ನಾಪೋಕ್ಲು, ಮಾ. ೧೨: ಇಲ್ಲಿನ ಸುತ್ತಮುತ್ತ ಗ್ರಾಮ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ವರ್ಷದ ಪ್ರಥಮ ಮಳೆಯಾಗಿದೆ.
ಎಮ್ಮೆಮಾಡು ಗ್ರಾಮದಲ್ಲಿ ೧.೧೦ ಇಂಚು ಮಳೆಯಾಗಿದೆ. ನೆಲಜಿ ಸುತ್ತಮುತ್ತ ಒಂದು ಇಂಚು, ಚೋನಕೆರೆ ೧ ಇಂಚು, ಬಲ್ಲಮಾವಟಿಯಲ್ಲಿ ೪೯ ಸೆಂಟ್, ಅಯ್ಯಂಗೇರಿ ೮ ಸೆಂಟ್, ಚೆಟ್ಟಿಮಾನಿ ೧೫ ಸೆಂಟ್, ಕೊಟ್ಟಮುಡಿ ೧೦ ಸೆಂಟ್, ಬೇತು ೬ ಸೆಂಟ್, ನಾಪೋಕ್ಲು ಪಟ್ಟಣದಲ್ಲಿ ೧೦ ಸೆಂಟ್ ಮಳೆಯಾಗಿದೆ. ಗಡಿ ಗ್ರಾಮ ಕರಿಕೆಯಲ್ಲೂ ಮೊದಲ ಮಳೆ ಸುರಿಯಿತು.