಗೂ ದೇವರ ನೃತ್ಯ ಮಹೋತ್ಸವವನ್ನು ಜಯಚಂದ್ರ ನೆರವೇರಿಸಿಕೊಟ್ಟರು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಶಿಕ್ಷಕರು ಆದ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಾAಡ ಜಾಲಿ ಪೂವಪ್ಪ, ಆಡಳಿತ ಮಂಡಳಿ ನಿರ್ದೇಶಕರು, ಕೇಲೇಟಿರ, ತಿರೋಡಿರ, ಕುಲ್ಲೇಟಿರ, ನಾಟೋಳಂಡ ತಕ್ಕ ಮುಖ್ಯಸ್ಥರ ಮುಂದಾಳತ್ವದಲ್ಲಿ ವಾರ್ಷಿಕ ಉತ್ಸವ ಅತ್ಯಂತ ಯಶಸ್ವಿಯಾಗಿ ಜರುಗಿತು. ಊರು ಪರ ಊರಿನ ಭಕ್ತಾದಿಗರು ಶ್ರದ್ಧಾಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಸೇವೆಯನ್ನು ನೆರವೇರಿಸಿಕೊಂಡರು.ಬೊಮ್ಮAಜಿಕೇರಿ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ
ನಾಪೋಕ್ಲು: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದಲ್ಲಿರುವ ಬೊಮ್ಮಂಜಿಕೇರಿ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ಪೋದ ಹಾಗೂ ಭದ್ರಕಾಳಿ ಮುಡಿ ಕೋಳ ನೆರವೇರಿತು. ಉತ್ಸವದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಕಾಣಿಕೆಗಳನ್ನು ಒಪ್ಪಿಸಿ ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಹೊಂದಿದರು.
ಈ ಸಂದರ್ಭ ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಊರ ಹಾಗೂ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಣಿವೆ: ಇಲ್ಲಿಗೆ ಸಮೀಪದ ಮುಳ್ಳುಸೋಗೆಯಲ್ಲಿರುವ ಮೂರು ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ ೧೨ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಜನತಾ ಕಾಲೋನಿ ಈ ಮೂರು ಗ್ರಾಮಗಳ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತರಾದರು. ಎರಡು ದಿನಗಳ ಕಾಲ ನಡೆದ ದೇವತಾ ಪೂಜೋತ್ಸವದಲ್ಲಿ ಬುಧವಾರ ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ನವಗ್ರಹ ಹೋಮ, ಕಲಶಾಭಿಷೇಕ, ಮಹಾಪೂಜೆ, ಸಂಜೆ ೭ ಗಂಟೆಗೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಗ್ಬಲಿ ನೆರವೇರಿತು.
