ಸೋಮವಾರಪೇಟೆ, ಮಾ. ೧೬: ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ದಲ್ಲಿರುವ ಶ್ರೀ ಕುಮಾರಲಿಂಗೇಶ್ವರ ದೇವರ ನೆಲೆ ಶಾಂತಳ್ಳಿಯಲ್ಲಿ ಕಳೆದ ೧೦೦ ವರ್ಷಗಳ ಹಿಂದೆ ನಿರ್ಮಾಣ ಗೊಂಡಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತ ಮಾನೋತ್ಸವದ ಸಂಭ್ರಮದಲ್ಲಿದೆ.

ಕೃಷಿ ಪ್ರಧಾನ ಗ್ರಾಮವಾಗಿರುವ ಶಾಂತಳ್ಳಿಯು ಹಲವು ವೈಶಿಷ್ಟö್ಯ ಗಳನ್ನು ಹೊಂದಿರುವ ಪ್ರದೇಶ ವಾಗಿದ್ದು, ಇಂತಹ ಸ್ಥಳದಲ್ಲಿ ಕಳೆದ ೧೦೦ ವರ್ಷಗಳ ಹಿಂದೆ ಸ್ಥಾಪನೆ ಯಾಗಿ ಸಾವಿರಾರು ಮಂದಿಯ ಜ್ಞಾನಾರ್ಜನೆಗೆ ನೆರಳಾಗಿರುವ ಸರ್ಕಾರಿ ಶಾಲೆಯು ಇದೀಗ ಶತಮಾನೋತ್ಸವ ಆಚರಿಸಿ ಕೊಳ್ಳುತ್ತಿದ್ದು, ಏಪ್ರಿಲ್ ೪ ರಿಂದ ೬ ರವರೆಗೆ ವೈವಿಧ್ಯಮಯ ಕಾರ್ಯ ಕ್ರಮಗಳು ಆಯೋಜನೆಗೊಂಡಿವೆ.

ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವ ಪ್ರಸ್ತುತ ಸನ್ನಿವೇಶದಲ್ಲಿ, ಶಾಂತಳ್ಳಿ ಹೋಬಳಿ ಕೇಂದ್ರದಲ್ಲಿರುವ ಈ ಶಾಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊAದಿಗೆ ಶತಮಾನೋತ್ಸವ ಆಯೋಜನೆ ಗೊಂಡಿದ್ದು, ಇದೇ ಸಂದರ್ಭ ಶಾಲೆಯ ಭವಿಷ್ಯತ್ತಿನ ಬಗ್ಗೆಯೂ ದೃಢ ನಿರ್ಧಾರಗಳು ಹೊರಬರಲಿವೆ.

ಸ್ವಾತಂತ್ರö್ಯ ಪೂರ್ವದ ೧೯೨೪ ರಲ್ಲಿ ಶಾಂತಳ್ಳಿಯಲ್ಲಿ ಶಾಲೆ ಆರಂಭಗೊAಡಿದೆ. ಹಿಂದೆ ೮ನೇ ತರಗತಿವರೆಗೆ ವ್ಯಾಸಂಗ ಮಾಡುವ ಅವಕಾಶವಿತ್ತು. ೧೯೬೪ ರಿಂದ ೭ನೇ ತರಗತಿಗೆ ಸೀಮಿತಗೊಂಡಿದೆ. ಆ ಸಂದರ್ಭ ಶಾಲೆಯಲ್ಲಿ ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಇದೀಗ ೨೨ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಸ್ಥಳೀಯರೇ ಆಗಿರುವ ಎಸ್.ಜಿ. ಮೇದಪ್ಪ ಅವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊAದಿಗೆ ಶತಮಾನೋತ್ಸವ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂ ಶಿಕ್ಷಣ ಪ್ರಾರಂಭ ಮಾಡಲು ಚಿಂತನೆ ಹರಿಸಲಾಗಿದೆ. ಅದಕ್ಕಾಗಿ ಹಣ ಸಂಗ್ರಹಣೆಯೂ ನಡೆಯುತ್ತಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಾಹನದ ವ್ಯವಸ್ಥೆ ಮಾಡುವ ಚಿಂತನೆಯಿದೆ ಎಂದು ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

೧೯೨೪ರಲ್ಲಿ ಆರಂಭ: ಸ್ವಾತಂತ್ರö್ಯಕ್ಕೂ ಮುನ್ನವೇ ಶಾಂತಳ್ಳಿಯಲ್ಲಿ ಶಾಲೆ ಆರಂಭಗೊAಡಿದೆ. ೧೯೨೪ರಲ್ಲಿ ಊರಿನ ಪ್ರಮುಖರಾಗಿದ್ದ ಅಪ್ಪಯ್ಯ ಅವರ ನೇತೃತ್ವದಲ್ಲಿ ಮಾಚಯ್ಯ, ತಿಮ್ಮಯ್ಯ, ಉತ್ತಯ್ಯ ಸೇರಿದಂತೆ ಇತರ ಪ್ರಮುಖರು ಸೇರಿ ಗ್ರಾಮದಲ್ಲಿ ಶಾಲೆಯನ್ನು ಸ್ಥಾಪಿಸುವ ಚಿಂತನೆ ಹರಿಸಿದರು.

