ಸಿದ್ದಾಪುರ, ಮಾ. ೧೭: ವೀರಾಜಪೇಟೆಯ ಪಟ್ಟಣದಲ್ಲಿ ಒಂಟಿ ಸಲಗ ರಾತ್ರಿ ಸಮಯದಲ್ಲಿ ದಾಂಧಲೆ ನಡೆಸಿದ ಪರಿಣಾಮ ಪಟ್ಟಣದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವೀರಾಜಪೇಟೆಯ ಜೈನರ ಬೀದಿಯಲ್ಲಿ ರಾತ್ರಿ ಸಮಯದಲ್ಲಿ ಸಂಚರಿಸಿದ ಸಲಗವು ಪಟ್ಟಣದ ನಿವಾಸಿಗಳಾದ ಸಂಪತ್ ಜೈನ್, ಕಿಶೋರ್‌ಕುಮಾರ್ ಶೆಟ್ಟಿ. ಕೂತಂಡ ಸಚಿನ್ ಅವರ ತೋಟಗಳಿಗೆ ಲಗ್ಗೆ ಇಟ್ಟು ಕಾಫಿ ಗಿಡಗಳನ್ನು ಹಾಗೂ ಕಬ್ಬು ಬಾಳೆ ಗಿಡಗಳನ್ನು ತಿಂದು ಧ್ವಂಸಗೊಳಿಸಿದೆ. ಅಲ್ಲದೆ ನಿವೃತ ಬ್ಯಾಂಕ್ ಉದ್ಯೋಗಿ ಶ್ಯಾಮ್ ಭಟ್ ಎಂಬವರ ಆವರಣ ಗೋಡೆಯನ್ನು ಕೆಡವಿ ಹಾನಿಗೊಳಿಸಿದೆ.
ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಒಂಟಿ ಸಲಗವನ್ನು ಓಡಿಸಿದರು. - ವಾಸು