ಬಳಿಕ ಗುರುವಾರ ಬೆಳಿಗ್ಗೆ ಕಾವೇರಿ ನದಿಯಿಂದ ಕಲಶ ತರಲಾಯಿತು. ಬಳಿಕ ಗಣಪತಿ ಹೋಮ, ದುರ್ಗಾ ಹೋಮ, ಪ್ರತಿಷ್ಠಾ ಕಲಶಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಿತು. ದೈವಜ್ಞ ಜಗದೀಶ್ ಉಡುಪ, ಸುಂಟಿಕೊಪ್ಪದ ಗಣೇಶ ಭಟ್, ಕೌಶಿಕ್ ಅವರಿಂದ ವಿವಿಧ ಹೋಮ ಹವನಾದಿಗಳು ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ಎಂ.ಎ. ಕುಮಾರಸ್ವಾಮಿ, ಉಪಾಧ್ಯಕ್ಷ ಧನರಾಜ್, ಕಾರ್ಯದರ್ಶಿ ಎಂ.ಹೆಚ್. ಅಣ್ಣೇಗೌಡ, ಸಹಕಾರ್ಯದರ್ಶಿ ಎಂ. ಮಂಜುನಾಥ್, ಖಜಾಂಚಿ ಸೋಮು, ನಿರ್ದೇಶಕರಾದ ಎಂ.ಕೆ. ಗಣೇಶ್, ಎಂ.ಆರ್. ನಂಜುAಡ, ಗೋವಿಂದರಾಜು, ಡಿ. ಅಪ್ಪಣ್ಣ, ಎಂ.ಸಿ. ಮಂಜುನಾಥ್, ಪುಟ್ಟರಾಜು, ಜಯರಾಜ್, ವಿಶ್ವನಾಥ್, ಗಣಪತಿ, ಸೋಮು, ಎಂ. ಸಂತೋಷ್ ಇದ್ದರು.ವೀರಾಜಪೇಟೆ: ನಗರಕ್ಕೆ ಕಲಶ ಪ್ರಾಯದಂತಿರುವ ಮಲೆತಿರಿಕೆ ಮಹಾದೇವನ ವಾರ್ಷಿಕ ಮಹೋತ್ಸವದ ಅಂಗವಾಗಿ ಪೇಟೆ ಮೆರವಣಿಗೆ ನಡೆಯಿತು. ವೀರಾಜಪೇಟೆ ನಗರಕ್ಕೆ ಹೊಂದಿಕೊAಡಿರುವ ಮಗ್ಗುಲ, ವೈಪಾಡ, ಐಮಂಗಲ, ಚೆಂಬೆಬೆಳ್ಳೂರು, ಕುಕ್ಲೂರು ಗ್ರಾಮಗಳ ಆಧಿ ಮಹಾದೇವ ಮಲೆತಿರಿಕೆ ಬೆಟ್ಟದ ತುದಿಯಲ್ಲಿ ಮಂದಾವಿಸ್ಮಿತವಾಗಿ ಸ್ಥಿತಗೊಂಡಿರುವ ಶಿವಸ್ವರೂಪಿ. ಶ್ರೀ ಮಲೆ ಮಹಾದೇಶ್ವರ ದೇಗುಲದ ವಾರ್ಷಿಕ ಮಹೋತ್ಸವ ತಾ. ೧೫ ರಂದು ಆರಂಭವಾಯಿತು.
ಉತ್ಸವದ ನಾಲ್ಕನೇ ದಿನವಾದ ನಿನ್ನೆ ಬೆಳಗ್ಗಿನ ಪೂಜಾ ಕೈಂಕರ್ಯಗಳು ಜರುಗಿ ಮಧ್ಯಾಹ್ನ ೧೨ ಗಂಟೆಗೆ ನೆರಪು, ಎತ್ತುಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮಾಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ವೇಳೆಗೆ ಉತ್ಸವ ಮೂರ್ತಿಯ ಪೇಟೆ ಮೆರವಣಿಗೆ ನಡೆಯಿತು. ಸುಂಕದಕಟ್ಟೆಯಲ್ಲಿ ಪ್ರಥಮ ಪೂಜೆ ಸ್ವೀಕರಿಸಿ ನಂತರ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ಸಾಮೂಹಿಕ ವಿಶೇಷ ಪೂಜೆ ಸಮರ್ಪಿಸಲಾಯಿತು. ಗಣಪತಿ ದೇಗುಲದ ಪೂಜೆ, ಕೃಷ್ಣ ಸ್ಟೋರ್ ಬಳಿಯ ರಾಮ್‌ಲಾಲ್ ಕಟ್ಟೆ ಬಳಿ ಪೂಜೆ ಸಲ್ಲಿಕೆಯಾದವು. ದೇವಾಂಗ ಬೀದಿಯಲ್ಲಿರುವ ಶ್ರೀ ಮಹಾಲಕ್ಷಿö್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆಯಾಗಿ ಮುಖ್ಯ ರಸ್ತೆಯ ತೆಲುಗರ ಬೀದಿ ಮೂಲಕ ಮಲೆತಿರಿಕೆ ಬೆಟ್ಟದ ದೇಗುಲಕ್ಕೆ ಹಿಂದುರುಗಲಾಯಿತು.
