ಮಡಿಕೇರಿ, ಫೆ. ೨೦: ಹಜ್ರತ್ ಸೂಫಿ ಶಹೀದ್ ಮತ್ತು ಹಜ್ರತ್ ಸೈಯದ್ ಹಸನ್ ಸಖಾಫ್ ಹಾಗೂ ಇನ್ನಿತರ ಮಹಾತ್ಮರುಗಳ ಹೆಸರಿನಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಸಮಾರಂಭವು ತಾ.೨೧ ರಿಂದ (ಇಂದಿನಿAದ) ೨೮ರವರೆಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಮ್ಮೆಮಾಡುವಿನಲ್ಲಿ ಎಂಟು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಾ.೨೧ ರಂದು (ಇಂದು) ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದರು.

ಜುಮಾ ನಮಾಝಿನ ಬಳಿಕ ಮಖಾಂ ಝಿಯಾರತ್ ಮತ್ತು ಸಮೂಹ ವಿವಾಹ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮನ್ನು ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ಎಡಪಾಲ ಉದ್ಘಾಟಿಸಲಿದ್ದು, ಟಿಐಎಂಜೆ ಕೋಶಾ ಧಿಕಾರಿ ಆಲಿ ನೆರೂಟ್ ಅಧ್ಯಕ್ಷತೆ ವಹಿಸಲಿದ್ದಾರೆ.

(ಮೊದಲ ಪುಟದಿಂದ) ಎಮ್ಮೆಮಾಡು ಖತೀಬ್ ಹಾಫಿಝ್ ಅಬ್ದುಲ್ ರಾಝಿಕ್ ಫೈಝಿ ಮುಖ್ಯಭಾಷಣ ಮಾಡಲಿದ್ದಾರೆ.

ರಾತ್ರಿ ೮ ಗಂಟೆಗೆ ಎಮ್ಮೆಮಾಡು ಮುದರಿಸ್ ಹಂಸ ಸಖಾಫಿ ಮಲಪ್ಪುರಂ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಹೈದರೂಪಿ ಪ್ರಾರ್ಥನೆ ನೆರವೇರಿಸಲಿದ್ದಾರೆ. ಅಬ್ದುಲ್ ರಝಾಖ್ ಅಬ್ರಾರಿ ಪತ್ತನಂತಿಟ್ಟ "ಪರಲೋಕ ಪರಾಜಿತರ್" ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.

ತಾ.೨೨ ರಂದು ದಿಕ್ರ್ ಹಲ್ಖಾ ಮತ್ತು ಮತಪ್ರವಚನ ನಡೆಯಲಿದ್ದು, ಕೂರಿಕುಝಿ ತಂಙಳ್ ಸಯ್ಯಿದ್ ಝೈನುದ್ದೀನ್ ಅಲ್ ಬುಖಾರಿ ಲಕ್ಷದ್ವೀಪ್ ನೇತೃತ್ವ ವಹಿಸಲಿದ್ದಾರೆ. ರಾತ್ರಿ ೮ ಗಂಟೆಗೆ ಮತಪ್ರವಚನ ನಡೆಯಲಿದ್ದು, ಕಾಸರಗೋಡಿನ ಸಯ್ಯಿದ್ ಖಮರುದ್ದೀನ್ ತಂಙಳ್ ದುಆ ನೆರವೇರಿಸಲಿದ್ದಾರೆ. ಉಸ್ಮಾನ್ ಔಹರಿ ನೆಲ್ಯಾಡಿ "ಲಹರಿಕ್ಕ್ ಅಡಿಮಪ್ಪೆಡುನ್ನ ಯುವದ" ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.

