ಜಿಲ್ಲೆಯಲ್ಲಿ ರಣಬಿಸಿಲು - ಹೈರಾಣಾಗುತ್ತಿರುವ ಜನತೆ

ಮಡಿಕೇರಿ, ಮಾ. ೧೦: ಸಮತೋಲನ ವಾತಾವರಣಕ್ಕೆ ಹೆಸರುವಾಸಿಯಾಗಿರುವ ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಈ ಬಾರಿ ರಣಬಿಸಿಲು ರೌದ್ರನರ್ತನ ತೋರುತ್ತಿದ್ದು, ಬೇಸಿಗೆ ಕಾವಿಗೆ ಜನರು ಕಂಗೆಟ್ಟಿದ್ದಾರೆ.

ಫೆಬ್ರವರಿಯಿಂದಲೇ ಸೂರ್ಯನ ಶಾಖ ಹೆಚ್ಚಾಗಿ ಜಿಲ್ಲೆ ಕಾದು ಕೆಂಡವಾಗುತ್ತಿದೆ. ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಬೇಸಿಗೆಯಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಗುವುದು ಸಹಜ. ಆದರೆ, ಈ ಬಾರಿ ಚಳಿಗಾಲದಿಂದಲೇ ಬೇಸಿಗೆ ವಾತಾವರಣ ಸೃಷ್ಟಿಯಾಗಿ ಹೈರಾಣು ಮಾಡಿದೆ. ಪರಿಣಾಮ ಜಲಮೂಲಗಳು ಬತ್ತಿಹೋಗುತ್ತಿದ್ದು, ಕೃಷಿ, ದಿನನಿತ್ಯ ಚಟುವಟಿಕೆಗಳಿಗೆ ಅಗತ್ಯ ನೀರು ಸಿಗದೆ ಪರಾದಡುತ್ತಿರುವ ಸನ್ನಿವೇಶಗಳು ಎದುರಾಗುತ್ತಿವೆ. ಬೇಸಿಗೆಯ ಆರಂಭಿಕ ಹಂತದಲ್ಲಿಯೇ ಈ ರೀತಿ ಪರಿಸ್ಥಿತಿ ಉಂಟಾಗಿರುವುದು ಜನಜೀವನ ಮಾತ್ರವಲ್ಲದೆ ಪ್ರಾಣಿ, ಪಕ್ಷಿ ಸಂಕುಲವನ್ನು ಬಾಧಿಸುತ್ತಿದೆ.

ಅಣೆಕಟ್ಟು, ಹೊಳೆ, ಕೆರೆಗಳಲ್ಲಿ ನೀರು ಕ್ಷೀಣಿಸಿ ಬರಿದಾಗಿರುವಂತಹ ದೃಶ್ಯಗಳು ಕಳವಳ ಮೂಡಿಸಿದೆ. ಮಳೆ ಬಾರದೆ ಪರಿಸ್ಥಿತಿ ಹೀಗೆ ಮುಂದುವರೆದರೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾದ ಸ್ಥಿತಿಯೂ ನಿರ್ಮಾಣವಾಗುವ ಆತಂಕ ಜನರಲ್ಲಿ ಮನೆ ಮಾಡಿದೆ.

ಬರಿದಾಗುತ್ತಿರುವ ಕಾವೇರಿ ಒಡಲು

ಕಾವೇರಿ ತವರು ಕೊಡಗಿನಲ್ಲಿ ಈ ಬಾರಿಯ ಬಿಸಿಲ ಝಳಕ್ಕೆ ಕಾವೇರಿ ಒಡಲು ಬರಿದಾಗುತ್ತಿದೆ. ನದಿ ಹರಿಯುವ ಭಾಗಗಳಲ್ಲಿ ಗಣನೀಯ ಪ್ರಮಾಣದ ನೀರಿನ ಮಟ್ಟ ಕುಸಿತ ಕಂಡಿರುವುದು ಅಪಾಯದ ಮುನ್ಸೂಚನೆಯನ್ನು ತೋರಿಸುತ್ತಿದೆ.

ದುಬಾರೆಯಲ್ಲಿ ನೀರು ಪಾತಳಾಕ್ಕಿಳಿದು ಜಲಕ್ರೀಡೆ ಸ್ಥಗಿತಗೊಂಡಿದೆ. ಹಾರಂಗಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹವಿದ್ದ ಹಿನ್ನೆಲೆ ಆ ಭಾಗದ ರೈತರಿಗೆ ಕೊಂಚ ಮಟ್ಟಿಗೆ ಸಹಾಯವಾಗಲಿದೆ. ಆದರೆ, ಜಲಮೂಲಗಳು ಬರಿದಾಗುತ್ತಿರುವ ಕಾರಣದಿಂದಾಗಿ ಬಾವಿಗಳನ್ನು ಕೊರೆಸಿದರೆ ನೀರು ದೊರೆಯುತ್ತಿಲ್ಲ. ಕೆರೆ, ಕಟ್ಟೆ, ಬಾವಿಗಳಲ್ಲೂ ಅಂತರಗAಗೆ ಮಾಯವಾಗಿದ್ದಾಳೆ.

