x
ಮಡಿಕೇರಿ, ಫೆ. ೨೧: ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ಧತಿಗಳ ಕುರಿತು ಕಾರ್ಯಾಗಾರವನ್ನು ಕಾಫಿ ಮಂಡಳಿ ಮತ್ತು ಸುಕ್ಡೆನ್ ಕಾಫಿ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯಿತಿ ಮತ್ತು ಇಗ್ಗುತ್ತಪ್ಪ ಸಂಘ ನಿಟ್ಟೂರು ಕಾರ್ಮಾಡು ಸಹಕಾರದೊಂದಿಗೆ ತಾ. ೨೪ರಂದು ಬೆಳಿಗ್ಗೆ ೧೦ ಗಂಟೆಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಾಗಾರವನ್ನು ಮುಖ್ಯ ವಿಜ್ಞಾನಿ, ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಡಾ. ಎಸ್. ಎ. ನದಾಫ್, ಹಿರಿಯ ಸಂಪರ್ಕ ಅಧಿಕಾರಿ ಡಿ.ಎಸ್. ಮುಖಾರೀಬ್ ನಡೆಸಿಕೊಳ್ಳಲಿದ್ದಾರೆ ಹಾಗೂ ಸ್ಥಳದಲ್ಲೇ ಮಣ್ಣು ಪರೀಕ್ಷೆ ಮಾಡಿ ಸುಣ್ಣದ ಶಿಫಾರಸನ್ನು ಒದಗಿಸಲಾಗುತ್ತದೆ.
ಬಾಳೆಲೆ ಹೋಬಳಿ ವ್ಯಾಪ್ತಿಯ ಎಲ್ಲಾ ಆಸಕ್ತ ಕಾಫಿ ಬೆಳೆಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತೋಟದ ಮಣ್ಣು ಮಾದರಿಯನ್ನು ತಂದು ಕಾರ್ಯಕ್ರಮದ ಪ್ರಯೋಜನವನ್ನು ಪಡೆಯುವಂತೆ ಗೊಣಿಕೊಪ್ಪಲು ಕಾಫಿ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.