ಸೋಮವಾರಪೇಟೆ, ಮಾ.೧೫: ಅಪ್ರಾಪ್ತ ಮಗನಿಗೆ ಚಾಲನೆಗಾಗಿ ಬೈಕ್ ನೀಡಿದ ಹಿನ್ನೆಲೆ ಪೋಷಕರಿಗೆ ನ್ಯಾಯಾಲಯ ರೂ.೨೦ ಸಾವಿರ ದಂಡ ವಿಧಿಸಿದೆ. ಪಟ್ಟಣ ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದ ರಮೇಶ್ ಎಂಬವರ ಪುತ್ರ, ಅಪ್ರಾಪ್ತ ಬಾಲಕ ಪಟ್ಟಣದಲ್ಲಿ ಬೈಕ್ ಚಲಾಯಿಸುತ್ತಿದ್ದ ಸಂದರ್ಭ ಪೊಲೀಸರು ತಡೆಯೊಡ್ಡಿ, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪ್ರಕರಣವನ್ನು ಪರಿಶೀಲಿಸಿದ ಸೋಮವಾರಪೇಟೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣರವರು, ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನವನ್ನು ಚಲಾಯಿಸಲು ನೀಡಿದ ಆರೋಪದ ಮೇರೆಗೆ ಅಪ್ರಾಪ್ತ ಬಾಲಕನ ತಂದೆ ರಮೇಶ್ ಅವರಿಗೆ ರೂ. ೨೦ ಸಾವಿರ ದಂಡ ವಿಧಿಸಿದ್ದಾರೆ.