ಮಡಿಕೇರಿ, ಫೆ. ೨೧ : ಭಾಗಮಂಡಲದ ಶ್ರೀ ಭಗಂಡೇಶ್ವರ - ತಲಕಾವೇರಿ ದೇವಾಲಯದ ರೂಡಿ ಸಂಪ್ರದಾಯದAತೆ ಪ್ರತೀ ವರ್ಷ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ತಾ. ೨೬ ರಂದು ಮಹಾಶಿವರಾತ್ರಿ ಪೂಜಾಕಾರ್ಯಕ್ರಮ ನಡೆಯಲಿದೆ.
ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಾ. ೨೬ ರಂದು ಬೆಳಿಗ್ಗೆ ೭ ಗಂಟೆಗೆ ಶತರುದ್ರಾಭಿಷೇಕ, ಬೆಳಿಗ್ಗೆ ೯.೩೦ಕ್ಕೆ ರುದ್ರಹೋಮ, ಮಧ್ಯಾಹ್ನ ೧೨ ಗಂಟೆಗೆ ರುದ್ರಹೋಮದ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ೬ ಗಂಟೆಗೆ ತಾಯಂಬಕ ಸೇವೆ, ಸಂಜೆ ೬.೩೦ಕ್ಕೆ ಲಕ್ಷದೀಪೋತ್ಸವ. ಸಂಜೆ ೬.೩೦ ರಿಂದ ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ. ಸಂಜೆ ೫.೩೦ ರಿಂದ ಭಜನೆ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ ೭.೩೦ ಗಂಟೆಗೆ ಲಘು ಉಪಹಾರ. ರಾತ್ರಿ ೧೦.೩೦ಕ್ಕೆ ದೇವರ ತ್ರಿವೇಣಿ ಸಂಗಮ ಬೇಟಿ, ದೇವರ ಕಟ್ಟೆಪೂಜೆ ಮತ್ತು ಬಾಣಬಿರುಸು ಕಾರ್ಯಕ್ರಮ. ರಾತ್ರಿ ೧೧ ಗಂಟೆಗೆ ಯಕ್ಷ ಕಾವ್ಯ ತರಂಗಿಣಿ ಭಾಗವತ ದಿ|| ಚಂದಪ್ಪ ಪೂಜಾರಿ ಪ್ರತಿಷ್ಠಾನ (ರಿ) ದರ್ಬೆ ಬಂಟ್ವಾಳ ದಕ್ಷಿಣ ಕನ್ನಡ ಇವರಿಂದ ಸ್ವರ ಮಾಧುರಿ ಕಾವ್ಯ ಕನ್ನಿಕೆ ಬಿರುದಾಂಕಿತ ಸಂದ್ಯಾ ಪೂಜಾರಿ ದರ್ಬೆ ಇವರ ದಕ್ಷ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ-ಪ್ರಸಂಗ “ಹರಿ ಹರ ಸುತ ಶ್ರೀ ಧರ್ಮಶಾಸ್ತ” ನಡೆಯಲಿದೆ.
ಶ್ರೀ ತಲಕಾವೇರಿ ದೇವಾಲಯದಲ್ಲಿ ತಾ. ೨೬ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶತರುದ್ರಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ೭ ಗಂಟೆಗೆ ಏಕಾದಶರುದ್ರಾಭಿಷೇಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.