ಮೆರವಣಿಗೆಯ ಸಂದರ್ಭದಲ್ಲಿ ಚೆಂಡೆ ಮದ್ದಳೆ, ಕೊಡಗಿನ ಸಾಂಪ್ರದಾಯಿಕ ವಾಲಗವು ಮೆರವಣಿಗೆಗೆ ಸಾತ್ ನೀಡಿದವು. ಜೈನರ ಬೀದಿಯ ಬಸವೇಶ್ವರ ದೇಗುಲದ ಆಡಳಿತ ಮಂಡಳಿಯ ಸದಸ್ಯರು, ಸಾಮೂಹಿಕ ಪೂಜೆಗಳು ಸಲ್ಲುವ ಸ್ಥಳದಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ ,ಮಗ್ಗುಲ ವೈಪಡ ಗ್ರಾಮದ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಅರ್ಚಕರು, ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಶ್ರೀ ದೇವರ ಆರ್ಶೀವಾದ ಪಡೆದು ಪುನೀತರಾದರು.ಸೋಮವಾರಪೇಟೆ: ತಾಲೂಕಿನ ಕುಮಾರಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ಭದ್ರಕಾಳಿ ದೇವಿಯ ಪ್ರಧಾನ ಶಿಲಾ ಪ್ರತಿಮೆ ಪ್ರತಿಷ್ಠಾಪನೆ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಹೆದ್ದೇವರ ಗುಡಿಯಲ್ಲಿ ಗಣಪತಿ ಪ್ರಾರ್ಥನೆಯೊಂದಿಗೆ ಶ್ರೀ ಸಬ್ಬಮ್ಮ ಬನದಲ್ಲಿ ವಿವಿಧ ಹೋಮಗಳು ನೆರವೇರಿದವು. ನಂತರ ಪ್ರಸಾದ ವಿತರಿಸಲಾಯಿತು.
ಹೆದ್ದೇವರ ಗುಡಿಯಿಂದ, ಸಬ್ಬಮ್ಮ ಸುಗ್ಗಿ ಬನದವರೆಗೆ ೧೬೦ ಕಳಸಗಳನ್ನು ಹೊತ್ತ ಗ್ರಾಮದ ಮಹಿಳೆಯರು ಮೆರವಣಿಗೆ ನಡೆಸಿದರು. ಶ್ರೀ ಸಬ್ಬಮ್ಮ ದೇವಿ ಶಿಲೆಗೆ ಕ್ಷೀರ, ಪಂಚಾಮೃತ, ಎಳನೀರು ಅಭಿಷೇಕ ಮಾಡಲಾಯಿತು. ಗ್ರಾಮದ ಸಮೃದ್ಧಿ, ಮಳೆಗಾಗಿ ಗ್ರಾಮಸ್ಥರು ಸಾಮೂಹಿಕ ಪೂಜೆ ನಡೆಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಾರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಯು.ಕೆ.ದೇಶರಾಜು, ಹಗ್ಗಡಮನೆ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ತಮ್ಮಯ್ಯ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಉದ್ಯಮಿ ಹರಪಳ್ಳಿ ರವೀಂದ್ರ, ನಿವೃತ್ತ ಇಂಜಿನಿಯರ್ ಜಯರಾಮ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಗ್ರಾಮಸ್ಥರು ದೇವಿಯ ಶಿಲಾ ಪ್ರತಿಮೆಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.ಕೂಡಿಗೆ: ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ಶ್ರೀ ಮಂಟಿಗಮ್ಮನವರ ಉತ್ಸವ ಮತ್ತು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವದ ತೆಪ್ಪೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ತೆಪ್ಪೋತ್ಸವದ ಅಂಗವಾಗಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಅರ್ಚಕ ಗಣೇಶ ಅವರ ತಂಡದವರಿAದ ನೆರವೇರಿತು.
ನಂತರ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಶ್ರೀ ಉಮಾಮಹೇಶ್ವರ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ, ನಂತರ ಮೂಡಲಕೊಪ್ಪಲು, ನಲ್ಲೂರು, ಸಾಲುಕೊಪ್ಪಲು, ಶಿರಂಗಾಲ ಗೇಟ್, ಮಣಜೂರು ಗ್ರಾಮದಲ್ಲಿ ಮೆರವಣಿಗೆ ಸಾಗಿ ಬಂದ ನಂತರ ಪವಿತ್ರ ಕಾವೇರಿ ನದಿಯಲ್ಲಿ ಶ್ರೀ ಸ್ವಾಮಿಗೆ ಗಂಗಾ ಸ್ನಾನ ಮೂಲಕ ತೆಪ್ಪೋತ್ಸವ ನಡೆಸಲಾಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್. ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಎಸ್.ಜೆ. ಉಮೇಶ್, ಕಾರ್ಯದರ್ಶಿ ಎಂ.ಎಸ್. ಗಣೇಶ್, ಕಟ್ಟಡ ಸಮಿತಿ ಗೌರವ ಅಧ್ಯಕ್ಷ ಎಸ್.ಆರ್. ಕಾಳಿಂಗಪ್ಪ, ಅಧ್ಯಕ್ಷ ಎಸ್.ಕೆ. ಪ್ರಸನ್ನ, ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ, ಸಮಿತಿಯ ಸದಸ್ಯರುಗಳಾದ ಎಸ್.ಎ. ಶ್ರೀನಿವಾಸ್, ಸಿ.ಎನ್. ಲೋಕೇಶ್, ಎಸ್.ಪಿ.ಚೇತನ, ಎಸ್.ವಿ. ಧನೇಂದ್ರ ಕುಮಾರ್, ಎಸ್.ಎ. ಯೋಗೇಶ್ ಸೇರಿದಂತೆ ಸಮಿತಿಯ ನಿರ್ದೇಶಕರು ಗ್ರಾಮಸ್ಥರು, ಸಾರ್ವಜನಿಕರು ಹಾಜರಿದ್ದರು.ವೀರಾಜಪೇಟೆ: ಮೀನುಪೇಟೆಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ ೮೧ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವು ೩ ದಿನಗಳ ಕಾಲ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಯಿತು.
