ಆರೋಗ್ಯ ತಪಾಸಣೆ ಶಿಬಿರ

ವೀರಾಜಪೇಟೆ, ಮಾ. ೧೨: ದೈನಂದಿನ ಜೀವನದಲ್ಲಿ ಚಾಲಕರು ಬಿಡುವು ಇಲ್ಲದ ಜೀವನ ಸಾಗಿಸುತ್ತಾರೆ. ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆರೋಗ್ಯ ಕಾಪಾಡಿಕೊಂಡು ಜೀವನ ನಡೆಸುವುದು ಉತ್ತಮ ಎಂದು ಮೈಸೂರು ನಾರಾಯಣ ಹೃದ ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಮ್ಮರ್ ಕಮ್ರಾನ್ ಅಭಿಪ್ರಾಯವ್ಯಕ್ತಪಡಿಸಿದರು.

ವೀರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯ ಆಟೋ ಚಾಲಕರು ಮತ್ತು ಮಾಲೀಕರ ವತಿಯಿಂದ ತೆಲುಗರ ಬೀದಿ ಕೂರ್ಗ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಉಮ್ಮರ್ ಅವರು ಇತ್ತೀಚೆಗೆ ಜನಸಾಮಾನ್ಯರಲ್ಲಿ ಹೃದಯಾ ಘಾತಗಳು ಹೆಚ್ಚಾಗಿ ಕಂಡುಬರುತ್ತಿವೆ. ಕಾರಣ ಆಹಾರ ಪದ್ಧತಿಯಲ್ಲಿ ಏರುಪೇರು, ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಭಿನ್ನತೆ, ಸಮಾಜಿಕ ಅಸಮತೋಲನ, ಕುಟುಂಬ ನಿರ್ವಹಣೆ ಒತ್ತಡ, ವ್ಯಾಯಾಮ ಮಾಡದಿರುವುದು. ಹೀಗೆ ಹಲವಾರು ಕಾರಣಗಳಿಂದ ಹೃದಯಾ ಘಾತಕ್ಕೆ ಕಾರಣವಾಗಬಹುದು.

ಪ್ರಸ್ತುತ ಬಾಲ್ಯದಿಂದ ಮುಪ್ಪಿನವರೆಗೆ ಎಲ್ಲಾ ವ್ಯಕ್ತಿಗಳು ಜೀವನ ಶೈಲಿಯಲ್ಲಿ ಬದಲಾವಣೆ ತರಬೇಕು. ನಂತರ ಆಹಾರ ಪದ್ಧತಿಯನ್ನು ಮಿತವಾಗಿ ಬಳಸಿಕೊಂಡು. ಉತ್ತಮ ಸಮತೋಲನ ಕಾಪಾಡುವುದು ಸೂಕ್ತ. ಚಾಲಕರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಮುಂದಾಗಿ ಎಂದು ಚಾಲಕರಿಗೆ ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಆರೋಗ್ಯ ಸಿಬ್ಬಂದಿ ನಿಶಾ ಮಾತನಾಡಿ, ಆರೋಗ್ಯ ಶಿಬಿರಗಳನ್ನು ಆಯೋಜಿ ಸುವುದು ಸೂಕ್ತ. ಆದರೆ ಪ್ರತಿಯೊಬ್ಬರೂ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು. ಶಿಬಿರದಲ್ಲಿ ಬಿ.ಪಿ. ಶುಗರ್, ಇ.ಸಿ.ಜಿ. ತಪಾಸಣೆ, ಹಾಗೂ ನುರಿತ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಚಾಲಕರು ಹಾಗೂ ಸಾರ್ವಜ ನಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿ ಕೊಂಡರು. ವೇದಿಕೆಯಲ್ಲಿ ಉದ್ಯಮಿ ಅಜಿತ್, ಹಿರಿಯ ಚಾಲಕರಾದ ಸತೀಶ್, ಸಿದ್ದಾಪುರ ಅಟೋ ಚಾಲಕಿ ಸುಜಾತ, ಉಪಸ್ಥಿತರಿದ್ದರು. ನಾರಾಯಣ ಹೃದ ಯಾಲಯ ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು, ದೊಡ್ಡಟ್ಟಿ ಚೌಕಿ ಆಟೋ ಚಾಲಕರು ಮತ್ತು ಮಾಲೀ ಕರ ಸಂಘದ ಚಟ್ಟಕುಟ್ಟಡ ಅನಂತ್, ಗಣೇಶ್ ಕೆ.ಬಿ. ಶರವಣ, ಸುನೀಲ್ ಲೊಬೋ, ಅಬ್ದುಲ್ ರಜಾಕ್, ಸಾಜಿ ನವೀನ್, ಮಂಜು, ಚಾಲಕರು, ಸಾರ್ವಜನಿಕರು ಹಾಜರಿದ್ದರು.