ಮಡಿಕೇರಿ, ಮಾ. ೯: ಡ್ರಗ್ಸ್ ಮುಕ್ತ ಕರ್ನಾಟಕದ ರಾಜ್ಯ ಆಂದೋಲನದೊAದಿಗೆ ಕೈಜೋಡಿಸಿ, ಕೊಡಗು ಜಿಲ್ಲಾ ಪೊಲೀಸ್ ಆಯೋಜಿಸಿದ್ದ ‘‘ಫಿಟ್‌ನೆಸ್ ಫಾರ್ ಆಲ್’’ ಮ್ಯಾರಾಥನ್ ಓಟಕ್ಕೆ ಅದ್ಭುತ ಬೆಂಬಲ ದೊರೆತಿದ್ದು, ನೂರಾರು ಮಂದಿ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಪೊಲೀಸ್ ಮೈದಾನದವರೆಗೆ ಓಟ ಹಾಗೂ ನಡೆಯಲ್ಲಿ ಭಾಗವಹಿಸಿದರು.

ಶ್ವೇತವರ್ಣದ ಮೇಲಂಗಿ ಧರಿಸಿ ಆರು ವರ್ಷದ ಮಕ್ಕಳಿಂದ ಅರವತ್ತು ದಾಟಿದ ವಯಸ್ಕರು, ವಿದ್ಯಾರ್ಥಿಗಳು, ವೈದ್ಯರು, ಪೊಲೀಸರು, ಸಾರ್ವಜನಿಕರು ಉತ್ತಮವಾಗಿ ಆಯೋಜಿಸಿದ್ದ ಓಟದಲ್ಲಿ ಭಾಗವಹಿಸಿ ನಗರದಲ್ಲಿ ಡ್ರಗ್ಸ್ ಬಳಕೆ ವಿರುದ್ಧ ಆರು ವರ್ಷದ ಮಕ್ಕಳಿಂದ ಅರವತ್ತು ದಾಟಿದ ವಯಸ್ಕರು, ವಿದ್ಯಾರ್ಥಿಗಳು, ವೈದ್ಯರು, ಪೊಲೀಸರು, ಸಾರ್ವಜನಿಕರು ಉತ್ತಮವಾಗಿ ಆಯೋಜಿಸಿದ್ದ ಓಟದಲ್ಲಿ ಭಾಗವಹಿಸಿ ನಗರದಲ್ಲಿ ಡ್ರಗ್ಸ್ ಬಳಕೆ ವಿರುದ್ಧ ಸಂದೇಶ ಸಾರಿದರು.

ಮುಂಜಾನೆಯ ಸೂರ್ಯರಶ್ಮಿ ಹರವುತ್ತಿದ್ದಂತೆ ಮ್ಯಾರಾಥನ್ ಭಾಗವಹಿಸುವಿಕೆಗೆ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ನೆರೆಯ ಲಾರಂಭಿಸಿದ ಆಸಕ್ತರ ಸಂಖ್ಯೆ ವೃತ್ತ ಹಾಗೂ ರಸ್ತೆಯುದ್ದಕ್ಕೂ ಕೂಡಿ ಕೊಂಡಿತು. ಉದ್ಘಾಟನಾ ಭಾಷಣ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಮಾದಕ ಮುಕ್ತ ಕರ್ನಾಟಕದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಕೊಡಗು ಪೊಲೀಸ್ ಸನ್ನದ್ಧವಾಗಿದ್ದು, ನಿನ್ನೆದಿನ ವೀರಾಜಪೇಟೆಯಲ್ಲಿ ಮೂವತ್ತು ಕೆಜಿಯಷ್ಟು ಗಾಂಜಾ ವಶಪಡಿಸಿ ಕೊಂಡಿರುವುದಾಗಿ ಹೇಳಿದರು. ಎರಡು ವರ್ಷದಿಂದ ಜಿಲ್ಲೆಯಲ್ಲಿ ಮಾದಕದ ವಿರುದ್ಧ ಸಮರ ಸಾರಿರುವ ಪೊಲೀಸರು, ಇಲ್ಲಿಯತನಕ ೨೧೦ ಕೆ.ಜಿ. ಗಾಂಜಾ ವಶಪಡಿಸಿ ಕೊಂಡಿದ್ದು, ೨೦೫ ವಿವಿಧ ಪ್ರಕರಣದಲ್ಲಿ ೪೦೦ಕ್ಕೂ ಅಧಿಕ ಆಪಾಧಿತರ ವಿರುದ್ಧ ಮೊಕದ್ದಮೆ ಹೂಡಿರುವುದಾಗಿ ವಿವರಿಸಿದರು. ಮಾದಕ ವಸ್ತು ಬಳಕೆಯು ಸುಂದರ ಸಮಾಜ ನಿರ್ಮಾಣದ ಶತ್ರುವಾಗಿದ್ದು, ಯುವಜನತೆ ಮತ್ತು ಸಮಾಜ ಇದರ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದರು.

ಮ್ಯಾರಾಥನ್ ಸ್ಪರ್ಧೆಯಲ್ಲಿ ೨೦೦ ಪೊಲಿಸರು, ನಾಲ್ವರು ಡಿ.ವೈ.ಎಸ್ಪಿ, ಹತ್ತು ವೃತ್ತ ನಿರೀಕ್ಷಕರು, ೨೫ ಠಾಣಾಧಿಕಾರಿಗಳು, ಲಯನ್ಸ್, ರೋಟರಿ, ರೆಡ್‌ಕ್ರಾಸ್, ಯೋಗ, ಮಾರ್ನಿಂಗ್ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ವಾರ‍್ಸ್ ಸದಸ್ಯರುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿರು ವುದಾಗಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು ‘ಶಕ್ತಿ’ಗೆ ತಿಳಿಸಿದರು.

ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಾ|| ಅಮೃತ್ ನಾಣಯ್ಯ, ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಅದ್ವೆöÊತ್ ಹುಂಡೈ ವಲಯ ವ್ಯವಸ್ಥಾಪಕ ದಿವಾಕರ್, ವಿಕ್ರಂ ಜಾದೂಗಾರ್ , ಶ್ರೀಮತಿ ಕೆ. ರಾಮರಾಜನ್ ಹಾಗೂ ಇತರರು ಹಾಜರಿದ್ದರು. ವಿಕ್ರಂ ಅವರಿಂದ ಡ್ರಗ್ಸ್ ವಿರುದ್ಧ ಅರ್ಥಪೂರ್ಣ ಜಾದೂ ಪ್ರದರ್ಶನವಿತ್ತು.

ಪೊಲೀಸ್ ಕವಾಯತು ಮೈದಾನ ತಲುಪಿದ ಮ್ಯಾರಾಥನ್ ತಂಡಗಳಿಗೆ ಮೆಡಲ್ ವಿತರಿಸಲಾಯಿತು. ಒಂದನೇ ತರಗತಿಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ, ಪುರುಷರು- ಮಹಿಳೆಯರಿಗೆ, ಪೊಲೀಸ್ ಇಲಾಖೆಯ ಮಂದಿಗೆ ವಿವಿಧ ವಿಭಾಗಗಳಲ್ಲಿ ಮೆಡಲ್ ನೀಡಿ ಗೌರವಿಸಲಾಯಿತು.