ಮಡಿಕೇರಿ, ಮಾ. ೧೭: ವಿದ್ಯುತ್ ಬಿಲ್ ವಿಚಾರಕ್ಕೆ ಸಂಬAಧಿಸಿದAತೆ ಕರ್ತವ್ಯದಲ್ಲಿದ್ದ ಬಿಲ್ ರೀಡರ್‌ನನ್ನು ಚೂರಿಯಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಇಲ್ಲಿನ ನ್ಯಾಯಾಲಯ ಅರೋಪಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೋಮವಾರಪೇಟೆ ತಾಲೂಕಿನ ಮಾದಾಪುರ ಬಳಿಯ ಜಂಬೂರುಬಾಣೆಯ ಎಫ್.ಎಂ.ಸಿ ಬಡಾವಣೆ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ಸುಂಟಿಕೊಪ್ಪ ಚೆಸ್ಕಾಂ ಶಾಖೆಯಲ್ಲಿ ವಿದ್ಯುತ್ ರೀಡರ್ ಆಗಿ ಕೆಲಸ ಮಾಡಿಕೊಂಡಿರುವ ಪ್ರಶಾಂತ್ ಎಂಬಾತ ಎಫ್.ಎಂ.ಸಿ ಬಡಾವಣೆಯ ವಿದ್ಯುತ್ ಬಿಲ್ ನೀಡಲು ತೆರಳಿದ್ದಾನೆ. ಕಳೆದ ತಾ. ೧೩-೦೭-೨೦೨೩ರಂದು ಎಂ. ರತೀಶ್ ಎಂಬವರಿಗೆ ರೂ. ೧೪೮೨ ಮೊತ್ತದ ಬಿಲ್ ನೀಡಿದಾಗ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರತೀಶ್ ಪ್ರಶಾಂತ್‌ನನ್ನು ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ ತನ್ನ ಬಳಿಯಿದ್ದ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿದಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದ ಪ್ರಶಾಂತ್‌ನನ್ನು ಸ್ಥಳೀಯರು ಮಾದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಈ ಬಗ್ಗೆ ಪ್ರಶಾಂತ್ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಅವರು ಕೊಲೆ ಯತ್ನ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ೧ನೇ ಅಧಿಕ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು, ಕೊಲೆ ಯತ್ನ ಹಾಗೂ ಮಾರಕಾಯುಧದಿಂದ ಗಾಯಗೊಳಿಸಿದ ಅಪರಾಧಕ್ಕಾಗಿ ತಲಾ ೧೦ ವರ್ಷಗಳ ಶಿಕ್ಷೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿಯ ಅಪರಾಧಕ್ಕಾಗಿ ೫ ವರ್ಷ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ಒಟ್ಟು ರೂ. ೨೫,೫೦೦ ದಂಡ ವಿಧಿಸಿ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ನೊಂದ ವ್ಯಕ್ತಿ ಪ್ರಶಾಂತ್‌ಗೆ ನೀಡುವಂತೆ ಹಾಗೂ ಪ್ರಶಾಂತ್ ಸೂಕ್ತ ಪರಿಹಾರ ನೀಡುವಂತೆ ಕ್ರಮಕೈಗೊಳ್ಳಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.