ಮಡಿಕೇರಿ, ಮಾ.೧೮: ತಾಲೂಕಿನ ಪಹಣಿಯಲ್ಲಿ ಕಂದಾಯ ನಿಗದಿಯಾಗದ ಜಮೀನುಗಳಿಗೆ ಕಂದಾಯ ನಿಗದಿಗೊಳಿಸುವ ಸಲುವಾಗಿ ಪ್ರಾಯೋಗಿಕ ಗ್ರಾಮವನ್ನಾಗಿ ಆಯ್ಕೆ ಮಾಡುವ ಕುರಿತು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ತಹಶೀಲ್ದಾರ್ ಮಡಿಕೇರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮವನ್ನು ಪಹಣಿಯಲ್ಲಿ ಕಂದಾಯ ನಿಗದಿಗೊಳಿಸುವ ಸಲುವಾಗಿ ಪ್ರಾಯೋಗಿಕ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ. ಈ ಗ್ರಾಮಕ್ಕೆ ಸಂಬAಧಿಸಿದAತೆ ಗ್ರಾಮ ಆಡಳಿತ ಅಧಿಕಾರಿ ಹಾಗೂ ಸಂಬAಧಪಟ್ಟ ಭೂಮಾಪಕರು ಈಗಾಗಲೇ ತಯಾರಿಸಿರುವ ಕ್ರಿಯಾಯೋಜನೆಯಂತೆ, ಅಳತೆಕಾರ್ಯ ನಡೆಸಲು ಕ್ರಮ ಕೈಗೊಳ್ಳಲಾಗುವುದು.

ಹಾಕತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ರೈತರು ಪಹಣಿಯಲ್ಲಿ ಕಂದಾಯ ನಿಗದಿಯಾಗದೆ ಇರುವ ಸರ್ವೇ ನಂಬರ್‌ಗಳ ಪಹಣಿಯಲ್ಲಿ ಕಂದಾಯ ನಿಗದಿಗೊಳಿಸಲು ಅಳತೆ ಕಾರ್ಯನಿರ್ವಹಿಸುವ ಸಂಬAಧ ಈ ಕಾರ್ಯದ ಸದುಪಯೋಗಪಡಿಸಿಕೊಳ್ಳುವಂತೆ ಸಂಪಾಜೆ ನಾಡಕಚೇರಿಯ ಉಪತಹಶೀಲ್ದಾರರು ತಿಳಿಸಿದ್ದಾರೆ.