ವೀರಾಜಪೇಟೆ, ಫೆ. ೨೦: ಮಾವನಿಂದ ಅಳಿಯನ ಮೇಲೆ ನ್ಯಾಯಾಲಯದ ಆವರಣದಲ್ಲೆ ಹಲ್ಲೆ ನಡೆದ ಘಟನೆ ವೀರಾಜಪೇಟೆ ನಗರದ ನ್ಯಾಯಾಲಯದಲ್ಲಿ ನಡೆದಿದೆ.

ರಂಜಿತ್ (೩೫) ಎಂಬಾತನೇ ಮಾವನಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು,

ಮಾವನಿಂದ ಅಳಿಯನ ಮೇಲೆ ಹಲ್ಲೆ

(ಮೊದಲ ಪುಟದಿಂದ) ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಳೆದ ಎರಡು ವರ್ಷಗಳಿಂದ ರಂಜಿತ್ ಮತ್ತು ಆತನ ಪತ್ನಿ ನಡುವೆ ವೀರಾಜಪೇಟೆ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನೆ ವಿಚಾರಣೆ ನಡೆಯುತ್ತಿತ್ತು ಎನ್ನಲಾಗಿದೆ.

ಈ ಸಂದರ್ಭ ನ್ಯಾಯಾಲಯದ ಮುಂದೆ ಮಾವ ಚಂದ್ರಶೇಖರ ಮತ್ತು ಅಳಿಯ ರಂಜಿತ್ ನಡುವೆ ಮಾತಿಗೆ ಮಾತು ಬೆಳೆದು ಅಳಿಯ ರಂಜಿತ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಪರಿಣಾಮ ರಂಜಿತ್ ಅವರ ಮೂಗಿನಲ್ಲಿ ರಕ್ತ ಹರಿದಿದ್ದು ತಕ್ಷಣವೇ ನ್ಯಾಯಾಧೀಶರ ಮುಂದೆ ಹೋಗಿ ಘಟನೆ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಂಜಿತ್‌ಗೆ ತಕ್ಷಣ ಚಿಕಿತ್ಸೆ ನೀಡುವಂತೆ ಮತ್ತು ಹಲ್ಲೆ ನಡೆಸಿದ ಚಂದ್ರಶೇಖರ ಮೇಲೆ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದರು. ವೀರಾಜಪೇಟೆ ನಗರ ಠಾಣೆಯಲ್ಲಿ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.