ವೀರಾಜಪೇಟೆ, ಮಾ. ೧೧: ಕೆಲಸ ಅರಸಿಕೊಂಡು ಬಂದ ಅನ್ಯ ರಾಜ್ಯದ ವ್ಯಕ್ತಿಯೋರ್ವರು ಕರಿ ಮೆಣಸು ಕೊಯ್ಲು ಮಾಡುತಿದ್ದ ವೇಳೆ ಮರದಿಂದ ಬಿದ್ದು ಸಾವಿಗೀಡಾದ ಘಟನೆ ವೀರಾಜಪೇಟೆ ಹೊರ ವಲಯದ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.
ಅಸ್ಸಾಂ ರಾಜ್ಯದ ದಲ್ಗಾಂವ್ ಜಿಲ್ಲೆಯ ದರಾಂಗ್ ಧರನ್ ಪುರಿ ಗ್ರಾಮದ ನಿವಾಸಿ, ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದ ಸಜೇಶ್ ಭರತನ್ ಎಂಬವರ ತೋಟದ ಲೈನ್ಮನೆಯಲ್ಲಿ ವಾಸವಿದ್ದ ಹಸನ್ ಆಲಿ ಎಂಬವರ ಪುತ್ರ ಮನಾಫ್ ಆಲಿ (೫೧) ಮರದಿಂದ ಬಿದ್ದು ಮೃತಪಟ್ಟ ವ್ಯಕ್ತಿ.
ಸಮೀಪದ ನಾಗೇಶ್ ಎಂಬವರ ತೋಟಕ್ಕೆ ಮೆಣಸು ಕುಯ್ಯಲು ತೆರಳಿ ಮೆಣಸು ಕುಯ್ಯುತ್ತಿದ್ದ ವೇಳೆ ಆಯಾ ತಪ್ಪಿ ಮರದಿಂದ ಬಿದ್ದ ಪರಿಣಾಮ ತಲೆ ಭಾಗಕ್ಕೆ ಮಾರಣಾಂತಿಕ ಗಾಯಗಳಾಗಿ ಗಾಯಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿ ತಾದರೂ ವೈದ್ಯರು ಗಾಯಳುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ. ಮೃತನ ಮಗ ಮೋಯಿನ್ ಆಲಿ ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