-
ಸುಂಟಿಕೊಪ್ಪ, ಮಾ.೧೬ : ಮಾದಾಪುರ ಗ್ರೇಡ್೧ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಕುಡಿಯುವ ನೀರು, ವಸತಿ ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ಅನುದಾನ ನೀಡುತ್ತಿರುವ ವಿಚಾರ ಮಾದಾಪುರ ಗ್ರಾಮ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ಮಾದಾಪುರ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಗ್ರಾಮ ಸಭೆಯು ಶ್ರೀಸಿದ್ಧಿಬುದ್ಧಿ ವಿನಾಯಕ ದೇವಾಲಯದ ಸಮೀಪದ ಸಮುದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಮರುವಂಡ ಜಾಲಿ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೆ. ೧೮ ರಂದು ಕರೆದ ಗ್ರಾಮಸಭೆಯನ್ನು ಕೆಲವರ ಗೈರು ಹಾಜರಿಯಿಂದ ಮುಂದೂಡಿದ್ದು, ತಾ.೧೨ ರಂದು ಕರೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದರು. ಜಲಜೀವನ್ ಯೋಜನೆಯಡಿ ಕಾಮಗಾರಿ ಅಪೂರ್ಣವಾಗಿದೆ. ಮಾದಾಪುರ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಕೊಪ್ಪತ್ತಂಡ ಗಣೇಶ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಧ್ಯಪ್ರವೇಶಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಸೋಮಣ್ಣ ಅವರು ಮಾದಾಪುರ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಸಮಸ್ಯೆಗೆ ಪೂರ್ಣ ವಿರಾಮ ಹಾಕಬೇಕು. ಏಪ್ರಿಲ್ ೧೫ ರ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಅಭಿಯಂತರರಾದ ವಿರೇಂದ್ರ ಅವರಿಗೆ ತಾಕೀತು ಮಾಡಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ೨೦೧೮ ರಲ್ಲಿ ಕೊಡಗಿನಲ್ಲಿ ಘಟಿಸಿದ ಜಲಪ್ರಳಯದಿಂದ ಮನೆ ಕಳಕೊಂಡವರಿಗೆ ೩೯೪ ಮನೆಗಳನ್ನು ವಿತರಿಸಲಾಗಿತ್ತು. ಆದರೆ ಅವೈಜ್ಞಾನಿಕವಾಗಿ ನಿರ್ಮಿಸಿದ ಮನೆಯಿಂದ ತಾಜ್ಯ ವಸ್ತುಗಳು ಚರಂಡಿ ಮನೆ ಸಮೀಪ ಕಟ್ಟಿ ನಿಲ್ಲುತ್ತಿದ್ದು, ದುರ್ವಾಸನೆ ಬರುತ್ತಿದೆ.
ಈ ವಿಭಾಗಕ್ಕೆ ಅನುದಾನ ಗ್ರಾಮ ಪಂಚಾಯಿತಿಯಿAದ ನೀಡಲಾಗುತ್ತಿದೆ. ಎಂದು ಮಜೀದ್, ಸೋಮಪ್ಪ, ಕೊಪ್ಪತ್ತಂಡ ಗಣೇಶ ಪ್ರಸ್ತಾಪಿಸಿದರು. ಅಧ್ಯಕ್ಷರು ಉತ್ತರಿಸಿ ಇದರಿಂದ ಇತರೆ ವಾರ್ಡಿನ ಸಮಸ್ಯೆಗೆ ಅನುದಾನದ ಕೊರತೆಯಾಗಿದೆ ಈ ಬಗ್ಗೆ ಜಿ.ಪಂ. ಇಲಾಖೆಗೆ ಲಿಖಿತ ಮಾಹಿತಿ ನೀಡಲಾಗಿದೆ ಎಂದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಕೆಲ ನಿವಾಸಿಗಳು ಸ್ಥಳಾಂತರವಾಗಿದ್ದು, ಮನೆ ಬಾಗಿಲು ಹಾಕಿದೆ ಅಲ್ಲಿನ ನಲ್ಲಿ ನೀರಿನ ಟ್ಯಾಪ್ ತೆರೆÀದು ಬಿಟ್ಟಿರುವುದರಿಂದ ಇತರೆ ನಿವಾಸಿಗಳಿಗೆ ನೀರು ತೊಂದರೆಯಾಗಿದೆ ಎಂದು ನೀರುಗಂಟಿ ಇಕಂಠಿ ಸಭೆಗೆ ಮಾಹಿತಿ ನೀಡಿದರು. ಕೃಷಿ ಇಲಾಖೆ ಅಡಿಕೆ ಗಿಡ ರೈತರಿಗೆ ನೀಡಬೇಕು ಎಂದು ಮಂಡೆಯAಡ ಗಣೇಶ, ಮಜೀದ್ ಅಧಿಕಾರಿಗೆ ಸಲಹೆಯಿತ್ತರು. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೪೦೦ ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರು ನಿವೇಶನ ರಹಿತರಾಗಿದ್ದಾರೆ. ಅವರಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸದಸ್ಯ ಸೋಮಪ್ಪ ಆಗ್ರಹಿಸಿದರು. ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು. ಅಧ್ಯಕ್ಷರ ಕಾರ್ಯಕ್ರಮದ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಿಡಿಓ ಗೂಳಪ್ಪಕೂತಿನ ಗ್ರಾ.ಪಂ.ಉಪಾಧ್ಯಕ್ಷ ಸುರೇಶ ಬಾವೆ, ಸದಸ್ಯರುಗಳಾದ ಕೆ.ಸಿ. ಶೀಲಾ, ನಿರೂಪ, ಮಾನಸ, ಕೆ.ಎ. ಲತೀಫ್, ಪಿ.ಡಿ. ಅಂತೋಣಿ, (ತಂಗಚ್ಚ), ಮನುಬಿದ್ದಪ್ಪ, ದಮಯಂತಿ, ಗೋಪಿ ಭಾಗೀರಥಿ, ಜ್ಯೋತಿ, ಲೆಕ್ಕಾಧಿಕಾರಿ ಅನಿತಾ, ಸಿಬ್ಬಂದಿಗಳಾದ ಸಿ.ಸಿ.ರವೀಂದ್ರ ಹಾಗೂ ಪ್ರೀತಿ ಉಪಸ್ಥಿತರಿದ್ದರು.