ಮಡಿಕೇರಿ, ಮಾ. ೭ : ಸೋಮವಾರಪೇಟೆ ತಾಲೂಕು ಹಾನಗಲ್ಲು ಬಾಣೆಯಲ್ಲಿ ನೂತನವಾಗಿ ಚಾಲನೆಗೊಳಿಸಲಾಗಿರುವ ೧x೮ ಒಗಿಂ, ೬೬/೧೧ ಕೆ.ವಿ ವಿ ವಿ ಕೇಂದ್ರದಲ್ಲಿ ಒಟ್ಟು ನಾಲ್ಕು ಮಾರ್ಗಗಳಲ್ಲಿ ಬ್ರೇಕರ್‌ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಚಾಲನೆಯಲ್ಲಿರುವ ೨x೫ ಎಂವಿಎ, ೩೩/೧೧ ಕೆ.ವಿ, ವಿ.ವಿ ಕೇಂದ್ರದಲ್ಲಿ ಒಟ್ಟು ೬ ಮಾರ್ಗಗಳು ಚಾಲನೆಯಲ್ಲಿದ್ದು, ನೂತನ ವಿ.ವಿ ಕೇಂದ್ರದಲ್ಲಿ ಹೆಚ್ಚುವರಿ ೧ ಮಾರ್ಗದ ಕಾಮಗಾರಿಯು ಪೂರ್ಣಗೊಂಡಿದ್ದು ಚಾಲನೆಗೊಳಿಸಲು ಬಾಕಿ ಇರುತ್ತದೆ ಹಾಗೂ ಹೆಚ್ಚುವರಿ ೧ ಸಂಖ್ಯೆಯ ಮಾರ್ಗಗಳ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಈ ಇಲ್ಲಾ ಮಾರ್ಗಗಳನ್ನು ನೂತನ ೧x೮ ಎಂವಿಎ, ೬೬/೧೧ ಕೆ.ವಿ ಹಾನಗಲ್ಲು ವಿದ್ಯುತ್ ವಿತರಣಾ ಕೇಂದ್ರದ ಮೇಲೆ ವರ್ಗಾಯಿಸಲು ಹೆಚ್ಚುವರಿ ೪ ಬ್ರೇಕರ್‌ಗಳನ್ನು ಅಳವಡಿಸುವ ಅಗತ್ಯವಿರುತ್ತದೆ. ಆದ ಕಾರಣ ನೂತನ ೬೬/೧೧ ಕೆ.ವಿ ವಿ.ವಿ ಕೇಂದ್ರದಲ್ಲಿ ೪ ಹೆಚ್ಚುವರಿ ಮಾರ್ಗಗಳ ಬ್ರೇಕರ್‌ಗಳನ್ನು ಕ.ವಿ.ಪ್ರ.ನಿ.ನಿ ವತಿಯಿಂದ ಅಳವಡಿಸಲು ಕ್ರಮ ಕೈಗೊಳ್ಳಬೇಕಾಗಿದ್ದು ಸೂಕ್ತ ನಿರ್ದೇಶನ ನೀಡುವಂತೆ ಚಾವಿಸನಿಇ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.