ಮಡಿಕೇರಿ, ಮಾ. ೧೭: ಬೈಕಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಬೈಕ್ ಸಂಪೂರ್ಣ ಜಖಂಗೊAಡಿದ್ದು ಸವಾರ ಪ್ರಾಣಾಪಾಯದಿಂದ ಪಾರದ ಘಟನೆ ಮಾಲ್ದಾರೆ ಮುಖ್ಯ ರಸ್ತೆಯಲ್ಲಿ ನಡೆದಿದೆ.
ತಟ್ಟಳ್ಳಿಯಿಂದ ಮಾಲ್ದಾರೆ ಮಾರ್ಗವಾಗಿ ವಾಲ್ನೂರು ಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಅಯ್ಯಪ್ಪ ಎಂಬವರು ಮಾಲ್ದಾರೆ- ಸಿದ್ದಾಪುರ ಮುಖ್ಯ ರಸ್ತೆಯ ಕೆರೆಯ ಬಳಿ ಕಾಡಾನೆಯೊಂದು ಕಾಫಿ ತೋಟದಿಂದ ನೇರವಾಗಿ ರಸ್ತೆಗೆ ಬಂದಿದೆ. ಆನೆಯನ್ನು ಕಂಡು ಗಾಬರಿಗೊಂಡ ಸವಾರ ಅಯ್ಯಪ್ಪ ಬೈಕನ್ನು ಹಿಂಬದಿಗೆ ತಿರುಗಿಸುವಷ್ಟರಲ್ಲಿ ಕಾಡಾನೆ ಏಕಾಏಕಿ ದಾಳಿಗೆ ಯತ್ನಿಸಿದೆ.
ತಕ್ಷಣ ಬೈಕ್ ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾದರೆ ಬೈಕ್ ಸಂಪೂರ್ಣ ಜಖಂಗೊAಡಿದೆ. ಆನೆಯ ಕಿರಿಚಾಟದ ಶಬ್ದ ಕೇಳಿ ಸಮೀಪದಲ್ಲೇ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆಯನ್ನ ಕಾಡಿಗಟ್ಟಿದ್ದಾರೆ.
ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರ ನಿರ್ದೇಶನದಂತೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಹಂಸ, ಶಶಿ, ಅರಣ್ಯ ರಕ್ಷಕರುಗಳಾದ ಸಂಪತ್ ಕುಮಾರ್, ತಿಮಣ್ಣ, ಆರ್ ಆರ್ ಟಿ ಸಿಬ್ಬಂದಿಗಳಾದ ರಾಜಪ್ಪ, ಚೇತನ್, ಶಶಿ ಸೇರಿದಂತೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬೈಕ್ ಸವಾರ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದು, ಒಂದು ವರ್ಷಗಳ ಹಿಂದೆ ಹೂಸ ಬೈಕ್ ಖರೀದಿ ಮಾಡಲಾಗಿತ್ತು ಕಾಡಾನೆ ದಾಳಿಯಿಂದ ಸಂಪೂರ್ಣ ಜಖಂಗೊAಡಿದ್ದು ಅಂದಾಜು ೭೦ಸಾವಿರ ದಷ್ಟು ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಾಡಾನೆ ದಾಳಿಯಿಂದ ಬೈಕ್ ಜಖಂಗೊAಡ ಸ್ಥಳಕ್ಕೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆದಿವಾಸಿ ಮುಖಂಡ ಜೆ ಕೆ ಅಪ್ಪಾಜಿ ಭೇಟಿ ನೀಡಿ ನಂತರ ಮಾತನಾಡಿ, ಶಾಶ್ವತವಾಗಿ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.