ಮಡಿಕೇರಿ, ಮಾ. ೧೧ : ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪ ದೇವರ ವಾರ್ಷಿಕ ಹಬ್ಬ ತಾ. ೧೪ ರಂದು ನಡೆಯಲಿದೆ.

ಅಂದು ಕುಡುವಂಡ ಕುಟುಂಬದಿAದ ಭಂಡಾರ ಸಹಿತ ಕುಯ್ಯ, ಕುಳಿಯಕಂಡ, ಚೀಯಂಡಿರ, ಚರ್ಮಂಡ, ಚಟ್ಟಂಡ ಕುಟುಂಬಗಳಿAದಲೂ ಕುಯ್ಯ ಬನಕ್ಕೆ ಬಂದು ಬಾಳೆಹಿಟ್ಟು, ತೆಂಗಿನಕಾಯಿ ನೈವೇದ್ಯ ಸಮರ್ಪಣೆ, ಮಧ್ಯಾಹ್ನ ೧೨ ಗಂಟೆಗೆ ಊರಿನವರು, ಭಕ್ತರು ತೆಂಗಿನ ಕಾಯಿಗಳ ಎತ್ತು ಹೇರಾಟದೊಂದಿಗೆ ಬನದಲ್ಲಿ ಸೇರಿ ಭಂಡಾರ, ಕಾಣಿಕೆ, ಹರಕೆಗಳನ್ನು ಒಪ್ಪಿಸಿ, ಸಾವಿರಾರು ತೆಂಗಿನ ಕಾಯಿಗಳನ್ನು ಒಡೆದು ದೇವಿಗೆ ನೈವೇದ್ಯ ಸಮರ್ಪಣೆ ನಡೆಸಲಾಗುವುದೆಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.