ಮಡಿಕೇರಿ, ಮಾ. ೧೨: ಕಿಂಬರ್ಲಿ ಕೂರ್ಗ್ ವತಿಯಿಂದ ಸ್ಮಾö್ಯಷ್ ಬ್ಯಾಷ್ ಸೀಸನ್ - ೩ ಕ್ರಿಕೆಟ್ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು.

ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರು ಹಾಗೂ ಸಿಬ್ಬಂದಿಗಳಿ ಗಾಗಿ ಏರ್ಪಡಿಸಲಾಗಿದ್ದ ಕ್ರಿಕೆಟ್‌ನಲ್ಲಿ ೧೬ ತಂಡಗಳು, ಹಗ್ಗ ಜಗ್ಗಾಟದಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು. ತಾ.೧೦ ರಿಂದ ಪ್ರಾರಂಭಗೊAಡ ಪಂದ್ಯಾವಳಿಯ ಅಂತಿಮ ಪಂದ್ಯಾಟಗಳು ಇಂದು ನಡೆದವು. ಕ್ರಿಕೆಟ್‌ನಲ್ಲಿ ವೀರಾಜಪೇಟೆ ಕ್ಲಬ್ ಮಹೀಂದ್ರ ತಂಡ ಪ್ರಥಮ, ಗಾಳಿಬೀಡು ವಿಶ್ಮಾ ರೆಸಾರ್ಟ್ ತಂಡ ದ್ವಿತೀಯ, ಕೂರ್ಗ್ ಗವಧನ್ ತೃತೀಯ, ಹಗ್ಗಜಗ್ಗಾಟದಲ್ಲಿ ತಾಮರ ರೆಸಾರ್ಟ್ ಪ್ರಥಮ, ಹೊಟೇಲ್ ಸಮುದ್ರ ತಂಡ ದ್ವಿತೀಯ ಸ್ಥಾನ ಗಳಿಸಿತು. ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೂರ್ಗ್ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಖಜಾಂಚಿ ಅಪ್ಪಾರಂಡ ಸಾಗರ್ ಗಣಪತಿ, ಕಿಂಬರ್ಲಿ ಮಾಲೀಕ ಕೆ.ಜಿ. ಮದನ್, ಬ್ರಿಸ್ಟಲ್ ಗ್ರೂಪ್ ಮಾಲೀಕ ಅರ್ಜುನ್ ಪ್ರಭಾಕರ್, ವಿಶ್ಮಾ ರೆಸಾರ್ಟ್ ಮಾಲೀಕರಾದ ನಿತಿನ್ ನಿಖಿಲ್, ಪರ್ಪಲ್ ಪಾಮ್ಸ್ ಪ್ರಧಾನ ವ್ಯವಸ್ಥಾಪಕ ದಿನೇಶ್ ಪೂಣಚ್ಚ, ಚಾಂಪಿಯನ್ಸ್ ಕ್ಲಬ್ ನಿರ್ದೇಶಕ ಡಾ. ಶ್ರೀಕರ್, ಬೇಕ್‌ಫಿಟ್ ಮಾಲೀಕ ವಾಸ್ತವ್ ಪಾಲ್ಗೊಂಡಿದ್ದರು. ಕಿಂಬರ್ಲಿ ಕೂರ್ಗ್ನ ನಚಿಕೇತ್, ಸಚಿನ್, ವರ್ಗೀಸ್, ಸಂಗಮ್, ಧ್ರುವ, ಸುಮುಖ್, ಗಗನ್, ಪವನ್, ಸಮೀರ್ ಹಾಜರಿದ್ದರು.