ಮಳೆಗೆ ಕಾಯುತ್ತಿರುವ ಬೆಳೆಗಾರ

ವಾಣಿಜ್ಯ ಬೆಳೆ ಕಾಫಿಗೆ ಮಳೆಯ ಅವಶ್ಯಕತೆ ಹೆಚ್ಚಿದೆ. ಕಾಫಿ ಕುಯ್ಲು ಮುಗಿದು ಇದೀಗ ಹೂ ಅರಳುತ್ತಿರುವ ಸಮಯದಲ್ಲಿ ಮಳೆಯಾದರೆ ಮುಂದೆ ಉತ್ತಮ ಫಸಲು ಬರಲು ಸಹಕಾರಿಯಾಗುತ್ತದೆ. ಮಳೆ ಬಾರದಿದ್ದಲ್ಲಿ ಹಣ ವ್ಯಯಿಸಿ ಸ್ಪಿçಂಕ್ಲರ್ ಮಾಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಬೆಳೆಗಾರರು ಮಳೆಯನ್ನು ಎದುರು ನೋಡುತ್ತಿದ್ದಾರೆ. ಇದಲ್ಲದೆ ಇನ್ನಿತರ ತೋಟಗಾರಿಕೆ ಬೆಳೆಗಾರರಿಗೂ ಬಿಸಿಲು ಕಾಟ ನೀಡುತ್ತಿದ್ದು, ಮಳೆಯ ಅಗತ್ಯತೆ ಅನಿವಾರ್ಯವಾಗಿದೆ.

ಫೆಂಗಾಲ್ ಎಫೆಕ್ಟ್

ಫೆಂಗಾಲ್ ಚಂಡಮಾರುತದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಫೆಂಗಾಲ್ ಚಂಡಮಾರುತ ಬಂದ ನಂತರ ಮಳೆಯಾಗಲಿಲ್ಲ. ಪರಿಣಾಮ ವಾತಾವರಣ ಬದಲಾಗುತ್ತಿದೆ. ಭೂಮಿಯಲ್ಲಿದ್ದ ತೇವಾಂಶ ಆವಿಯಾಗಿದೆ. ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿಯೂ ಮಳೆಯಾಗುತ್ತಿತ್ತು. ಅದು ಈ ಬಾರಿ ಆಗದ ಹಿನ್ನೆಲೆ ಉಷ್ಣಾಂಶ ೩೨ ರಿಂದ ೩೫ ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

(ಮೊದಲ ಪುಟದಿಂದ)

ಪರಿತಪಿಸುತ್ತಿರುವ ಪ್ರಾಣಿ ಸಂಕುಲ

ಉಷ್ಣಾAಶ ಅಧಿಕವಾಗಿ ನೀರು ಬರಿದಾಗಿ, ಆಹಾರಗಳು ಲಭ್ಯವಾಗದೆ ವನ್ಯಜೀವಿ, ಪಕ್ಷಿಗಳು ಪರಿತಪಿಸುತ್ತಿವೆ. ಅರಣ್ಯ ಭಾಗದಲ್ಲಿರುವ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದ ಪರಿಣಾಮ ಆಹಾರಕ್ಕಾಗಿ ಪ್ರಾಣಿ ಸಂಕುಲ ನಾಡಿನತ್ತ ಲಗ್ಗೆಹಿಡುತ್ತಿದೆ.

ಈಗಾಗಲೇ ಜಿಲ್ಲೆಯಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಅಪಾರ ನಷ್ಟ ಉಂಟು ಮಾಡುತ್ತಿದೆ. ಇದರೊಂದಿಗೆ ಬೇಸಿಗೆಗಾಲ ಪ್ರಾಣಿಗಳನ್ನು ಮತ್ತಷ್ಟು ಬಾಧಿಸುತ್ತಿರುವುದರಿಂದ ವಿಧಿ ಇಲ್ಲದೆ ಕಾಡಿನಿಂದ ನಾಡಿಗೆ ವನ್ಯಜೀವಿಗಳು ಲಗ್ಗೆ ಇಡುತ್ತಿವೆ.

