ಸೋಮವಾರಪೇಟೆ, ಮಾ. ೧೨: ಸಮೀಪದ ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಗೆಳೆಯರ ಬಳಗದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಕಪ್ ಮುಕ್ತ ಪುಟ್ಭಾಲ್ ಪಂದ್ಯಾವಳಿ ತಾ.೩೦ ಮತ್ತು ೩೧ ರಂದು ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಕೆ.ಸಿ.ಆದರ್ಶ್ ತಿಳಿಸಿದ್ದಾರೆ.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೧.೫೦ ಲಕ್ಷ ರೂ.ಗಳು, ಎರಡನೇ ಬಹುಮಾನ ೧ ಲಕ್ಷ ರೂ.ಗಳು ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ೧೧ ಆಟಗಾರರ ತಂಡದಲ್ಲಿ ೫ ಮಂದಿ ಮಾತ್ರ ವಿದೇಶಿ ಆಟಗಾರರು ಆಟವಾಡಬಹುದು. ತಾ.೨೫ರ ಸಂಜೆ ೪.೩೦ರ ವರೆಗೆ ತಂಡಗಳ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲು ನೋಂದಾಯಿಸಿಕೊAಡ ೧೬ ತಂಡಗಳಿಗೆ ಮಾತ್ರ ಅವಕಾಶ ಸಿಗಲಿದೆ. ಮಾಹಿತಿಗಾಗಿ ಮೊ.೬೩೬೨೦೫೯೧೯೮, ೯೪೮೩೦೩೦೦೨೨, ೮೭೬೨೭೩೮೦೪೨ ಸಂಪರ್ಕಿಸಬಹುದು.