ನಾಪೋಕ್ಲು, ಮಾ. ೭: ಮನೆಯಂಗಳದಲ್ಲಿ ಕಾಡಾನೆಗಳ ದಾಂಧಲೆಯಿAದ ಮನೆ ಮಂದಿ ರಾತ್ರಿ ಇಡೀ ಜೀವ ಭಯದಿಂದ ನಿದ್ದೆಗೆಟ್ಟು ಜಾಗರಣೆ ಮಾಡಿದ ಘಟನೆ ಯವಕಪಾಡಿಯ ಕಾಪಾಲರ ಕಾಲೋನಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಇಲ್ಲಿಗೆ ಸಮೀಪದ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ಕಾಪಾಳ ಕಾಲೋನಿಯ ನಿವಾಸಿಗಳ ಮನೆಯಂಗಳದಲ್ಲಿ ಗುರುವಾರ ರಾತ್ರಿ ಅಡ್ಡಾಡಿರುವ ಕಾಡಾನೆಗಳು ಕಾಫಿ ರಾಶಿಯನ್ನು ತುಳಿದು, ತಿಂದು ನಷ್ಟಪಡಿಸಿವೆ. ಅದಲ್ಲದೆ ಮನೆಗಳಿಗೂ ಹಾನಿ ಮಾಡಿ ಜೀವ ಭಯಕ್ಕೆ ಕಾರಣವಾಗಿದೆ.

ಬೇಬಿ ಎಂಬವರ ಮನೆಯ ಛಾವಣಿಗೆ ಅಳವಡಿಸಿದ ಶೀಟನ್ನು ಎಳೆದು ಹಾಕಿ ಪುಡಿ ಮಾಡಿದ್ದಲ್ಲದೆ ಬಟ್ಟೆಗಳನ್ನು ತುಳಿದು ಹಾಕಿವೆ. ಕಾಲೋನಿಯ ವಾಸದ ಮನೆ ಸುತ್ತಮುತ್ತಲಿನ ಕಾಫಿ ,ಬಾಳೆ ಗಿಡಗಳನ್ನು ದ್ವಂಸ ಮಾಡಿವೆ. ಕೆಲವೆಡೆ ಮನೆ ಗೋಡೆಗಳಿಗೆ ಹಾನಿ ಮಾಡಿರುವ ಘಟನೆ ಜರುಗಿದೆ. ಹೊರ ಭಾಗದಲ್ಲಿ ಇರಿಸಿದ್ದ ವಸ್ತುಗಳು ನಜ್ಜುಗುಜ್ಜಾಗಿವೆ.

ಕಾಲೋನಿಯ ಗೌರಿ ಅಪ್ಪಚ್ಚ ಅವರ ಮನೆಯ ಸುತ್ತಮುತ್ತ ಬಾಳೆ ಗಿಡಗಳು ಕಾಫಿ ಗಿಡಗಳು ನಷ್ಟವಾಗಿದೆ. ಈ ಘಟನೆಯಿಂದಾಗಿ ಕಾಲೋನಿಯ ಜನರು ರಾತ್ರಿಯಿಂದ ಬೆಳಗಿನವರೆಗೆ ಆತಂಕದಿAದ ಕಾಲ ಕಳೆಯುವಂತಾಗಿದೆ. ಕಾಲೋನಿಯಲ್ಲಿ ಕಾಡಾನೆಗಳ ಉಪಟಳದಿಂದ ಭಯಭೀತರಾಗಿದ್ದೇವೆ. ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿ, ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.