-ಹೆಚ್.ಜೆ. ರಾಕೇಶ್‌ಬಿಸಿಲ ಬೇಗೆ ಅನಾರೋಗ್ಯ ಬಾಧೆ

ದಿಢೀರ್ ಹವಾಮಾನ ಬದ ಲಾವಣೆಯಿಂದ ಜನರ ಆರೋಗ್ಯ ದಲ್ಲಿ ಏರುಪೇರು ಕಂಡುಬರುತ್ತಿದೆ. ಉಷ್ಣಾಂಶ ಹೆಚ್ಚಳದಿಂದ ಮಕ್ಕಳು ಹೆಚ್ಚಾಗಿ ಅಸ್ವಸ್ಥರಾಗುತ್ತಿರುವುದು ಕಂಡುಬರುತ್ತಿದೆ. ಹಿರಿಯರ ಆರೋಗ್ಯದಲ್ಲೂ ಸಮಸ್ಯೆ ಕಾಣುತ್ತಿದೆ. ಈ ಅವಧಿಯಲ್ಲಿ ಕಾಯಿಸಿ, ಆರಿಸಿದ ಶುದ್ಧ ನೀರು ಸೇವನೆ ಜೊತೆಗೆ ಬೇಸಿಗೆಗೆ ಪೂರಕವಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು. ದ್ರವ ಪದಾರ್ಥ ಹೆಚ್ಚಾಗಿ ಸೇವನೆ ಮಾಡಬೇಕು. ತಾಜಾ ಹಾಗೂ ಪೌಷ್ಠಿಕ ಆಹಾರ ತೆಗೆದುಕೊಳ್ಳಬೇಕು ಎಂದು ವೈದ್ಯರುಗಳು ಸಲಹೆ ನೀಡಿದ್ದಾರೆ. ಪಕ್ಷಿಗೆ ಗುಟುಕು ನೀರು ನೀಡಿ

ಸಣ್ಣ ಪಕ್ಷಿಗಳು ಬೇಸಿಗೆಯಿಂದ ಅಪಾರ ಸಮಸ್ಯೆಯನ್ನು ಎದುರಿಸುತ್ತವೆ. ಕಾಡು ಪಕ್ಷಿಗಳಿಗೆ ಅರಣ್ಯದಲ್ಲಿ ಬೇಸಿಗೆ ಅವಧಿಯಲ್ಲಿಯೇ ಬೆಳೆಯುವ ಹಣ್ಣುಗಳು ಬಾಯರಿಕೆಯನ್ನು ನೀಗಿಸುತ್ತವೆ. ನಾಡಿನಲ್ಲಿರುವ ಹಕ್ಕಿಗಳಿಗೆ ಇದು ಸಿಗುವುದಿಲ್ಲ. ಹಾಗಾಗಿ ಜನರು ತಮ್ಮ ಮನೆಯ ಹೊರಭಾಗದಲ್ಲಿನ ತಣ್ಣನೆ ಪ್ರದೇಶದಲ್ಲಿ ನೀರನ್ನು ಇಟ್ಟು ಗುಟುಕು ನೀಡಿ ಪಕ್ಷಿ ಸಂಕುಲಕ್ಕೆ ನೆರವಾಗಬೇಕು.

-ಡಾ. ನರಸಿಂಹನ್,

ಪಕ್ಷಿ, ಪ್ರಕೃತಿ ಪ್ರೇಮಿ, ವೀರಾಜಪೇಟೆ ಸೋಮವಾರಪೇಟೆ: ಮಾರ್ಚ್ ಆರಂಭದಲ್ಲೇ ಬಿಸಿಲಿನ ತಾಪ ಅಧಿಕಗೊಂಡಿದ್ದು, ಈವರೆಗೆ ಮಳೆ ಬೀಳದ ಹಿನ್ನೆಲೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಜಲಮೂಲಗಳು ಬತ್ತಲಾರಂಭಿಸಿವೆ.

ಪಟ್ಟಣದ ಕಕ್ಕೆಹೊಳೆಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಕಕ್ಕೆಹೊಳೆ ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿ ಹೋಗಿದೆ. ಇನ್ನು ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಪಟ್ಟಣದ ಆನೆಕೆರೆ, ಯಡೂರು ದೇವರ ಕೆರೆ, ಚೌಡ್ಲು ಕೆರೆಗಳಲ್ಲಿ ನೀರಿನ ಸಂಗ್ರಹವಿದ್ದರೂ ಸಹ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಒಂದಿಷ್ಟು ಕ್ಷೀಣಿಸಿದೆ.

ಇನ್ನು ಸಣ್ಣಪುಟ್ಟ ಕೊಲ್ಲಿ, ತೋಡುಗಳಲ್ಲಿ ನೀರು ಇಲ್ಲವಾಗಿದೆ. ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಆತಂಕ ಎದುರಾಗದಿದ್ದರೂ, ಇದೇ ಹವಾಮಾನ ಮುಂದುವರೆದರೆ ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೂ ಸಂಚಕಾರ ಎದುರಾಗಲಿದೆ.

ಪಟ್ಟಣಕ್ಕೆ ಪ್ರಮುಖವಾಗಿ ಹಾನಗಲ್ಲಿನ ದುದ್ದುಗಲ್ಲು ಮತ್ತು ಹಾರಂಗಿ ಹೊಳೆಯಿಂದ ನೀರು ಪೂರೈಕೆಯಾಗುತ್ತಿದೆ. ದುದ್ದುಗಲ್ಲು ಹೊಳೆಯಲ್ಲಿಯೂ ನೀರಿನ ಹರಿವು ಕ್ಷೀಣಿಸುತ್ತಿದೆ. ಈ ಹಿನ್ನೆಲೆ ಪಟ್ಟಣ ಪಂಚಾಯಿತಿಯಿAದ ಮರಳು ಚೀಲಗಳನ್ನು ಹೊಳೆಗೆ ಅಡ್ಡಲಾಗಿ ಹಾಕಿ ನೀರು ಸಂಗ್ರಹಿಸುವ ಕಾರ್ಯಕ್ಕೆ ಚಿಂತನೆ ಹರಿಸಲಾಗಿದೆ.