ತಾ. ೧೮ ರಂದು ಗಣಪತಿ ಹೋಮ, ಬಳಿಕ ಧ್ವಜಾರೋಹಣ, ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಿತು. ಬುಧವಾರ ದೇವರ ಮಲೆ ಇಳಿಸುವುದು, ಶ್ರೀ ಮುತ್ತಪ್ಪ ವೆಳ್ಳಾಟಂ, ತೆಲುಗರ ಬೀದಿಯಿಂದ ಮೊದ ಕಲಶದೊಂದಿಗೆ ತಾಲಪೊಲಿ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ವಿವಿಧ ಚಂಡೆ ಮೇಳ, ವಾದ್ಯ ಗೋಷ್ಠಿಯೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಲಾಯಿತು.
ಪಂಜರಪೇಟೆ ಮುತ್ತಪ್ಪ ಸೇವಾ ಸಮಿತಿ ಹಾಗೂ ಕಲ್ಲುಬಾಣೆ ಮುತ್ತಪ್ಪ ಸೇವಾ ಸಮಿತಿ ಸದಸ್ಯರುಗಳು ಕಲಶ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಬಳಿಕ ಮುತ್ತಪ್ಪ ದೇವಾಲಯದಲ್ಲಿ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣು ಮೂರ್ತಿ ವೆಳ್ಳಾಟಂ ನಡೆಯಿತು.
ಗುರುವಾರ ಪ್ರಾತಃಕಾಲ ೧ ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, ೪ ಗಂಟೆಗೆ ತಿರುವಪ್ಪನ ತೆರೆ, ಭಗವತಿ ತೆರೆ, ವಸೂರಿಮಾಲ, ವಿಷ್ಣುಮೂರ್ತಿ ತೆರೆ ನಡೆಯಿತು.
ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ೩ ಗಂಟೆಗೆ ವಿಷ್ಣು ಮೂರ್ತಿ ವಾರಣದೊಂದಿಗೆ ೨೦೨೫ ಸಾಲಿನ ಶ್ರೀ ಮುತ್ತಪ್ಪ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಇದೇ ಸಂದರ್ಭ ಕುಮಾರಿ ನಂದನ ಕಳೆದ ವರ್ಷ ತೆರೆ ಮಹೋತ್ಸವಕ್ಕೆ ಆಗಮಿಸಿದ್ದ ಸಂದರ್ಭ ವಸೂರಿಮಾಲಾ ದೇವರ ಚಿತ್ರವನ್ನು ಬಿಡಿಸುವಂತೆ ತೆರೆ ಹೇಳಿದ ಹಿನ್ನೆಲೆ ಈ ಬಾರಿ ವಸೂರಿಮಾಲಾ ದೇವರ ಚಿತ್ರವನ್ನು ಬಿಡಿಸಿ ತೆರೆ ಮಹೋತ್ಸವದ ವೇಳೆ ಅದನ್ನು ದೇವರಿಗೆ ಸಮರ್ಪಿಸಿದರು.ಉಮಾಮಹೇಶ್ವರ ವಾರ್ಷಿಕ ವಿಶೇಷ ಪೂಜೆ
ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮ ಏ. ೭ ರಂದು ದೇವಾಲಯ ಆವರಣದಲ್ಲಿ ನಡೆಯಲಿದೆ.
ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರ ಉಪ ದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ, ಇತ್ಯಾದಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂರ್ತಪಣೆ ನಡೆಯುವುದು.
೪ ಗಂಟೆಗೆ ವಾರ್ಷಿಕ ವರದಿ, ನಂತರ ೨೦೨೫-೨೬ನೇ ಸಾಲಿನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ ಸೂಚನಾ ಸಭೆ ನಡೆಯುವುದು. ರಾತ್ರಿ ೭ ಗಂಟೆಗೆ ದೀಪಾಲಂಕಾರ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ ತಿಳಿಸಿದ್ದಾರೆ.ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಕುಂದ ಈಚೂರು ಗ್ರಾಮದ ಕುಂದ ಬೆಟ್ಟ ತಪ್ಪಲಿನ ಪ್ರದೇಶದ ತಲೆಬಲೇಶ್ವರ ಬನ ನೆಲೆನಿಂತಿದ್ದು ತಾ. ೨೫ ರಂದು ವಿಶೇಷ ಪೂಜೆ ಉತ್ಸವ ಕಾರ್ಯಗಳು ಜರುಗಲಿದೆ. ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್ ಅವರ ಜಾಗದಲ್ಲಿ ಪಾಂಡವರ ಕಾಲದ ಶಿವಲಿಂಗ ಮರು ಪ್ರತಿಷ್ಠಾಪನೆ ಮಾಡಲಾಗಿದ್ದು ವರ್ಷ ಕಳೆದಿದೆ. ಕಲಿಯಾಟಜ್ಜಪ್ಪ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. ಗ್ರಾಮಸ್ಥರು ಹಾಗೂ ಗುಮ್ಮಟ್ಟಿರ ಕುಟುಂಬಸ್ಥರ ಸಮ್ಮುಖದಲ್ಲಿ ಪೂಜಾ ಕಾರ್ಯ ನಡೆಯಲಿದೆ.
ಕಳೆದ ಒಂದು ವರ್ಷದ ಹಿಂದೆ ಈ ಸ್ಥಳಗಳಲ್ಲಿ ಬೆಳೆದು ನಿಂತಿದ್ದ ಬೃಹತ್ ಮರದ ಬುಡದಲ್ಲಿ ಸುಮಾರು ೮೦೦ ವರ್ಷ ಇತಿಹಾಸÀವುಳ್ಳ ಪಾಂಡವರ ಕಾಲದ ಎನ್ನಲಾದ ೪ ಅಡಿ ಎತ್ತರದ ಶಿವಲಿಂಗವೊAದು ಗೋಚರವಾಗುವ ಮೂಲಕ ಗ್ರಾಮದ ಸುತ್ತಮುತ್ತಲಿನ ಜನತೆಯಲ್ಲಿ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಶಿವಲಿಂಗದೊAದಿಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆ, ಸೋಮಸೂತ್ರ, ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತ್ತಿದ್ದವು. ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದ ತಪ್ಪಲಿನಲ್ಲಿ ಈ ಶಿವಲಿಂಗ ಪತ್ತೆಯಾಗಿತ್ತು. ಪಾಂಡವರು ಈ ಭಾಗದಲ್ಲಿ ಸಂಚರಿಸುವ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ದ್ಯೋತಕವಾಗಿ ಈ ಶಿವಲಿಂಗ ಪತ್ತೆಯಾಗಿದೆ ಎಂದು ಕಾರ್ಕಳದ ಹೆಸರಾಂತ ಶಿಲ್ಪಿಗಳಾದ ಶಿವಕುಮಾರ್ ಮಾಹಿತಿ ಒದಗಿಸಿದ್ದರು.
ಇದೇ ಸ್ಥಳದಲ್ಲಿ ಸುಂದರ ಪರಿಸರದ ನಡುವೆ ಇದೀಗ ಶಿವನ ಲಿಂಗವನ್ನು ಮರು ಪ್ರತಿಷ್ಠಾಪಿಸುವ ಮೂಲಕ ಸಾರ್ವಜನಿಕರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಹಾಗೂ ಭಕ್ತಾದಿಗಳ ಓಡಾಟಕ್ಕೆ ಅನುಕೂಲವಾಗುವಂತೆ ನೂತನ ರಸ್ತೆ ಮಾರ್ಗವನ್ನು ಗುಮ್ಮಟ್ಟಿರ ಕುಟುಂಬದವರು ಒದಗಿಸಿದ್ದಾರೆ. ಈ ದೇವಾಲಯ ಸ್ಥಳಕ್ಕೆ ಇದೀಗ ವಾಹನದ ಮೂಲಕವೇ ತಲೆಬಲೇಶ್ವರ ಬನಕ್ಕೆ ತೆರಳಬಹುದಾಗಿದೆ.