ಕೂರ್ಗ್ ಗರ‍್ನಮೆಂಟ್‌ನಲ್ಲಿ ಈ ಭಾಗದಿಂದ ಮಲ್ಲಪ್ಪ ಅವರು ಮಂತ್ರಿಗಳಾಗಿದ್ದರು. ಅವರ ಸಹಕಾರದಿಂದ ಎಂಎಲ್‌ಎ ಆಗಿದ್ದ ಹರಗದ ಮುತ್ತಣ್ಣ ಅವರ ನೇತೃತ್ವದಲ್ಲಿ ಚರ್ಚೆ ನಡೆಸಿದ ಸಂದರ್ಭ ಮಲ್ಲಪ್ಪ ಅವರು ಶಾಲೆಯ ಆರಂಭಕ್ಕೆ ಹಸಿರು ನಿಶಾನೆ ತೋರಿದರು.

ಇದರೊಂದಿಗೆ ಅಪ್ಪಯ್ಯ ಅವರು ಶಾಲೆಗೆ ಮರಮುಟ್ಟುಗಳನ್ನು ಹೊಂದಿಸುವಲ್ಲಿ ಸ್ವತಃ ಶ್ರಮಿಸಿದ್ದರು. ಅವರ ಶ್ರಮದ ಫಲವಾಗಿ ಇಂದಿಗೂ ಶಾಂತಳ್ಳಿಯಲ್ಲಿ ಶಾಲೆ ಜೀವಂತವಿದ್ದು, ಸಹಸ್ರಾರು ಮಂದಿಗೆ ಜ್ಞಾನಾರ್ಜನೆಗೆ ನೆರಳು ಒದಗಿಸಿದೆ.

ಶಾಂತಳ್ಳಿ, ಹರಗ, ತಲ್ತರೆಶೆಟ್ಟಳ್ಳಿ, ಅಭಿಮಠ ಬಾಚಳ್ಳಿ, ನಗರಳ್ಳಿ, ಕುಂದಳ್ಳಿ, ಬೆಟ್ಟದಕೊಪ್ಪ, ಕುಮಾರಳ್ಳಿ, ಹೆಗ್ಗಡಮನೆ, ನಾಡ್ನಳ್ಳಿ, ತಡ್ಡಿಕೊಪ್ಪ, ಕಂಬಳ್ಳಿ, ಕೊತ್ನಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಕುಡಿಗಾಣ, ಬೆಂಕಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದ ಬಹಳಷ್ಟು ಪ್ರಮುಖರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ೧೯೩೬ರಲ್ಲಿ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮಾಜೀ ಮುಖ್ಯಮಂತ್ರಿ ಗುಂಡೂ ರಾವ್ ಅವರ ತಂದೆ ರಾಮರಾಯ ರು ಇದೇ ಶಾಲೆಯಲ್ಲಿ ಅಧ್ಯಾಪಕ ರಾಗಿ ಕೆಲಸ ಮಾಡಿದ್ದರು.

ಇದರೊಂದಿಗೆ ‘ಶಕ್ತಿ’ ಪತ್ರಿಕೆಯ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣ, ಸೂಪರಿಂಡೆAಟ್ ಇಂಜಿನಿಯರ್ ಆಗಿದ್ದ ಮುತ್ತಣ್ಣ, ಸೀತಾರಾಮಯ್ಯ ಸೇರಿದಂತೆ ಹಲವಷ್ಟು ಸಾಧಕರು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ, ಸಮಾಜದ ಉನ್ನತ ಸ್ಥಾನವನ್ನು, ಗೌರವಾದರಗಳನ್ನು ಪಡೆದಿದ್ದಾರೆ. ಪ್ರಸ್ತುತ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆಗಿರುವ ಕೃಷ್ಣಮೂರ್ತಿ ಅವರೂ ಸಹ ಇದೇ ಶಾಲೆಯ ವಿದ್ಯಾರ್ಥಿ.

ಈ ಶಾಲೆಯಲ್ಲಿ ಓದಿದ ಹಲವಷ್ಟು ಮಂದಿ ಇಂದಿಗೂ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರ ನ್ನೆಲ್ಲಾ ಗುರುತಿಸಿ ಶತಮಾನೋತ್ಸವಕ್ಕೆ ಆಹ್ವಾನಿಸುವ ಮೂಲಕ ಹಳೆಯ ವಿದ್ಯಾರ್ಥಿಗಳ ಸಮಾಗಮಕ್ಕೂ ಶತಮಾನೋತ್ಸವ ಸಮಾರಂಭ ವೇದಿಕೆ ಸೃಷ್ಟಿಸುತ್ತಿದೆ.

