ಮಡಿಕೇರಿ, ಮಾ. ೧೬: ಕಳೆದ ಸಾಲಿನ ಜೂನ್‌ನಲ್ಲಿ ಬೋಯಿಂಗ್ ಸಂಸ್ಥೆಯ ಅಂತರಿಕ್ಷ ನೌಕೆಯ ಪರೀಕ್ಷಾ ಉಡಾವಣೆ ಸಂಬAಧ ಅಂತರರಾಷ್ಟಿçÃಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಮತ್ತೋರ್ವ ಗಗನಯಾತ್ರಿ ಬುಚ್ ವಿಲ್‌ಮೋರ್ ಅವರುಗಳು ತಾ.೧೯ ರಂದು ಭೂಮಿಗೆ ಮರಳಲಿದ್ದಾರೆ.

ಅಂತರಿಕ್ಷ ಕೇಂದ್ರದಿAದ ಭೂಮಿಗೆ ಹಾಗೂ ಭೂಮಿಯಿಂದ ಅಂತರಿಕ್ಷ ಕೇಂದ್ರಕ್ಕೆ ಗಗನಯಾತ್ರಿಕರನ್ನು ಕೊಂಡೊಯ್ಯುವ ನೂತನ ನೌಕೆಯ ಪರೀಕ್ಷೆಗೆಂದು ಇವರಿಬ್ಬರು ಕೇವಲ ೮ ದಿನಗಳ ಕಾಲಕ್ಕೆ ಮಾತ್ರ ತಯಾರಿ ನಡೆಸಿ ಪರೀಕ್ಷೆಗೆ ಒಳಪಟ್ಟಿದ್ದ ನೂತನ ಬೋಯಿಂಗ್ ಸಂಸ್ಥೆಯ ನೌಕೆಯಲ್ಲಿ ಕೇಂದ್ರಕ್ಕೆ ತೆರಳಿದ್ದರು. ಅದರಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ೯ ತಿಂಗಳುಗಳಾದರೂ ಆ ನೌಕೆಯಲ್ಲಿ ಭೂಮಿಗೆ ವಾಪಸ್ಸು ಬರಲಾಗಲಿಲ್ಲ.

ಇದೀಗ ಎಲಾನ್ ಮಸ್ಕ್ನ ಸ್ಪೇಸ್ ‘ಎಕ್ಸ್’ ಸಂಸ್ಥೆಯ ನೌಕೆಯಲ್ಲಿ ಅವರುಗಳು ತಾ.೧೯ ರಂದು ಭೂಮಿಗೆ ವಾಪಸ್ಸು ಬರಲಿದ್ದಾರೆ. ಈ ನೌಕೆಯು ತಾ.೧೬ ರಂದು ಅಂತರಿಕ್ಷ ಕೇಂದ್ರದೊAದಿಗೆ ಡಾಕ್ ಆಗಿದೆ (ಸೇರಿಕೊಂಡಿದೆ). ಅಂತರಿಕ್ಷ ಕೇಂದ್ರದಲ್ಲಿ ೧೯೯೮ರಿಂದ ನಿರಂತರವಾಗಿ ಗಗನಯಾತ್ರಿಕರ ಒಂದಾದರೂ ಗುಂಪು ಹಾಜರಾಗಿರುವುದರಿಂದ ಈ ನೌಕೆಯಲ್ಲಿ ೪ ಗಗನಯಾತ್ರಿಕರು ಅಂತರಿಕ್ಷ ಕೇಂದ್ರಕ್ಕೆ ತೆರಳಿದ್ದಾರೆ. ಇಲ್ಲಿ ಕೆಲ ತಿಂಗಳುಗಳ ಕಾಲ ಅವರುಗಳು ಸಂಶೋಧನೆಗಳನ್ನು ನಡೆಸಲಿದ್ದಾರೆ. ಸುನಿತಾ ಹಾಗೂ ಬುಚ್ ಅವರುಗಳು ಈ ನೌಕೆಯಲ್ಲಿ ತಾ.೧೯ ರಂದು ಭೂಮಿಗೆ ವಾಪಸ್ಸಾಗಲಿದ್ದಾರೆ. ನೌಕೆಯು ಅಮೇರಿಕಾದ ಫ್ಲೋರಿಡಾ ರಾಜ್ಯದ ಕರಾವಳಿ ಬಳಿ

(ಮೊದಲ ಪುಟದಿಂದ) ಲ್ಯಾಂಡ್ ಆಗುವ ನಿರೀಕ್ಷೆಯಿದೆ. ಸದ್ಯದ ಮಟ್ಟಿಗೆ ಅಂತರಿಕ್ಷ ಕೇಂದ್ರಕ್ಕೆ ತೆರಳಲು ರಷ್ಯಾದ ಸುಯೋಜ್ ನೌಕೆ ಹಾಗೂ ಅಮೇರಿಕಾದ ಎಲಾನ್ ಮಾಲೀಕತ್ವದ ಸ್ಪೇಸ್ ‘ಎಕ್ಸ್’ ನೌಕೆಗೆ ಮಾತ್ರ ಸಾಧ್ಯವಾಗಿದ್ದು, ಬೋಯಿಂಗ್ ಸಂಸ್ಥೆಯೂ ಈ ಕಾರ್ಯ ನಡೆಸಲು ಸುನಿತಾ-ಬುಚ್ ಅವರುಗಳ ಮೂಲಕ ಪರೀಕ್ಷೆ ನಡೆಸಿದ್ದು, ಇದು ಸದ್ಯದ ಮಟ್ಟಿಗೆ ವಿಫಲವಾಗಿದೆ.