ಕಣಿವೆ, ಮಾ. ೧೦: ಕೊಡಗು ವಿವಿ ಉಳಿಸುವಂತೆ ಕೊಡಗು ವಿವಿ ಹಿತರಕ್ಷಣಾ ಸಮಿತಿ ವತಿಯಿಂದ ಶಾಸಕ ಡಾ.ಮಂತರ್‌ಗೌಡ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಕೊಡಗು ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಮನವಿ ಸಲ್ಲಿಸಲಾಯಿತು. ನಿಯೋಗಕ್ಕೆ ಈ ಸಂಬAಧ ಮಾಹಿತಿ ನೀಡಿದ ಡಿಸಿಎಂ ಶಿವಕುಮಾರ್, ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಹಾಗೂ ದೇಶ ವಿದೇಶಗಳ ವಿವಿಗಳ ವಿದ್ಯಾರ್ಥಿ ಗಳೊಂದಿಗೆ ಸ್ಪರ್ಧೆಗೆ ಇಳಿಯ ಬೇಕೆಂಬುದು ನಮ್ಮ ಒತ್ತಾಸೆಯಾಗಿದೆ.

ಕೊಡಗಿನ ಮಂದಿಗೆ ಮಂಗಳೂರು ವಿವಿ ಬೇಕೇ? ಕೊಡಗು ವಿವಿ ಬೇಕೇ? ಎಂದು ಪ್ರಶ್ನಿಸಿದ ಡಿಸಿಎಂ, ಈ ಹಿಂದೆ ನಮಗೆ ಬಂದ ಮಾಹಿತಿಗಳ ಆಧಾರದ ಮೇಲೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಅಷ್ಟೆ. ಇದೀಗ ಮತ್ತೊಮ್ಮೆ ಪೂರ್ಣ ಮಾಹಿತಿ ತರಿಸಿಕೊಂಡು ಚರ್ಚಿಸಲಾಗುವುದು. ಕೊಡಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನಾನುಕೂಲ ವಾಗದಂತೆ ಎಚ್ಚರ ವಹಿಸಲಾಗುವುದು.

ಮಂಗಳೂರು ವಿವಿಗೆ ಸಂಯೋಜಿತಗೊAಡ ಕೆಲವು ಬೋಧಕ ವರ್ಗದವರು ಮಂಗಳೂರು ವಿವಿಯಲ್ಲೇ ಕೊಡಗು ವಿವಿ ವಿಲೀನ ಮಾಡುವಂತೆ ಪತ್ರ ಬರೆದು ಸರ್ಕಾರಕ್ಕೆ ಒತ್ತಾಯಿಸಿದ್ದರು. ಹಾಗಾಗಿ ಮತ್ತಷ್ಟು ಮಾಹಿತಿಯನ್ನಾಧರಿಸಿ ಸಂಪುಟ ಉಪಸಮಿತಿಯಲ್ಲಿ ಚರ್ಚಿಸ ಲಾಗಿದೆಯಷ್ಟೆ ಎಂದರು. ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡರ ವಿಶೇಷ ಕಾಳಜಿ ಹಾಗೂ ಕೊಡಗಿನ ಮಂದಿಯ ಕೋರಿಕೆಯನ್ನು ಸರ್ಕಾರ ಕಡೆಗಣಿಸುವುದಿಲ್ಲ.

ಆದರೆ ಯಾವುದೇ ರಾಜಕೀಯಕ್ಕೂ ಬಗ್ಗಲ್ಲ. ಈ ಬಗ್ಗೆ ಮತ್ತೊಮ್ಮೆ ಸಂಪುಟ ಸಮಿತಿಯಲ್ಲಿ ಪರಾಮರ್ಶಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಪೂರಕವಾಗಿ ಸ್ಪಂದಿಸುವು ದಾಗಿ ಡಿ.ಕೆ. ಶಿವಕುಮಾರ್ ಭರವಸೆಯಿತ್ತರು. ಕೊಡಗು ವಿವಿಗೆ ಯಾವುದೇ

(ಮೊದಲ ಪುಟದಿಂದ) ಧಕ್ಕೆಯಾಗದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಉಪಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.