ಕಕ್ಕೆಹೊಳೆಯಲ್ಲಿಯೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಕಕ್ಕೆಹೊಳೆಯಿಂದ ಪ್ರಮುಖವಾಗಿ ಚೌಡ್ಲು ಗ್ರಾಮ ಪಂಚಾಯಿತಿಯ ಹೆಚ್ಚು ಮನೆಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಕಕ್ಕೆಹೊಳೆಗೆ ಆಲೇಕಟ್ಟೆ ಬಳಿಯಲ್ಲಿ ಚೆಕ್‌ಡ್ಯಾಂ ನಿರ್ಮಿಸಿ, ನೀರನ್ನು ಶುದ್ಧೀಕರಿಸುವ ಘಟಕ ನಿರ್ಮಿಸಲಾಗಿದೆ. ಇಲ್ಲಿಂದಲೇ ಪ್ರತಿ ಮನೆಗೂ ಜಲೋತ್ಸವ ಯೋಜನೆಯ ಮೂಲಕ ನೀರು ಸರಬರಾಜಾಗುತ್ತಿದೆ.

ಪ್ರಸ್ತುತ ಪಟ್ಟಣ ಪಂಚಾಯಿತಿಯ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಅಮೃತ್-೨ ಯೋಜನೆಯೂ ಪ್ರಗತಿಯಲ್ಲಿದ್ದು, ಈಗಾಗಲೇ ಹಾರಂಗಿಯಿAದ ಪೈಪ್‌ಲೈನ್ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪಟ್ಟಣ ವ್ಯಾಪ್ತಿಯ ಪ್ರತಿ ಮನೆಗಳಿಗೆ ಪ್ರತ್ಯೇಕ ಪೈಪ್ ಅಳವಡಿಸಿ ನಲ್ಲಿ ಹಾಕುವ ಕಾರ್ಯ ನಡೆಯುತ್ತಿದೆ.

ಪ್ರಾಕೃತಿಕ ಸಂಪತ್ತು ಅಧಿಕವಾಗಿರುವ ಶಾಂತಳ್ಳಿ ಹೋಬಳಿ ಭಾಗದಲ್ಲೂ ಜಲಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಇನ್ನು ಬಯಲು ಪ್ರದೇಶದಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಪಾತಾಳ ಸೇರಿದೆ. ಬಿಸಿಲಿನ ಝಳ ಅಧಿಕವಾಗುತ್ತಿದ್ದು, ಕಾಫಿ ತೋಟಗಳಲ್ಲಿ ಗಿಡಗಳು ಒಣಗಲಾರಂಭಿಸಿವೆ. ಬೋರ್‌ವೆಲ್ ಹೊಂದಿರುವವರು ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಕೆರೆಗಳನ್ನು ಹೊಂದಿರುವ ಬೆಳೆಗಾರರು ಪಂಪ್‌ಸೆಟ್ ಅಳವಡಿಸಿ ನೀರು ಹಾಯಿಸುವ ಮೂಲಕ ಗಿಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಆತಂಕ ಇಲ್ಲದಿದ್ದರೂ, ಇದೇ ಪರಿಸ್ಥಿತಿ ಮುಂದುವರೆದರೆ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹಲವಷ್ಟು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. -ವಿಜಯ್‌ನಾಪೋಕ್ಲು: ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರು ತಮ್ಮ ತೋಟಕ್ಕೆ ನೀರಿನ ಮೂಲಗಳಿಂದ ನೀರು ಹಾಯಿಸಿ ಕಾಫಿ ಹೂ ಅರಳಿಸುವತ್ತ ಗಮನಹರಿಸಿದ್ದಾರೆ. ಇದೀಗ ಕಾಫಿಯ ಹೂಗಳು ಅರಳುವ ಸಮಯ ವಾಗಿರುವುದರಿಂದ. ಸ್ಪಿçಂಕ್ಲರ್ ಮೂಲಕ ನೀರು ಹಾಯಿಸಿ ಅಲ್ಲಲ್ಲಿ ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಶ್ವೇತ ವೈಭವದಿಂದ ಕಂಗೊಳಿಸುತ್ತಿವೆ.

ಬಹುತೇಕ ತೋಟಗಳಲ್ಲಿ ಕಾಫಿ ಕೊಯ್ಲು ಮುಕ್ತಾಯವಾಗಿದ್ದು, ಇದೀಗ ಮುಂದಿನ ವರ್ಷದ ಇಳುವರಿಗಾಗಿ ಮೊಗ್ಗುಗಳು ಸಿದ್ಧವಾಗಿವೆ. ಮಳೆಗಾಗಿ ಕಾತರಿಸುತ್ತಿವೆ. ನೀರಿನ ಮೂಲ ಉಳ್ಳವರು ಕೆರೆಯಿಂದ, ತೋಡುಗಳಿಂದ ಹೊಳೆಗಳಿಂದ ನೀರು ಹಾಯಿಸಿ ಹೂ ಅರಳಿಸುವ ಪ್ರಯತ್ನ ಪಡುತ್ತಿದ್ದಾರೆ.