ಇದೆಲ್ಲದರ ನೆನಪಿಗೆ ಶತ ಮಾನೋತ್ಸವವನ್ನು ಸ್ಮರಣೀಯ ವನ್ನಾಗಿಸಲು ಸ್ಮರಣ ಸಂಚಿಕೆಯನ್ನೂ ಹೊರತರಲಾಗುತ್ತಿದೆ. ಇದಕ್ಕೆ ಕಥೆ, ಕವನ, ಲೇಖನಗಳನ್ನು ಆಹ್ವಾನಿಸ ಲಾಗುತ್ತದೆ. ಸಮಾರಂಭದಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ೧೫೦ಕ್ಕೂ ಅಧಿಕ ಪ್ರಮುಖ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ, ಸಮಾಜಕ್ಕೆ ಪರಿಚಯ ಮಾಡಿಸಬೇಕೆಂಬ ಅಭಿಲಾಷೆಯೂ ಸಮಿತಿಯ ಸದಸ್ಯರಲ್ಲಿದೆ.

ಮೂರು ದಿನಗಳ ಕಾರ್ಯಕ್ರಮ: ಶಾಲಾ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಿತಿ ಕಾರ್ಯಯೋಜನೆ ರೂಪುಗೊಳಿಸಿದೆ. ಏ. ೪ ರಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಡಾ. ಧನಂಜಯ್ ಮೇದಪ್ಪ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜನೆ ಗೊಂಡಿದೆ. ಮಡಿಕೇರಿ ಮೆಡಿಕಲ್ ಕಾಲೇಜಿ ನಲ್ಲಿ ಎಲ್ಲಾ ವ್ಯವಸ್ಥೆಗಳಿದ್ದು, ಸ್ಥಳೀಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಹೆಚ್ಚಿನ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂಬ ಆಶಯ ದೊಂದಿಗೆ ಶಿಬಿರ ಆಯೋಜಿಸ ಲಾಗಿದೆ. ಏ. ೫ರಂದು ಹೋಬಳಿ ಮಟ್ಟದ ವಾಲಿಬಾಲ್, ಕಬಡ್ಡಿ, ತ್ರೋ ಬಾಲ್ ಪಂದ್ಯಾಟಗಳನ್ನು ಆಯೋಜಿಸ ಲಾಗಿದೆ. ಏ. ೬ ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಶಾಸಕರು, ಸಂಸದರು, ಮಾಜಿ ಮಂತ್ರಿಗಳು, ಮಾಜಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ.

ಏ. ೬ ರಂದು ಸಂಜೆ ೭ ಗಂಟೆಗೆ ಪ್ರೊ. ಕೃಷ್ಣೇಗೌಡ ಅವರಿಂದ ಹಾಸ್ಯ ರಸಸಂಜೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಮೂರು ದಿನಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಜಿ. ಮೇದಪ್ಪ ತಿಳಿಸಿದ್ದಾರೆ.

ಶತಮಾನೋತ್ಸವವನ್ನು ಯಶಸ್ವಿಗೊಳಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಕೆ.ಟಿ. ಮಧುಕುಮಾರ್, ಕ್ರೀಡಾ ಸಮಿತಿಗೆ ಎಸ್.ಆರ್. ಉತ್ತಯ್ಯ, ಆಹಾರ ಸಮಿತಿಗೆ ಕೆ.ಎಸ್. ಮನೋಹರ್, ವೇದಿಕೆ ಸಮಿತಿಗೆ ದಿವ್ಯಕುಮಾರ್, ಅಲಂಕಾರಿಕಾ ಸಮಿತಿಗೆ ಕೆ.ಕೆ. ಸುಬ್ಬಯ್ಯ, ಆರೋಗ್ಯ ಸಮಿತಿಗೆ ವಿಶಾಲಾಕ್ಷಿ, ಸ್ಮರಣ ಸಂಚಿಕೆ ಸಮಿತಿಗೆ ಕೆ.ಎಂ. ಕೃಷ್ಣಕುಮಾರ್ ಅವರುಗಳನ್ನು ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಗುರುಪ್ರಸಾದ್ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಮಿತಿಯ ಗೌರವಾಧ್ಯಕ್ಷ ಕೆ.ಸಿ. ರಾಮಚಂದ್ರ ತಿಳಿಸಿದ್ದಾರೆ.

ಒಟ್ಟಾರೆ ಶಾಂತಳ್ಳಿಯAತಹ ಗ್ರಾಮೀಣ ಭಾಗದಲ್ಲಿ, ಸ್ವಾತಂತ್ರö್ಯ ಪೂರ್ವದಲ್ಲೇ ಸ್ಥಾಪನೆಗೊಂಡು, ಸಹಸ್ರಾರು ಮಂದಿಗೆ ವಿದ್ಯಾದಾನಕ್ಕೆ ವರವಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಹೊಸ್ತಿಲಿನಲ್ಲಿದ್ದು, ಹಳೆ ವಿದ್ಯಾರ್ಥಿ ಗಳ ಸಮಾಗಮ ದೊಂದಿಗೆ ಸಂಭ್ರಮದ ಕ್ಷಣಗಳಿಗೆ ಎದುರು ನೋಡುತ್ತಿದೆ. - ವಿಜಯ್ ಹಾನಗಲ್