ಕುಶಾಲನಗರ, ಮಾ. ೧೬: ಕಳೆದ ೧೫ ದಿನಗಳಿಂದ ಸಮೀಪದ ಟಿಬೆಟಿಯನ್ ನಿರಾಶ್ರಿತ ಶಿಬಿರದಲ್ಲಿ ನಡೆಯುತ್ತಿದ್ದ ನೂತನ ವರ್ಷಾಚರಣೆಗೆ ಶುಕ್ರವಾರ ತೆರೆ ಬಿದ್ದಿದೆ. ಫೆಬ್ರವರಿ ೨೮ ರಿಂದ ಆರಂಭಗೊAಡ ನೂತನ ವರ್ಷಾಚರಣೆ ಹಿನ್ನೆಲೆ ಬೈಲುಕುಪ್ಪೆಯ ಶಿಬಿರಗಳಲ್ಲಿ ವಿವಿಧ ಸಂಭ್ರಮದ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭ ಗೋಲ್ಡನ್ ಟೆಂಪಲ್ ಆವರಣದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಬೃಹತ್ ಚಿತ್ರಪಟಗಳ ಅನಾವರಣ ಕಾರ್ಯ ಕ್ರಮಗಳು ನಡೆದವು. ವಿಶ್ವದಲ್ಲೇ ಅತಿ ದೊಡ್ಡ ಚಿತ್ರಪಟ ಎಂದು ಖ್ಯಾತಿ ಹೊಂದಿರುವ ಗುರು ಪದ್ಮ ಸಂಭವ ಮತ್ತು ಅಮಿತಾಯುಶ್ ಚಿತ್ರಪಟಗಳ ಪ್ರದರ್ಶನಗಳು ನಡೆದು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ವರ್ಷಾ ಚರಣೆಯ ೧೫ನೇ ದಿನವಾದ ಶುಕ್ರವಾರ ಗೋಲ್ಡನ್ ಟೆಂಪಲ್ ಆವರಣದಲ್ಲಿ ಸಾವಿರಾರು ಬೌದ್ಧ ಭಿಕ್ಷುಗಳು ಮತ್ತು ಟಿಬೇಟಿಯನ್ ನಾಗರಿಕರು ಸೇರಿ ಹಗಲು ರಾತ್ರಿ ಎನ್ನದೆ ನಿರಂತರ ೨೪ ಗಂಟೆಗಳ ಕಾಲ ವಿಶ್ವ ಶಾಂತಿಗಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭ ವಿಶೇಷ ಹೋಮ ಕಾರ್ಯಗಳು ಜರುಗಿದವು. ಶುಕ್ರವಾರ ಬೆಳಿಗ್ಗೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ಬುದ್ಧ ಅಮಿತಾಯುಶ್ ಚಿತ್ರಪಟ ಅನಾವರಣಗೊಳಿಸಿ ಸಾಂಪ್ರದಾಯಿಕ ಪೂಜೆ ನಡೆಯಿತು. ಈ ಚಿತ್ರಪಟ ವೀಕ್ಷಿಸಿದರೆ ಅಮಿತವಾದ ಆಯುಷ್ಯ ಲಭಿಸಲಿದೆ ಎನ್ನುವ ನಂಬಿಕೆಯನ್ನು ಟಿಬೆಟಿಯನ್ ನಾಗರಿಕರು ಹೊಂದಿ ದ್ದಾರೆ. ಮುಂಜಾನೆ ಏಳು ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯರು, ದೇಶವಿದೇಶಗಳ ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿ ಚಿತ್ರಪಟ ವೀಕ್ಷಣೆಗಾಗಿ ಆಗಮಿಸಿದ್ದರು.