ಉರಿ ಬಿಸಿಲಿನ ಧಗೆಯ ಪ್ರಮಾಣ ಏರುತ್ತಿದ್ದು ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಮಳೆಗಾಗಿ ಕಾತರಿಸುತ್ತಿದ್ದಾರೆ. ಅಲ್ಲಲ್ಲಿ ದಟ್ಟನೆಯ ಮೋಡಗಳು ಆವರಿಸುವ ದೃಶ್ಯಗಳು ಕಂಡುಬAದರೂ ಎಲ್ಲೂ ಮಳೆಯಾಗಿಲ್ಲ ವಾರದ ಹಿಂದೆ ಕಕ್ಕಬ್ಬೆ ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು ಬೆಳೆಗಾರರಿಗೆ ಆಶಾಭಾವನೆ ಮೂಡಿಸಿದೆ. ಹವಮಾನ ಬದಲಾವಣೆ ಆತಂಕ ಹುಟ್ಟಿಸಿದೆ.

ಸಾಮಾನ್ಯವಾಗಿ ಫೆಬ್ರವರಿ ಕೊನೆ ವಾರ ಹಾಗೂ ಮಾರ್ಚ್ ತಿಂಗಳಲ್ಲಿ ಮೊದಲ ಮಳೆ ಬರುವುದು ವಾಡಿಕೆ. ಇದು ಕಾಫಿ ಹೂವು ಅರಳಿಸಲು ಸಹಕಾರಿ. ಇತ್ತೀಚೆಗೆ ಹೂಮಳೆ ಸರಿಯಾಗಿ ಆಗುತ್ತಿಲ್ಲ ಉಷ್ಣಾಂಶವು ಏರಿದೆ. ಹಾಗಾಗಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬೆಳೆಗಾರರು. -ದುಗ್ಗಳ ಸದಾನಂದ ಕಾಫಿ ಬೆಳೆಗಾರರ ಮುಂದಿನ ಭವಿಷ್ಯವನ್ನು ಹೂ ಮಳೆಯೇ ನಿರ್ಧರಿಸುತ್ತದೆ. ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ಕಾಫಿ ಬೆಳೆಗಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ ನೀರಿನ ಮೂಲ ಇದ್ದವರು ತೋಟಗಳಿಗೆ ನೀರು ಹಾಯಿಸಿ ಮುಂದಿನ ಕಾಫಿ ಫಸಲಿಗೆ ಪೂರಕ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾವೇರಿ ನೀರನ್ನು ಮಂಡ್ಯ, ಮೈಸೂರು, ತಮಿಳುನಾಡಿನವರೆಗೆ ಎಲ್ಲರೂ ದಿನನಿತ್ಯ ಬಳಸುತ್ತಿದ್ದಾರೆ. ಕೊಡಗಿನಲ್ಲಿ ಹೆಚ್ಚಿನವರಿಗೆ ನೀರಿನ ಸೌಲಭ್ಯ ಇಲ್ಲದ ಕಾರಣ ಈ ಒಂದು ತಿಂಗಳ ಅವಧಿಯಲ್ಲಿ ಕಾವೇರಿ ಹೊಳೆಯಿಂದ ಬೆಳೆಗಾರರು ನೀರನ್ನು ಬಳಸಿಕೊಳ್ಳಲು ಸರಕಾರ ಯಾವುದೇ ನಿರ್ಬಂಧವನ್ನು ಹೇರದೆ ಸಹಕರಿಸುವಂತೆ ಬೆಳೆಗಾರರ ಪರವಾಗಿ ಮನವಿ.

-ಡಾ. ಸಣ್ಣುವಂಡ ಕಾವೇರಪ್ಪ, ಭಾರತೀಯ ಕಾಫಿ ಮಂಡಳಿ ಮಾಜಿ ಅಧ್ಯಕ್ಷ, ಬೆಳೆಗಾರ, ನಾಪೋಕ್ಲು

ಇತ್ತೀಚೆಗೆ ನಮ್ಮಕೆರೆಯಲ್ಲಿ ಇದ್ದ ನೀರನ್ನು ತೋಟಕ್ಕೆ ಹಾಯಿಸಲಾಗಿದೆ. ಕೆರೆ, ತೋಡುಗಳು ಬತ್ತಿ ಹೋಗುತ್ತಿದ್ದು ನೀರಿನ ಅಭಾವ ತಲೆದೋರಿ ತೋಟಗಳಿಗೆ ನೀರು ಹಾಯಿಸಲು ನೀರು ಇಲ್ಲವಾಗಿ. ತಾಪಮಾನ ಏರುತ್ತಿದೆ. ಎಲ್ಲರೂ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ.

