ಕುಶಾಲನಗರ, ಫೆ. ೨೧ : ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆ ಕುರಿತು ಪ್ರಕರಣ ದಾಖಲಾಗಿದೆ.

ಕುಶಾಲನಗರದಿಂದ ತಾ. ೧೮ ರಂದು ಹೆಬ್ಬಾಲೆಗೆ ತೆರಳಿದ ರಕ್ಷಿತಾ (೧೯) ಇದುವರೆಗೆ ಮನೆಗೆ ಬರಲಿಲ್ಲ. ಹುಡುಕಿದರೂ ಪತ್ತೆಯಾಗಿಲ್ಲ ಎಂದು ಯುವತಿಯ ಅಜ್ಜಿ ಕಮಲಮ್ಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ತಾ. ೧೮ರಂದು ಕುಶಾಲನಗರದ ಅಂಗಡಿಗೆ ತೆರಳುತ್ತೇನೆಂದು ಹೋದ ಪುತ್ರಿ ಹರ್ಷಿತ (೧೯) ವಾಪಸ್ ಮನೆಗೆ ಬಂದಿಲ್ಲ ಎಂದು ಅವರ ತಾಯಿ ಚಂದ್ರಕಲಾ ಎಂಬವರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಎರಡು ಪ್ರಕರಣಗಳು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇಬ್ಬರು ಪಿಯುಸಿ ವಿದ್ಯಾರ್ಹತೆ ಹೊಂದಿದ್ದು ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ಇವರ ಮಾಹಿತಿ ತಿಳಿದಲ್ಲಿ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ೯೪೮೦೮೦೪೯೫೧ ಅಥವಾ ೦೮೨೭೬೨೭೪೩೩೩ ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.