ಮಡಿಕೇರಿ, ಮಾ. ೧೮: ಫ್ರೆಂಡ್ಸ್ ಹುಲಿತಾಳ ವತಿಯಿಂದ ಪ್ರಥಮ ವರ್ಷದ ಹುಳಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ತಾ. ೨೧,೨೨,೨೩, ರಂದು ಮಡಿಕೇರಿಯ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಒಟ್ಟು ಹತ್ತು ತಂಡಗಳು ಪಾಲ್ಗೊಳ್ಳಲಿದ್ದು, ಟೀಮ್ ಶೀಲ್ಡ್ ಮೇಕೇರಿ, ಟೀಮ್ ವಿರಾಟ್ಸ್ ಮಡಿಕೇರಿ, ಟೀಮ್ ಲೂಸರ್ಸ್ ಕಡಗದಾಳು, ಟ್ಯಾಂಗೋ ಬಾಯ್ಸ್ ಕಾಂತೂರು, ಟೀಮ್ ರೈಡರ್ಸ್ ಮರಗೋಡು, ಪ್ರವೀತ್ ಕ್ರಿಕೆಟರ್ಸ್ ಮರಗೋಡು, ಟೀಮ್ ಎಂ.ಎಸ್.ಡಿ ಅರೆಕಾಡು, ಟೀಮ್ ಕಾರ್ಣಿಕ ಕೊಡಗು, ಕಿಂಗ್ಸ್ ಎಲೆವೆನ್ ಕಡಗದಾಳು, ಶ್ರೀ ಕುಶಾನಿ ಕ್ರಿಕೆಟರ್ಸ್ ಹುಲಿತಾಳ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ.
ವಿಜೇತ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೫೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನವಾಗಿ ರೂ. ೧೦,೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ಚತುರ್ಥ ಬಹುಮಾನವಾಗಿ ರೂ. ೫೦೦೦ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ಕ್ರೀಡಾಪಟುಗಳಿಗೆ ವೈಯಕ್ತಿಕ ಬಹುಮಾನಗಳು ನೀಡಲಾಗುತ್ತದೆ. ಮರಗೋಡು, ಅರೆಕಾಡು, ಹೊಸ್ಕೇರಿ, ಕಡಗದಾಳು, ಕತ್ತಲೆಕಾಡು, ಹಾಕತ್ತೂರು, ಕಾಂಡನಕೊಲ್ಲಿ, ನೀರುಕೊಲ್ಲಿ, ಕಾಂತೂರು, ಮೂರ್ನಾಡು ಮೇಕೇರಿ ವ್ಯಾಪ್ತಿಗೆ ಒಳಪಡುವ ಆಟಗಾರರು ಭಾಗವಹಿಸಲಿದ್ದಾರೆ.
ಆಯೋಜಕರು ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಆಯೋಜಕರಾದ ದೀಪಕ್, ಗೌತಮ್, ಶಶಿ, ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.