ಕಣಿವೆ, ಮಾ. ೧೬: ಸಂಚಾರಿ ನಿಯಮಗಳ ಕಡ್ಡಾಯವಾದ ಪಾಲನೆಯ ದೃಷ್ಟಿಯಿಂದ ಕುಶಾಲನಗರ ಸಮೀಪದ ಕೊಪ್ಪದ ಕಾವೇರಿ ಪ್ರತಿಮೆ ಬಳಿಯ ರಾಷ್ಟಿçÃಯ ಹೆದ್ದಾರಿಯ ಮಧ್ಯದಲ್ಲಿ ಅಳವಡಿಸಿರುವ ಪೊಲೀಸ್ ಇಲಾಖೆಯ ಸಿಸಿ ಕ್ಯಾಮೆರಾ ದಲ್ಲಿ ಅನೇಕ ಲೋಪ ದೋಷಗಳು ಮರುಕಳಿಸು ತ್ತಿವೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಹೆಲ್ಮೆಟ್ ಧರಿಸಿ ವಾಹನ ಚಾಲಿಸುವವರಿಗೂ ಕೂಡ ೫೦೦ ರೂ.ಗಳ ದಂಡದ ರಸೀದಿ ಮೊಬೈಲ್‌ಗೆ ರವಾನೆಯಾಗುತ್ತಿದೆ. ಈಗಾಗಲೇ ಕುಶಾಲನಗರದ ಜಿತೇಂದ್ರ ಎಂಬವರಿಗೆ ಈ ಕ್ಯಾಮೆರಾದಿಂದ ಮೂರು ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆಯ ದಂಡದ ರಸೀದಿ ಬಂದಿದೆ.
ಆದರೆ ಜಿತೇಂದ್ರ ಅವರು, ನಾನು ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ್ದರೆ ಇಲಾಖೆ ಪ್ರೂಫ್ ತೋರಿಸುವವರೆಗೂ ದಂಡ ಪಾವತಿಸುವುದಿಲ್ಲ ಎಂದಿದ್ದಾರೆ.
ಇದೀಗ ಬಿ.ಟಿ. ಹೊನ್ನಪ್ಪ ಎಂಬವರಿಗೆ ಮಾರ್ಚ್ ೧೧ರ ಮಂಗಳವಾರದAದು ಇದೇ ಸಿಸಿ ಕ್ಯಾಮೆರಾದಿಂದ ೫೦೦ ರೂ.ಗಳ ದಂಡದ ರಸೀದಿ ಬಂದಿದ್ದು, ಈ ವರ್ಷದ ಅಕ್ಟೋಬರ್ ತಿಂಗಳ ಒಂದನೇ ತಾರೀಖಿನ ೨೦೨೫ ರ ಅವಧಿಯನ್ನು ತೋರಿಸುವ ದಂಡದ ರಸೀದಿ ತಪ್ಪಾಗಿ ಬಂದಿದೆ.
ಹೀಗೆ ಇಂತಹ ಅನೇಕ ಲೋಪಗಳು ಈ ಸಿಸಿ ಕ್ಯಾಮೆರಾದಲ್ಲಿ ಕಂಡುಬರುತ್ತಿದ್ದು, ಪೊಲೀಸ್ ಇಲಾಖೆ ಸಿಸಿ ಕ್ಯಾಮೆರಾವನ್ನು ಸರಿಪಡಿಸಬೇಕೆಂದು ಅನೇಕ ಗ್ರಾಹಕರು ಒತ್ತಾಯಿಸಿದ್ದಾರೆ.
ಕುಶಾಲನಗರದ ಕಡೆಯಿಂದ ಕೊಪ್ಪದ ಕಡೆ ಸಾಗುವ ಪ್ರತೀ ಬೈಕ್ ಸವಾರರು ರಸ್ತೆ ಮೇಲೆ ತೂಗಾಡುತ್ತಿರುವ ಸಿಸಿ ಕ್ಯಾಮೆರಾ ಎಂಬ ತೂಗು ಕತ್ತಿಗೆ ಹೆದರಿ ಕಾವೇರಿ ಸೇತುವೆ ಮೇಲೆ ಸಂಚರಿಸುವಾಗ ತಲೆ ಮೇಲೆ ಹೆಲ್ಮೆಟ್ ಏರಿಸಿ ಸಾಗುತ್ತಿದ್ದಾರೆ.
ಇನ್ನೂ ಕಾರು ಚಾಲಕರು ಹಾಗೂ ಮುಂಬದಿ ಸೀಟಿನ ಸವಾರರೂ ಕೂಡ ಸಿಸಿ ಕ್ಯಾಮೆರಾಕ್ಕೆ ಹೆದರಿ ಸೀಟ್ ಬೆಲ್ಟ್ ಧರಿಸಿಯೇ ಇಲ್ಲಿ ಸಾಗುವಂತಹ ಜಾಗೃತಿಯಂತೂ ಮೂಡಿದೆ. ಆದರೆ ಸಂಚಾರಿ ನಿಯಮಗಳನ್ನು ಪಾಲಿಸುವವರಿಗೆ ದಂಡದ ರದೀದಿ ಬರುತ್ತಿರುವುದು ಸಿಸಿ ಕ್ಯಾಮೆರಾದ ಬಗ್ಗೆ ಸಂಶಯ ಉಂಟಾಗುತ್ತಿದೆ.
ಈ ಬಗ್ಗೆ ಸಂಬAಧಪಟ್ಟವರು ಪುನರ್ ಪರಿಶೀಲಿಸುವ ಅಗತ್ಯವಿದೆ.