- ನೂರಂಬಾಡ ರವೀಂದ್ರ, ಕಾಫಿ ಬೆಳೆಗಾರ ನಾಪೋಕ್ಲು ಗ್ರಾಮ

ನಮ್ಮ ಗ್ರಾಮಗಳಲ್ಲಿ ಕಾಫಿ ಬೆಳೆಗಾರರು ಅವರವರ ಅನುಕೂಲಕ್ಕೆ ತಕ್ಕಂತೆ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಇದೀಗ ಕಾಫಿಗೆ ಬೆಲೆ ಇದ್ದ ಕಾರಣ ಮಳೆಯನ್ನೇ ನಂಬಿಕೊAಡು ಯಾರೂ ಕೂರುವುದಿಲ್ಲ. ಬಾಡಿಗೆಗೆ ಮೋಟಾರ್‌ಗಳನ್ನು ಪಡೆದುಕೊಂಡು ನೀರು ಹಾಯಿಸುತ್ತಿದ್ದಾರೆ. ಒಂದು ಶಿಫ್ಟ್ಗೆ ನಾಲ್ಕು ಸಾವಿರದಿಂದ ಆರು ಸಾವಿರ ರೂ.ವರೆಗೆ ಹಣ ತೆರಬೇಕಾಗುತ್ತದೆ.

-ನಾಪಂಡ ಉದಯ, ಉದ್ಯಮಿ, ಕಾಫಿ ಬೆಳೆಗಾರ, ಕಾರುಗುಂದ ಗ್ರಾಮ.

ಕುಶಾಲನಗರ: ಬಿರು ಬಿಸಿಲಿನ ನಡುವೆ ಕುಶಾಲನಗರ ಸುತ್ತ ಹರಿಯುತ್ತಿರುವ ಕಾವೇರಿ ನದಿ ತನ್ನ ಹರಿವು ಸ್ಥಗಿತಗೊಂಡು ಸಂಪೂರ್ಣ ಬತ್ತಿ ಹೋಗಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಸ್ಥಗಿತಗೊಂಡಿದೆ. ನದಿಯಲ್ಲಿ ಅಲ್ಲಲ್ಲಿ ಸಂಗ್ರಹವಾಗಿರುವ ನೀರು ಪಾಚಿ ಕಟ್ಟುತ್ತಿದ್ದು, ಸೇತುವೆ ಮೇಲ್ಭಾಗದಿಂದ ಎಸೆಯುವ ತ್ಯಾಜ್ಯ ರಾಶಿ ನೀರನ್ನು ಇನ್ನಷ್ಟು ಕಲುಷಿತಗೊಳಿಸುವಂತೆ ಮಾಡಿದೆ.

ಕಳೆದ ವರ್ಷವೂ ಇದೇ ಪರಿಸ್ಥಿತಿ ಎದುರಾಗಿತ್ತು. ಈ ಬಾರಿಯೂ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಿದೆ.

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬೈಚನಹಳ್ಳಿ ಪಂಪ್ ಹೌಸ್ ಬಳಿ ಕೂಡ ನೀರಿನ ಹರಿವಿನ ಪ್ರಮಾಣ ಬಹುತೇಕ ಇಳಿಕೆಯಾಗಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ಕುಶಾಲನಗರ ಪಟ್ಟಣ ಸುತ್ತಮುತ್ತಲ ಗ್ರಾಮಗಳ ನಾಗರಿಕರು ಕುಡಿಯುವ ನೀರಿಗೆ ಬವಣೆ ಪಡುವ ಪರಿಸ್ಥಿತಿ ಎದುರಾಗಲಿದೆ.

ಕುಶಾಲನಗರ ಮೂಲಕ ಹರಿಯುವ ಕಾವೇರಿಯಲ್ಲಿ ಇದೀಗ ದಿನದ ೨೪ ಗಂಟೆಗಳ ಕಾಲ ಭಾರಿ ಪ್ರಮಾಣದ ಅಶ್ವಶಕ್ತಿಯ ಪಂಪುಗಳ ಮೂಲಕ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ನೀರನ್ನು ಹಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಮುಂದಿನ ದಿನಗಳು ನಾಗರಿಕರಿಗೆ ಆತಂಕಕಾರಿಯಾಗಿ ಪರಿಣಮಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. -ಚಂದ್ರಮೋಹನ್

ನಾಪೋಕ್ಲು: ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರು ತಮ್ಮ ತೋಟಕ್ಕೆ ನೀರಿನ ಮೂಲಗಳಿಂದ ನೀರು ಹಾಯಿಸಿ ಕಾಫಿ ಹೂ ಅರಳಿಸುವತ್ತ ಗಮನಹರಿಸಿದ್ದಾರೆ. ಇದೀಗ ಕಾಫಿಯ ಹೂಗಳು ಅರಳುವ ಸಮಯ ವಾಗಿರುವುದರಿಂದ. ಸ್ಪಿçಂಕ್ಲರ್ ಮೂಲಕ ನೀರು ಹಾಯಿಸಿ ಅಲ್ಲಲ್ಲಿ ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಶ್ವೇತ ವೈಭವದಿಂದ ಕಂಗೊಳಿಸುತ್ತಿವೆ.