ಗೋಣಿಕೊಪ್ಪಲುವಿನ ಉದ್ಯಮಿ, ಕುಂದ ಗ್ರಾಮದಲ್ಲಿ ನೆಲೆಸಿರುವ ದಿ. ಸೋಮಯ್ಯ ಅವರ ಪುತ್ರರಾದ ಗುಮ್ಮಟ್ಟಿರ ಕಿಲನ್ ಗಣಪತಿ ಹಾಗೂ ದರ್ಶನ್ ಗಣಪತಿ ಇವರಿಗೆ ಸೇರಿದ ಕಾಫಿ ತೋಟದ ಗೋಳಿಮರದ ಅಡಿಯಲ್ಲಿ ೪ ಅಡಿ ಎತ್ತರದ ೩ ಅಡಿ ಅಗಲದ ಪುರಾತನ ಕಾಲದ ಈ ಬೃಹತ್ ಶಿವಲಿಂಗವು ಪತ್ತೆಯಾಗಿತ್ತು.
ಶಿವಲಿಂಗವು ಪತ್ತೆಯಾದ ಹಿನ್ನಲೆಯಲ್ಲಿ ಗುಮ್ಮಟ್ಟಿರ ಕುಟುಂಬದ ಹಿರಿಯರು ಸೇರಿದಂತೆ ಮನೆಯವರೆಲ್ಲರೂ ಒಟ್ಟಾಗಿ ಸೇರಿ ಮಣ್ಣಿನಡಿಯಲ್ಲಿದ್ದ ಶಿವಲಿಂಗವನ್ನು ಹೊರ ತೆಗೆಯಲು ಶಾಸ್ತೊçÃಕ್ತವಾಗಿ ಪೂಜೆ ಸಲ್ಲಿಸಿ, ಕಲ್ಯಾಟಂಡ ಅಜ್ಜಪ್ಪನವರ ಮಾರ್ಗದರ್ಶನದಲ್ಲಿ ಅವರ ನುಡಿಯಂತೆ ಶಿವನ ಲಿಂಗವನ್ನು ಹೊರ ತೆಗೆಯುವ ಕಾರ್ಯ ಕೈಗೊಳ್ಳಲಾಗಿತ್ತು.
ಈ ಪುಣ್ಯ ಕ್ಷೇತ್ರಕ್ಕೆ ಭಕ್ತಾದಿಗಳು ದಿನನಿತ್ಯ ಆಗಮಿಸುತ್ತಿದ್ದಾರೆ. ಈ ಕ್ಷೇತ್ರವು ಕುಂದ ಬೆಟ್ಟದ ತಪ್ಪಲಿನಲ್ಲಿದ್ದು ಸುಂದರವಾದ ಶಿವನ ಲಿಂಗವನ್ನು ಸಮೀಪದಿಂದ ವೀಕ್ಷಿಸಬಹುದಾಗಿದೆ. ಸುತ್ತಲೂ ಹಸುರಿನ ವಾತಾವರಣದ ನಡುವೆ ಈ ಬನವು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಕಾರ್ಯಕ್ರಮಗಳ ವಿವರ
ತಾ. ೨೫ ರಂದು ಬೆಳಿಗ್ಗೆ ೭ ಗಂಟೆಗೆ ಮಹಾ ಗಣಪತಿ ಹೋಮ. ೯.೩೦ ಗಂಟೆಗೆ ಪಂಚವಿAಷತೆ ಕಲಶ ಪೂಜೆ, ಕಲಶಾಭಿಷೇಕ ೧೧.೨೦ ಗಂಟೆಗೆ ಸಾಮೂಹಿಕ ರುದ್ರಾಭಿಷೇಕ, ೧೨ ಗಂಟೆಗೆ ಮಹಾಪೂಜೆ ೧ ಗಂಟೆಗೆ ಮತ್ರಾಂಕ್ಷತೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.