ಗೋಣಿಕೊಪ್ಪ ವರದಿ, ಮಾ. ೧೧ : ಮಾಯಮುಡಿ ಕಮಟೆ ಮಾದೇವ ನಮ್ಮೆಗೆ ಸೋಮವಾರ ಚಾಲನೆ ನೀಡಲಾಯಿತು.
ನಾಡಿನ ಭಕ್ತರು ರಾತ್ರಿ ಕೊಡಿಮರ ನಿಲ್ಲಿಸುವ ಶಾಸ್ತçದೊಂದಿಗೆ ವಿಧಿ-ವಿಧಾನ ನೆರವೇರಿಸಿದರು. ಚಂಡೆ, ವಿಶೇಷ ಪೂಜೆಯೊಂದಿಗೆ ಕಾರ್ಯ ನೆರವೇರಿತು. ತಾ. ೧೪ ರಂದು ಬಲ್ಯನಮ್ಮೆ ಜರುಗಲಿದ್ದು, ಮಹಾಪೂಜೆ, ಅನ್ನದಾನ, ಸಾಯಂಕಾಲ ೬ ಗಂಟೆಗೆ ದೇವರ ದರ್ಶನ, ದೇವರ ಅಭ್ಯಂಜನ ಸ್ನಾನ, ರಾತ್ರಿ ದೇವರ ನೃತ್ಯ, ವಸಂತ ಪೂಜೆ, ವಿಷ್ಣುಮೂರ್ತಿ, ಗುಳಿಗನಿಗೆ ಪೂಜೆ ನೆರವೇರಲಿದೆ.
ಅಲ್ಲಿಯವರೆಗೂ ಹಬ್ಬದ ಪ್ರತಿದಿನ ಮಂಗಳಾರತಿ, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಅನ್ನದಾನ, ಗುಡಿಗೆ ಸಾಮೂಹಿಕ ಅಲಂಕಾರ, ತೂಚಂಬಲಿ, ಬೊಳಕ್ ನೆರವೇರಲಿದೆ. ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವಪತ್ರಾರ್ಚನೆ, ಈಶ್ವರನಿಗೆ ಕ್ಷೀರಾಭಿಷೇಕ, ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಗುಳಿಗನಿಗೆ ಪೂಜೆ ನೆರವೇರಲಿದೆ.