ಬಹುತೇಕ ತೋಟಗಳಲ್ಲಿ ಕಾಫಿ ಕೊಯ್ಲು ಮುಕ್ತಾಯವಾಗಿದ್ದು, ಇದೀಗ ಮುಂದಿನ ವರ್ಷದ ಇಳುವರಿಗಾಗಿ ಮೊಗ್ಗುಗಳು ಸಿದ್ಧವಾಗಿವೆ. ಮಳೆಗಾಗಿ ಕಾತರಿಸುತ್ತಿವೆ. ನೀರಿನ ಮೂಲ ಉಳ್ಳವರು ಕೆರೆಯಿಂದ, ತೋಡುಗಳಿಂದ ಹೊಳೆಗಳಿಂದ ನೀರು ಹಾಯಿಸಿ ಹೂ ಅರಳಿಸುವ ಪ್ರಯತ್ನ ಪಡುತ್ತಿದ್ದಾರೆ.

ಉರಿ ಬಿಸಿಲಿನ ಧಗೆಯ ಪ್ರಮಾಣ ಏರುತ್ತಿದ್ದು ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಮಳೆಗಾಗಿ ಕಾತರಿಸುತ್ತಿದ್ದಾರೆ. ಅಲ್ಲಲ್ಲಿ ದಟ್ಟನೆಯ ಮೋಡಗಳು ಆವರಿಸುವ ದೃಶ್ಯಗಳು ಕಂಡುಬAದರೂ ಎಲ್ಲೂ ಮಳೆಯಾಗಿಲ್ಲ ವಾರದ ಹಿಂದೆ ಕಕ್ಕಬ್ಬೆ ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು ಬೆಳೆಗಾರರಿಗೆ ಆಶಾಭಾವನೆ ಮೂಡಿಸಿದೆ. ಹವಮಾನ ಬದಲಾವಣೆ ಆತಂಕ ಹುಟ್ಟಿಸಿದೆ.

ಸಾಮಾನ್ಯವಾಗಿ ಫೆಬ್ರವರಿ ಕೊನೆ ವಾರ ಹಾಗೂ ಮಾರ್ಚ್ ತಿಂಗಳಲ್ಲಿ ಮೊದಲ ಮಳೆ ಬರುವುದು ವಾಡಿಕೆ. ಇದು ಕಾಫಿ ಹೂವು ಅರಳಿಸಲು ಸಹಕಾರಿ. ಇತ್ತೀಚೆಗೆ ಹೂಮಳೆ ಸರಿಯಾಗಿ ಆಗುತ್ತಿಲ್ಲ ಉಷ್ಣಾಂಶವು ಏರಿದೆ. ಹಾಗಾಗಿ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬೆಳೆಗಾರರು. -ದುಗ್ಗಳ ಸದಾನಂದಕಾಫಿ ಬೆಳೆಗಾರರ ಮುಂದಿನ ಭವಿಷ್ಯವನ್ನು ಹೂ ಮಳೆಯೇ ನಿರ್ಧರಿಸುತ್ತದೆ. ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ಕಾಫಿ ಬೆಳೆಗಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ ನೀರಿನ ಮೂಲ ಇದ್ದವರು ತೋಟಗಳಿಗೆ ನೀರು ಹಾಯಿಸಿ ಮುಂದಿನ ಕಾಫಿ ಫಸಲಿಗೆ ಪೂರಕ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾವೇರಿ ನೀರನ್ನು ಮಂಡ್ಯ, ಮೈಸೂರು, ತಮಿಳುನಾಡಿನವರೆಗೆ ಎಲ್ಲರೂ ದಿನನಿತ್ಯ ಬಳಸುತ್ತಿದ್ದಾರೆ. ಕೊಡಗಿನಲ್ಲಿ ಹೆಚ್ಚಿನವರಿಗೆ ನೀರಿನ ಸೌಲಭ್ಯ ಇಲ್ಲದ ಕಾರಣ ಈ ಒಂದು ತಿಂಗಳ ಅವಧಿಯಲ್ಲಿ ಕಾವೇರಿ ಹೊಳೆಯಿಂದ ಬೆಳೆಗಾರರು ನೀರನ್ನು ಬಳಸಿಕೊಳ್ಳಲು ಸರಕಾರ ಯಾವುದೇ ನಿರ್ಬಂಧವನ್ನು ಹೇರದೆ ಸಹಕರಿಸುವಂತೆ ಬೆಳೆಗಾರರ ಪರವಾಗಿ ಮನವಿ.

-ಡಾ. ಸಣ್ಣುವಂಡ ಕಾವೇರಪ್ಪ, ಭಾರತೀಯ ಕಾಫಿ ಮಂಡಳಿ ಮಾಜಿ ಅಧ್ಯಕ್ಷ, ಬೆಳೆಗಾರ, ನಾಪೋಕ್ಲು

ಇತ್ತೀಚೆಗೆ ನಮ್ಮಕೆರೆಯಲ್ಲಿ ಇದ್ದ ನೀರನ್ನು ತೋಟಕ್ಕೆ ಹಾಯಿಸಲಾಗಿದೆ. ಕೆರೆ, ತೋಡುಗಳು ಬತ್ತಿ ಹೋಗುತ್ತಿದ್ದು ನೀರಿನ ಅಭಾವ ತಲೆದೋರಿ ತೋಟಗಳಿಗೆ ನೀರು ಹಾಯಿಸಲು ನೀರು ಇಲ್ಲವಾಗಿ. ತಾಪಮಾನ ಏರುತ್ತಿದೆ. ಎಲ್ಲರೂ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ.

