ಪೊನ್ನAಪೇಟೆ, ಮಾ. ೨೨: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ವೀರಾಜಪೇಟೆಯ ಖಲೀಲ್ (೪೨) ಎಂಬವನೇ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿ ಯಾಗಿದ್ದು, ಈತನಿಂದ ಗಾಂಜಾ ಮಾರಾಟಕ್ಕೆ ಬಳಸಿದ್ದ ಮಾರುತಿ ಓಮಿನಿ ಕಾರನ್ನು (ಕೆ. ಎ.೦೫, ಎಂಜಿ. ೨೫೭೮) ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾAಜಾ ಸೇವನೆ ಮಾಡಿದ್ದವರ ಬಂಧನ
ತಾ. ೨೧ ರಂದು ಪೊನ್ನಂಪೇಟೆ ಕುಂದ ರಸ್ತೆಯಲ್ಲಿ ಗಾಂಜಾ ಸೇವಿಸಿ ಓಡಾಡುತಿದ್ದ ಪೊನ್ನಂಪೇಟೆ ಟಿ. ಅರ್. ರಸ್ತೆಯ ಪಿ. ಅರ್. ನವೀನ್ (೨೭), ಕಾವೇರಿ ನಗರದ ವಿ. ಬಿ. ಶ್ರೀಹರಿ(೨೦) ಹಾಗೂ ಕಾಟ್ರಕೊಲ್ಲಿಯ ಶರಣು (೪೧) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕೊಡಗು ಎಸ್.ಪಿ ರಾಮರಾಜನ್ ಮತ್ತು ಅಡಿಷನಲ್ ಎಸ್‌ಪಿ ಸುಂದರ್‌ರಾಜ್ ಅವರ ನಿರ್ದೇಶನದ ಮೇರೆಗೆ, ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ಮಹೇಶ್‌ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್
ಮಾರ್ಗದರ್ಶನದಲ್ಲಿ ಪೊನ್ನಂ ಪೇಟೆ ಠಾಣಾಧಿಕಾರಿ ನವೀನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಸಿಬ್ಬಂದಿಗ ಳಾದ ಮಹದೇಶ್ವರ ಸ್ವಾಮಿ ಎಸ್.ಬಿ, ಮಂಜುನಾಥ್, ಬಸವರಾಜು, ಪ್ರಸನ್ನ, ದಯಾನಂದ ಕಂಬಳಿ, ಮುತ್ತುರಾಜು, ಹರೀಶ್, ಪ್ರವೀಣ ಹೆಚ್.ಪಿ, ಸಂತೋಷ್ ದೊಡ್ಡ ಮನಿ, ಬಾಳಪ್ಪ ಇನ್ನಿತರರಿದ್ದರು.