ಕೊಡಗಿನ ಪ್ರಾಕೃತಿಕ ಸನ್ನಿವೇಶಗಳನ್ನು ಮನಗಂಡು ಕೊಡಗಿನಲ್ಲಿ ಇರುವ ವಿವಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕೆAದು ವಿವಿ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ವಿ.ಪಿ.ಶಶಿಧರ್, ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಡಿಕೆಶಿ ಅವರನ್ನು ಕೋರಿದರು. ನಿಯೋಗದಲ್ಲಿ ಕೊಡಗು ವಿವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಉದ್ಯಮಿ ನಾಪಂಡ ಮುತ್ತಪ್ಪ, ಶಿಕ್ಷಣ ಪ್ರೇಮಿ ಎನ್.ಎನ್.ಶಂಭುಲಿAಗಪ್ಪ, ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಧ್ ಗುಂಡೂರಾವ್, ಕುಶಾಲನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಉಪನ್ಯಾಸಕ ಡಾ.ಜಮೀರ್ ಅಹಮದ್, ಹೆಚ್.ಎನ್.ರಾಜಶೇಖರ್, ಸಮಿತಿ ಪ್ರಮುಖರಾದ ಟಿ.ಕೆ.ಪಾಂಡುರAಗ, ಟಿ.ಬಿ.ಜಗದೀಶ್, ಸಂಜೀವಯ್ಯ, ಅಳುವಾರ ಮೂರ್ತಿ, ಕಿಶೋರ್, ಆದಂ, ಅರುಣ್ ಕೊತ್ನಳ್ಳಿ, ಕಬಡ್ಡಿ ಮಂಜು ಇತರರು ಇದ್ದರು.

ಕ್ಯಾಬಿನೆಟ್ ಸಚಿವರನ್ನು ಭೇಟಿ ಮಾಡಿದ ನಿಯೋಗ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗ ಬಳಿಕ ವಿಧಾನ ಸೌಧಕ್ಕೆ ತೆರಳಿ ಕ್ಯಾಬಿನೆಟ್ ಸಚಿವರಾದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಹಕಾರ ಸಚಿವ ರಾಜಣ್ಣ ಮತ್ತಿತರರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಕ್ಯಾಬಿನೆಟ್‌ನಲ್ಲಿ ಕೊಡಗು ವಿವಿ ವಿಚಾರ ಪ್ರಸ್ತಾಪವಾದಾಗ ಬೆಂಬಲಿಸಿ ಉಳಿಸುವಂತೆ ಮನವಿ ಮಾಡಿತು. ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ಜೊತೆ ಚರ್ಚಿಸುವಾಗ ಕೊಡಗು ವಿವಿ ನಿಯೋಗದ ಪರವಾಗಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೂರು ವಿಧಾನ ಸಭಾ ಕ್ಷೇತ್ರವಿದ್ದ ಕೊಡಗಿನಲ್ಲಿ ಒಂದು ಕ್ಷೇತ್ರವನ್ನು ಕಸಿಯಲಾಗಿದೆ.

ಪ್ರತ್ಯೇಕ ಲೋಕಸಭಾ ಕ್ಷೇತ್ರವೂ ಇಲ್ಲ. ಈ ಹಿಂದೆ ಸಿ ರಾಜ್ಯವಾಗಿತ್ತು. ಈಗ ಕೊಟ್ಟಿರುವ ಕೊಡಗು ವಿವಿ ಯನ್ನು ಕಸಿದರೆ ಕೊಡಗು ಜಿಲ್ಲೆಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಕ್ಯಾಬಿನೆಟ್ ನಲ್ಲಿ ನಾವು ಕೊಡಗು ವಿವಿ ವಿಚಾರವನ್ನು ಬೆಂಬಲಿಸಲಿದ್ದೇವೆ. ತಾವು ಸಹಕರಿಸಿ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಉಸ್ತುವಾರಿ ಸಚಿವ ಭೋಸರಾಜು ಮಾತನಾಡಿ, ಕೊಡಗು ವಿವಿ ಮುಚ್ಚುವ ನಿರ್ಧಾರ ಖಚಿತವಾಗಿಲ್ಲ. ಕ್ಯಾಬಿನೆಟ್‌ನಲ್ಲಿ ವಿಚಾರ ಬಂದಾಗ ತಾನು ಬೆಂಬಲಿಸುವುದಾಗಿ ಹೇಳಿದರು. ಈ ಸಂದರ್ಭ ಕೊಡಗು ಮೈಸೂರು ಮಾಜಿ ಸಂಸದ ಹೆಚ್.ವಿಶ್ವನಾಥ್ ಕೂಡ ಕೊಡಗು ವಿವಿ ನಿಯೋಗದ ಉದ್ದೇಶವನ್ನು ಬೆಂಬಲಿಸಿದರು. ಕೆ.ಎಸ್. ಮೂರ್ತಿ