- ನೂರಂಬಾಡ ರವೀಂದ್ರ, ಕಾಫಿ ಬೆಳೆಗಾರ ನಾಪೋಕ್ಲು ಗ್ರಾಮ

ನಮ್ಮ ಗ್ರಾಮಗಳಲ್ಲಿ ಕಾಫಿ ಬೆಳೆಗಾರರು ಅವರವರ ಅನುಕೂಲಕ್ಕೆ ತಕ್ಕಂತೆ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಇದೀಗ ಕಾಫಿಗೆ ಬೆಲೆ ಇದ್ದ ಕಾರಣ ಮಳೆಯನ್ನೇ ನಂಬಿಕೊAಡು ಯಾರೂ ಕೂರುವುದಿಲ್ಲ. ಬಾಡಿಗೆಗೆ ಮೋಟಾರ್‌ಗಳನ್ನು ಪಡೆದುಕೊಂಡು ನೀರು ಹಾಯಿಸುತ್ತಿದ್ದಾರೆ. ಒಂದು ಶಿಫ್ಟ್ಗೆ ನಾಲ್ಕು ಸಾವಿರದಿಂದ ಆರು ಸಾವಿರ ರೂ.ವರೆಗೆ ಹಣ ತೆರಬೇಕಾಗುತ್ತದೆ.

-ನಾಪಂಡ ಉದಯ, ಉದ್ಯಮಿ, ಕಾಫಿ ಬೆಳೆಗಾರ, ಕಾರುಗುಂದ ಗ್ರಾಮ.

ಕೂಡಿಗೆ : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ರಣ ಬಿಸಿಲಿನ ತಾಪಮಾನದಲ್ಲಿಯೂ ನೀರಿನ ಸಂಗ್ರಹ ಮಟ್ಟ ಹೆಚ್ಚು ಕಂಡುಬರುತ್ತಿದೆ.

ಮಾರ್ಚ್ ಆರಂಭದಲ್ಲಿ ಕಾವೇರಿ ನದಿ ಸೇರಿದಂತೆ ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕೊಳವೆ ಬಾವಿಗಳ ಅಂತರ್ಜಲದ ಮಟ್ಟ ಕುಸಿತ ಕಂಡುಬAದಿದೆ. ಈಗಾಗಲೇ ತಾಲೂಕು ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆಗಾಗಿ ಸಿದ್ಧತೆಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊಳವೆ ಬಾವಿಗಳಲ್ಲಿ ನೀರು ಬತ್ತುವ ಮುನ್ನ ಕೊಳವೆ ಬಾವಿಗಳ ದುರಸ್ತಿ ಮಾಡುವುದರ ಜೊತೆಯಲ್ಲಿ ನೀರಿನ ಮೂಲ ದೊರಕುವ ಕಡೆಗಳಲ್ಲಿ ಪೈಪ್‌ಲೈನ್‌ಗಳನ್ನು ಸರಿಪಡಿಸುವ ಕಾರ್ಯದಲ್ಲಿ ಅನೇಕ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಅಧಿಕಾರಿ ವರ್ಗದವರು ತೊಡಗಿದ್ದಾರೆ.

ಹಾರಂಗಿ ಅಣೆಕಟ್ಟೆಯಲ್ಲಿ ಇಂದಿನ ನೀರಿನ ಮಟ್ಟ ೨.೮೯೦೧೯ ಟಿ.ಎಂ.ಸಿ. ಇದ್ದು, ಕಳೆದ ಸಾಲಿನಲ್ಲಿ ೨.೫೯೯೪೧ ಟಿ.ಎಂ.ಸಿ. ಸಂಗ್ರಹವಿತ್ತು

ಕಳೆದ ಸಾಲಿನಲ್ಲಿ ಕಂಡುಬAದ ನೀರಿನ ಸರಬರಾಜು ವ್ಯವಸ್ಥೆ ತೊಂದರೆಗಳ ಅನುಭವದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣವನ್ನು ಕಾಯ್ದುಕೊಂಡ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಕಳೆದ ಸಾಲಿಗಿಂತ ಸ್ವಲ್ಪಮಟ್ಟಿಗೆ ಹೆಚ್ಚು ನೀರು ಸಂಗ್ರಹದಲ್ಲಿದೆ ಎಂದು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ಕಾವೇರಿ ನದಿಯ ನೀರಿನ ಮಟ್ಟ ತೀರ ಕಡಿಮೆ ಅದ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಪ್ರದೇಶದಲ್ಲಿರುವ ಗ್ರಾ