ವೀರಾಜಪೇಟೆ, ಮಾ. ೧೭: ವೀರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯಲ್ಲಿರುವ ಕಸವಿಲೇವಾರಿ ಘಟಕದಲ್ಲಿ ಇತ್ತಿಚೆಗೆ ಬೆಂಕಿ ಅವಘಡ ಸಂಭವಿಸಿ ವ್ಯಾಪಕವಾಗಿ ಬೆಂಕಿ ಹರಡಿ ತ್ಯಾಜ್ಯಗಳು ಸುಟ್ಟು ಹೋಗಿದ್ದು ಇದೀಗ ತ್ಯಾಜ್ಯಗಳ ರಾಶಿಯಲ್ಲಿ ಮುಂದುವರಿದ ದಟ್ಟ ಹೊಗೆ ಹಾಗೂ ದುರ್ನಾಥ ಬೀರುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ವೀರಾಜಪೇಟೆಯಿಂದ ಕಸ ತುಂಬಿಸಿಕೊAಡು ಆರ್ಜಿ ಗ್ರಾಮದಲ್ಲಿರುವ ಕಸವಿಲೇವಾರಿ ಘಟಕಕ್ಕೆ ವಾಹನ ತೆರಳುತ್ತಿದ್ದ ಸಂದರ್ಭ ಪೆರುಂಬಾಡಿಯಲ್ಲಿ ವೀರಾಜಪೇಟೆ ಪುರಸಭೆಯ ಕಸ ಸಾಗಿಸುವ ಟ್ರಾö್ಯಕ್ಟರ್ ತಡೆಯೊಡ್ಡಿ ಪೆರುಂಬಾಡಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ತಕ್ಷಣ ಪುರಸಭೆ ಅಧ್ಯಕ್ಷೆ ಎಂ.ಕೆ. ದೇಚಮ್ಮ ಅವರಿಗೆ ಕರೆ ಮಾಡಿ ತಿಳಿಸಿದಾಗ ಅದ್ಯಕ್ಷರು ಕೇವಲ ಹತ್ತು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ, ಅಲ್ಲಿಯವರೆಗೆ ಸಮಯಾವಕಾಶ ಕೋರಿದರು. ಅಧ್ಯಕ್ಷೆ ದೇಚಮ್ಮ ಭರವಸೆ ಹಿನ್ನೆಲೆ ಪ್ರತಿಭಟನೆ ನಿಲ್ಲಿಸಿದ ಸ್ಥಳೀಯ ನಿವಾಸಿಗಳು ಹತ್ತು ದಿನಗಳಲ್ಲಿ ಸಮಸ್ಯೆಯನ್ನು ಬಗೆ ಹರಿಸಬೇಕು, ಅಲ್ಲದೇ ಕಸವಿಲೇವಾರಿ ಘಟಕದಲ್ಲಿ ಅಗ್ನಿ ಅನಾಹುತ ನಡೆಯಲು ಯಾರು ಕಾರಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಇದ್ದ ಮುಖ್ಯಾಧಿಕಾರಿ ಶ್ರೀಧರ್ ಅವರು ಕಸವಿಲೇವಾರಿ ಘಟಕದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಸುತ್ತಮುತ್ತ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಮತ್ತು ಅಲ್ಲಿಗೆ ಕಸ ತುಂಬಿಕೊAಡು ಬರುವ ವಾಹನಗಳ ಮಾಹಿತಿ, ಅಲ್ಲಿರುವ ಭದ್ರತಾ ಸಿಬ್ಬಂದಿಯ ಬಳಿ ಪುಸ್ತಕದಲ್ಲಿ ವಾಹನಗಳ ಮಾಹಿತಿ ಬರೆಯಲಾಗಿತ್ತು. ಅಲ್ಲದೆ ಹೊರಗಿನಿಂದ ಕಸವನ್ನು ತಂದರೆ ಅಂತಹ ವಾಹನಗಳನ್ನು ಮರಳಿ ಕಳುಹಿಸಲಾಗುತ್ತಿತ್ತು, ಆ ಸಮಯದಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ ಇದೀಗ ಭದ್ರತಾ ಸಿಬ್ಬಂದಿ, ಕಾವಲುಗಾರರನ್ನು ನೇಮಿಸಿಲ್ಲ. ಸಿಸಿ ಕ್ಯಾಮರಾ ಕೂಡ ಉಪಯೋಗಕ್ಕೆ ಬರುತ್ತಿಲ್ಲ ಎಂದು ಪೆರುಂಬಾಡಿ ವಿದ್ಯಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಿರಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ರಜಾಕ್, ಎಚ್. ಕೊರಗ, ಆಯಿಶ, ಬುಶಿರ, ನಸ್ರಿನ್, ಲೈಲಾ, ಅಸ್ನಾ, ಶಕೀಲ, ಹರೀಶ್, ಕೋಯ, ಸಮೀನ, ಸಿಯಭ್, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.