ತಾ.೨೩ ರಂದು ಮಗ್ರಿಬ್ ನಮಾಝ್ ಬಳಿಕ ಮಲಪ್ಪುರಂ ಮನ್ಹಜ್ ಚೆರ್‌ಮಾನ್ ಸಯ್ಯಿದ್ ಸಾಲಿಂ ಅಲ್ ಬುಖಾರಿ ತಂಙಳ್ ನೇತೃತ್ವದಲ್ಲಿ ಖತಂ ದುಆ ನೆರವೇರಲಿದೆ. ರಾತ್ರಿ ೮ ಗಂಟೆಗೆ ಮತಪ್ರವಚನ ನಡೆಯಲಿದ್ದು, ಆಟೀರಿ ತಂಙಳ್ ಸಯ್ಯಿದ್ ವಿ.ಪಿ. ಅಬ್ದುಲ್‌ರಹ್ಮಾನ್ "ಸ್ವಲಾತಿಲೂಡೆ ಸ್ವರ್ಗತ್ತಿಲೇಕ್" ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ತಾ.೨೪ ರಂದು ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಕಿಲ್ಲೂರ್ ತಂಙಳ್ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಯ್ಯಿದ್ ಮುಈನಲಿ ಶಿಹಾಬ್ ತಂಙಳ್ ಪಾಣಕಾಡ್ ವಹಿಸಲಿದ್ದು, ಖುದ್ವತುಸ್ಸಾದಾತ್ ಸಯ್ಯಿದ್ ಆಟಕೊಯ ತಂಙಳ್ ಕುಂಬೋಲ್ ಉದ್ಭೋಧನೆ ಮಾಡಲಿದ್ದಾರೆ. ಕ್ಯಾಲಿಕಟ್ ನಾಲೆಡ್ಜ್ ಸಿಟಿ ನಿರ್ದೇಶಕ ಡಾ.ಅಬ್ದುಲ್ ಹಕೀಂ ಅಝ್ಹರಿ ಕಾಂತಪುರA ಮುಖ್ಯ ಭಾಷಣ ಮಾಡಲಿದ್ದು, ವಕ್ಫ್ ಮಂಡಳಿ ಮಾಜಿ ಚರ‍್ಮಾನ್ ಮೌಲಾನಾ ಶಾಫಿ ಸಅದಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಸಭಾಪತಿ ಯು.ಟಿ. ಖಾದರ್, ವಸತಿ ಮತ್ತು ವಕ್ಫ್ ಮಂಡಳಿ ಸಚಿವ ಜಮೀರ್ ಅಹ್ಮದ್, ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷ ಎಸ್.ಆರ್. ಮೆಹರೋಝ್ ಖಾನ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ರಾತ್ರಿ ೮ ಗಂಟೆಗೆ ಮತಪ್ರವಚನ ನಡೆಯಲಿದ್ದು, ಎಮ್ಮೆಮಾಡು ಸಯ್ಯಿದ್ ಇಸ್ಹಾಖ್ ಲತ್ವೀಫಿ ಅಲ್ ಹೈದರೂಪಿ ದುಆ ನೆರವೇರಿಸಲಿದ್ದಾರೆ. ಶಫೀಖ್ ಬದ್ರಿ ಕಡಕ್ಕಲ್ "ಅಲ್ಲಾಹು ಆದರಿಚ್ಚ ಅಡಿಮಗಳ್" ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ತಾ.೨೫ ರಂದು ರಾತ್ರಿ ೮ ಗಂಟೆಗೆ ಮತಪ್ರವಚನ ನಡೆಯಲಿದ್ದು, ಎಮ್ಮೆಮಾಡು ಸಯ್ಯಿದ್ ಖಾತಿಂ ಸಖಾಫಿ ಅಲ್ ಹೈದರೂಸಿ ದುಆ ನೆರವೇರಿಸಲಿದ್ದಾರೆ. ನೌಫಲ್ ಸಖಾಫಿ ಕಳಸ "ಆಗೋಷವುಂ ಆರ್ಬಾಡವುಂ" ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.

