ದುಬೈ, ಮಾ. ೯: ದುಬೈ ಅಂತರರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಜಯಸಾಧಿಸಿತು.

ಭಾರತದ ವಿರುದ್ಧ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ ೫೦ ಓವರ್ ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೨೫೧ರನ್ ಕಲೆಹಾಕಿ ಭಾರತಕ್ಕೆ ಗೆಲ್ಲಲ್ಲು ೨೫೨ರನ್‌ಗಳ ಸವಾಲಿನ ಗುರಿ ನೀಡಿತು. ಗುರಿ ಬೆನ್ನತ್ತಿದ್ದ ಭಾರತ ೬ ಬಾಲ್ ಬಾಕಿ ಇರುವಾಗಲೇ ೬ ವಿಕೆಟ್ ನಷ್ಟಕ್ಕೆ ಅಗತ್ಯ ರನ್ ಪೂರೈಸಿ ಗೆಲುವಿನ ನಗೆ ಬೀರಿತು. ಭಾರತ ಪರ ನಾಯಕ ರೋಹಿತ್ ಶರ್ಮ ೮೩ ಎಸೆತದಲ್ಲಿ ೭೬ರನ್ ಕಲೆಹಾಕಿ ಉತ್ತಮ ಆರಂಭ ನೀಡಿದರು. ಶ್ರೇಯಸ್ ಅಯ್ಯರ್ ೬೨ ಬಾಲ್‌ಗೆ ೪೮, ಶುಭಂ ಗಿಲ್ ೫೦ ಬಾಲ್‌ಗೆ ೩೧, ಅಕ್ಸರ್ ಪಟೇಲ್ ೪೦ ಬಾಲ್‌ಗೆ ೨೯, ಹಾರ್ದಿಕ್ ಪಾಂಡ್ಯ ೧೮ ಬಾಲ್‌ಗೆ ೧೮ ರನ್ ಬಾರಿಸಿ ಮುನ್ನಡೆಗೆ ಕಾರಣರಾದರು. ಕೆ.ಎಲ್ ರಾಹುಲ್ ಅಜೇಯ ೩೪ ರನ್, ರವೀಂದ್ರ ಜಡೇಜ ಅಜೇಯ ೯ ರನ್‌ನೊಂದಿಗೆ ಕೊನೆಯ ಫೋರ್ ಹೊಡೆದು ಗೆಲುವಿನ ದಡವನ್ನು ಒಂದು ಓವರ್‌ಗೆ ಮುನ್ನವೇ ದಾಟಿಸಿದರು.

ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (೩೭ ರನ್) ಮತ್ತು ವಿಲ್ ಯಂಗ್ (೧೫ ರನ್) ಜೋಡಿ ಮೊದಲ ವಿಕೆಟ್‌ಗೆ ೫೭ ರನ್‌ಗಳ ಭರ್ಜರಿ ಜೊತೆಯಾಟವಾಡಿತು. ಆದರೆ ಈ ಹಂತದಲ್ಲಿ

(ಮೊದಲ ಪುಟದಿಂದ) ದಾಳಿಗಿಳಿದ ಸ್ಪಿನ್ನರ್ ವರುಣ್ ಚಕ್ರವರ್ತಿ ವಿಲ್‌ಯಂಗ್‌ರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಮುನ್ನಡೆ ತಂದರು. ಬಳಿಕ ೩೭ ರನ್‌ಗಳಿಸಿ ಅಪಾಯಕಾರಿಯಾಗುತ್ತಿದ್ದ ರಚಿನ್ ರವೀಂದ್ರ ಕುಲದೀಪ್ ಯಾದವ್ ಅವರÀ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ಬಳಿಕ ಕೇನ್ ವಿಲಿಯಮ್ಸನ್ ಕೂಡ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಬ್ಯಾಟಿಂಗ್ ಪ್ರವೇಶಿಸಿದ ಡರಿಲ್ ಮೆಚೆಲ್ ಕಿವೀಸ್ ಬ್ಯಾಟಿಂಗ್‌ಗೆ ಬಲ ತುಂಬಿದರು. ೧೦೧ ಎಸೆತಗಳನ್ನು ಎದುರಿಸಿದ ಮಿಚೆಲ್ ೩ ಬೌಂಡರಿ ಸಹಿತ ೬೩ ರನ್ ಕಲೆಹಾಕಿದರು. ಅವರಿಗೆ ಟಾಮ್ ಲಾಥಮ್ (೧೪ ರನ್) ಮತ್ತು ಗ್ಲೆನ್ ಫಿಲಿಪ್ಸ್ (೩೪ ರನ್) ಉತ್ತಮ ಸಾಥ್ ನೀಡಿದರು.

ಬಳಿಕ ಬ್ರೇಸ್ ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕಿವೀಸ್ ೨೫೦ರ ಗಡಿ ದಾಟುವಂತೆ ನೋಡಿಕೊಂಡರು. ಬ್ರೇಸ್ ವೆಲ್ ಕೇವಲ ೪೦ ಎಸೆತಗಳಲ್ಲಿ ೨ ಸಿಕ್ಸರ್ ಮತ್ತು ೩ ಬೌಂಡರಿ ಸಹಿತ ಅಜೇಯ ೫೩ ರನ್ ಗಳಿಸಿದರು. ಭಾರತದ ಪರ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ ೨ ವಿಕೆಟ್ ಪಡೆದರೆ, ಶಮಿ ಮತ್ತು ರವೀಂದ್ರ ಜಡೇಜಾ ತಲಾ ೧ ವಿಕೆಟ್ ಪಡೆದರು.