ಕಣಿವೆ, ಫೆ. ೨೧: ಇಲ್ಲಿಗೆ ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ತಾ. ೨೩ರಂದು (ಇಂದು) ಶ್ರೀಮಠದ ಆದಿ ಗುರು ಮರುಳ ಸಿದ್ದೇಶ್ವರ ಶ್ರೀ ಹಾಗೂ ಮಹಾಂತ ಸ್ವಾಮೀಜಿಗಳ ಪುಣ್ಯಾರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಶ್ರೀಮಠದಲ್ಲಿ ಮನೇಹಳ್ಳಿ ತೆಪ್ಪೋವನದ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮವೂ ಜರುಗಲಿದೆ.
ಕಾವೇರಿ ನದಿ ದಂಡೆಯಲ್ಲಿರುವ ಸುಕ್ಷೇತ್ರದಲ್ಲಿ ಮೂಲ ಗುರು ಶ್ರೀ ಮರುಳ ಸಿದ್ಧೇಶ್ವರ ಹಾಗೂ ಮಹಾಂತ ಸ್ವಾಮಿಗಳ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೊಡಗು ಸೇರಿದಂತೆ ವಿವಿಧೆಡೆಗಳಿಂದ ೨೦ ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಆಗಮಿಸಲಿದ್ದಾರೆ ಎಂದು ಮಲ್ಲೇಶ ಸ್ವಾಮಿ ತಿಳಿಸಿದ್ದಾರೆ.