ತಾ.೨೬ ರಂದು ಬೆಳಿಗ್ಗೆ ೧೧ ಗಂಟೆಗೆ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ತಂಙಳ್ ಕೂರತ್ ನೇತೃತ್ವದಲ್ಲಿ ದುಆ ಮಜ್ಲಿಸ್ ನಡೆಲಿದ್ದು, ರಾತ್ರಿ ೮ ಗಂಟೆಗೆ ಮತಪ್ರವಚನ ನಡೆಯಲಿದೆ. ಎಮ್ಮೆಮಾಡು ಸಯ್ಯಿದ್ ಶರಫುದ್ದೀನ್ ಹಿಮಮಿ ಅಲ್ ಹೈದರೂಸಿ ದುಆ ನೇತೃತ್ವ ವಹಿಸಲಿದ್ದಾರೆ. ಮಶ್‌ಹೂದ್ ಸಖಾಫಿ ಗೂಡಲ್ಲೂರ್ "ಮಾದೃಗಾ ಕುಡುಂಬA" ಎಂಬ ವಿಷಯದ ಕುರಿತು ಮುಖ್ಯಭಾಷಣ ಮಾಡಲಿದ್ದಾರೆ.

ತಾ.೨೭ ರಂದು ಮಗ್ರಿಬ್ ನಮಾಝ್‌ನ ಬಳಿಕ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಎಮ್ಮೆಮಾಡು ಮುದರಿಸ್ ಹಂಸ ಸಖಾಫಿ ಮಲಪ್ಪುರಂ ನೇತೃತ್ವ ವಹಿಸಲಿದ್ದಾರೆ. ರಾತ್ರಿ ೮ ಗಂಟೆಗೆ ಮತಪ್ರವಚನ ನಡೆಯಲಿದ್ದು, ಕೀಚೇರಿ ಮುದರೀಸ್ ಸಯ್ಯಿದ್ ಸಮೀಹ್ ಅನ್ವಾರಿ ಅಲ್ ಅಹ್ಸನಿ ದುಆ ನೇತೃತ್ವ ವಹಿಸಲಿದ್ದಾರೆ. ಮುನೀರ್ ಹುದವಿ ವಿಳಯಿಲ್ "ಹೃದಯ ರೋಗಙಳ್" ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ತಾ.೨೮ ರಂದು ಜುಮಾ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಎರುಮಾಡ್ ತಂಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದರೂಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಮ್ಮೆಮಾಡು ಟಿಐಎಂಜೆ ಉಪಾಧ್ಯಕ್ಷ ಬಿ.ಯು.ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಉದ್ಭೋಧನೆ ನೆರವೇರಿಸಲಿದ್ದಾರೆ. ಕರ್ನಾಟಕ ಜಂಇಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ ರೋಡ್ ಮುಖ್ಯಭಾಷಣ ಮಾಡಲಿದ್ದು, ನೂರುಸ್ಸಾದಾತ್ ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ಅಲ್ ನೇತೃತ್ವದಲ್ಲಿ ಸಮಾರೋಪ ನಡೆಯಲಿದೆ. ಬಾಯಾರ್ ತಂಙಳ್ ಬುಖಾರಿ ದುಆ ನೇತೃತ್ವ ವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ನೇತಾರರು ಭಾಗವಹಿಸಲಿದ್ದು, ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಸ್ತಿçÃಯರಿಗೆ ಪ್ರತ್ಯೇಕ ಸ್ಥಳಾವಕಾಶವಿದ್ದು, ಮಗ್ರಿಬ್ ನಮಾಝಿನ ಬಳಿಕ ದಫ್ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ಉಸ್ಮಾನ್ ಮಾಂದಾಲ್, ಅಬ್ದುಲ್ ಲತೀಫ್ ಕೂರುಳಿ, ಹಸೈನಾರ್ ಕನ್ನಡಿಯಂಡ ಉಪಸ್ಥಿತರಿದ್ದರು.