ಮಡಿಕೇರಿ, ಫೆ. ೨೦ : ತನ್ನ ಸಾಹಿತ್ಯದ ಮೂಲಕ ಕೊಡಗಿನ ಸಿರಿಯನ್ನು ಕಟ್ಟಿಕೊಟ್ಟ ‘ಕವಿಶಿಷ್ಯ’ ಪಂಜೆ ಮಂಗೇಶರಾಯರ ೧೫೦ನೇ ಜನ್ಮದಿನವನ್ನು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ಸರಕಾರಿ ಪ್ರಥಮ ದರ್ಜೆ

ಕಾಲೇಜು ಸಂಯುಕ್ತಾಶ್ರಯದಲ್ಲಿ ಆಚರಿಸಲಾಯಿತು.

ಪಂಜೆ ಮಂಗೇಶರಾಯರು ಶಿಕ್ಷಕರಾಗಿ ಕೆಲಸ ಮಾಡಿದ್ದ ಅಂದಿನ ಸೆಂಟ್ರಲ್ ಸ್ಕೂಲ್, ಇಂದಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ಗಣ್ಯರು ಪಾಲ್ಗೊಂಡು ಮಂಗೇಶರಾಯರ ಸೇವೆ, ಸಾಧನೆ, ಆಶಯವನ್ನು ಯುವಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದರು.

ನವಸಾಹಿತ್ಯದ ಜನಕ ಪಂಜೆ

ಪAಜೆ ಮಂಗೇಶರಾಯರು ನವಸಾಹಿತ್ಯ ಲೋಕದ ಜನಕ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಬಣ್ಣಿಸಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೇರು ವ್ಯಕ್ತಿತ್ವದ ಪಂಜೆ ಮಂಗೇಶರಾಯರ ಕುರಿತು ಮರೆತುಹೋದ ಸಂಗತಿಯನ್ನು ಯುವಪೀಳಿಗೆಗೆ ತಿಳಿಸುವ ಮಹತ್ತರ ಕಾರ್ಯಕ್ರಮವನ್ನು ಕ.ಸಾ.ಪ. ಮಾಡಿದೆ. ಮಡಿಕೇರಿಯಲ್ಲಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ, ಮಾಡಿದ ಸಾಧನೆ ಎಂದಿAಗೂ ಮರೆಯುವಂತದಲ್ಲ. ಮಕ್ಕಳ ಸಾಹಿತ್ಯವನ್ನು ಹುಟ್ಟುಹಾಕಿ ಸಾಹಿತ್ಯಲೋಕಕ್ಕೆ ಹೊಸ ಆಯಾಮ ನೀಡಿದರು. ರಾಷ್ಟçಕವಿ ಕುವೆಂಪು ಅವರಿಗೂ ಪಂಜೆ ಮಂಗೇಶರಾಯರು ಸ್ಫೂರ್ತಿಯಾಗಿದ್ದರು. ಅವರ ಸಾಹಿತ್ಯಗಳು ಚೈತನ್ಯದ ಚಿಲುಮೆಗಳು. ಬೆಂಗಳೂರಿನಲ್ಲಿ ಆರಂಭಗೊAಡಿರುವ ಕುವೆಂಪು ಭಾಷಾ ಭಾರತಿಯಲ್ಲಿ ಪಂಜೆ ಮಂಗೇಶರಾಯರ ಸಾಹಿತ್ಯವೂ ಭಾಷಾಂತರವಾಗುತ್ತಿದೆ. ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಬಹುದೊಡ್ಡ ಶಕ್ತಿ ಇದೆ. ಮಾಸ್ತಿ ಅವರ ೫೨ ಸಣ್ಣ ಕಥೆಗಳನ್ನು ಇಟಲಿ, ಇಂಗ್ಲೀಷ್ ಭಾಷೆಗೆ ಇಟಲಿಯ ಮಹಿಳಾ ಸಾಹಿತಿ ಅನುವಾದಿಸಿದ್ದರು. ಈ ಕೃತಿ ವಾರ್ಷಿಕ ೧ ಲಕ್ಷ ಪುಸ್ತಕ ಮಾರಾಟವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯ ಜನಪ್ರಿಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸಾಹಿತ್ಯಕ್ಕೆ ಅಗಾಧವಾದ ಶಕ್ತಿಯಿದೆ

ತಮ್ಮ ಸೂಕ್ಷö್ಮ, ಸಂವೇದನಾಶೀಲ ಬರಹದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳಗಿದ ಪಂಜೆ ಮಂಗೇಶರಾಯರ ಸಾಹಿತ್ಯಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು,

(ಮೊದಲ ಪುಟದಿಂದ) ಅವರ ಸಾಹಿತ್ಯಕ್ಕೆ ಅಗಾಧವಾದ ಶಕ್ತಿಯಿದೆ ಎಂದು ಹಿರಿಯ ಸಾಹಿತಿ, ವಾಗ್ಮಿ ಅರವಿಂದ ಚೊಕ್ಕಾಡಿ ಹೇಳಿದರು.

ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಬರಹ, ಮಾತಿನ ಮೂಲಕ ಹಾಸ್ಯವನ್ನು ಸೃಷ್ಟಿಸುವ ಶಕ್ತಿ ಮಂಗೇಶರಾಯರಿಗಿತ್ತು. ತಾವು ಶಿಕ್ಷಕರಾಗಿ ಅಮೋಘ ಕೆಲಸವನ್ನು ಮಾಡಿ ಅವರು ಮಾದರಿಯಾಗಿದ್ದಾರೆ. ಮಕ್ಕಳನ್ನು ತಲುಪುವ ರೀತಿಯಲ್ಲಿ ಬರೆಯುತ್ತಿದ್ದರು. ಅವರ ಸಾಹಿತ್ಯ ಕಲ್ಪನಾ ಶಕ್ತಿಯನ್ನು ಅಗಾಧವಾಗಿ ವಿಸ್ತರಿಸುತ್ತದೆ. ಇವರ ಓದಿನಿಂದ ವಿವೇಕವಂತರಾಗಿ ಉತ್ತಮ ದಾರಿಯಡೆಗೆ ಸಾಗಲು ಪೂರಕವಾಗಿದೆ ಎಂದರು.

ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದ ಪಂಜೆ ಮಂಗೇಶರಾಯರು ಸಾಮಾಜಿಕ ಸುಧಾರಣೆ ಕಾಳಜಿಯನ್ನು ಹೊಂದಿದ್ದರು. ದಲಿತರ ಕುರಿತು ಮೊದಲ ಸಾಹಿತ್ಯ ಬರೆದವರು ಮಂಗೇಶರಾಯರು. ತಾವು ಶಿಕ್ಷಣ ಇಲಾಖೆ ಇನ್ಸ್ಪೆಕ್ಟರ್ ಆಗಿದ್ದ ಸಂದರ್ಭ ದಲಿತ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಪ್ರವೇಶಾತಿ ನೀಡಿದರು. ಅವರೊಂದಿಗೆ ಸಹಭೋಜನ ಮಾಡಿ ಸಮಾನತೆಯನ್ನು ಪ್ರತಿಪಾದಿಸಿದ್ದರು. ಬದುಕಿನ ಬದಲಾವಣೆಯಲ್ಲಿ ಹಾಸ್ಯ ಸಾಧನ, ವಿಶ್ವಾಸದ ಮೂಲಕ ಶಿಕ್ಷಣ ನೀಡಬಹುದು ಎಂಬುದಕ್ಕೆ ಅವರ ಜೀವನ ಉದಾಹರಣೆ ಎಂದರು.

ಪಠ್ಯದೊಂದಿಗೆ ಸಾಹಿತ್ಯ ಓದಿ

ಹಾಸನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್ ಗೌಡ ಅವರು ಸಾಹಿತಿ ಜಲಜಾ ಶೇಖರ್ ಬರೆದ ಅಗ್ನಿಕುಂಡ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಹೊಸಕನ್ನಡ ಸಾಹಿತ್ಯಕ್ಕೆ ಪಂಜೆ ಅವರು ಮುನ್ನುಡಿ ಕಲ್ಪಿಸಿದರು. ಕೊಡಗಿನ ಸಿರಿಯನ್ನು ಕಟ್ಟಿಕೊಟ್ಟಿದ್ದಾರೆ. ಕೊಡಗನ್ನು ನೆನಪಿಸಿಕೊಂಡಾಗಲೆಲ್ಲ ಪಂಜೆ ಕಣ್ಣೆದುರು ಬರುತ್ತಾರೆ. ಕನ್ನಡ ಸಾಹಿತ್ಯ ಬರೆಯುವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹೆಚ್ಚು ಸಾಹಿತ್ಯ ಕನ್ನಡ ನಾಡಿನಲ್ಲಿ ಪ್ರಕಟವಾಗುತ್ತಿರುವುದು ಸಂತಸದ ವಿಚಾರವಾಗಿದೆ. ಅದೇ ರೀತಿ ಓದುಗರ ಸಂಖ್ಯೆ ಕ್ಷೀಣವಾಗುತ್ತಿರುವುದು ಬೇಸರದ ಸಂಗತಿ ಎಂದು ನುಡಿದರು.

ಮಕ್ಕಳು ಪಠ್ಯದ ಭಾಗವನ್ನು ಮಾತ್ರ ಓದುತ್ತಿದ್ದಾರೆ. ಪಠ್ಯದೊಂದಿಗೆ ಆಯ್ದ ಕೃತಿ ಓದುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು. ಆಲೋಚನೆ, ಬದುಕಿನ ಬಗೆಯನ್ನು ದಿಟ್ಟಗೊಳಿಸುತ್ತದೆ. ಪದವೀಧರರಲ್ಲಿ ಆತ್ಮವಿಶ್ವಾಸದ ಭಾವವಿಲ್ಲ, ಆತಂಕವಿದೆ. ಅಂತವರು ಶಿಕ್ಷಣವನ್ನು ಬದುಕು ರೂಪಿಸಿಕೊಳ್ಳಲು ಬಳಸಿಕೊಂಡಿಲ್ಲ. ಸಾಹಿತ್ಯದ ವ್ಯಕ್ತಿತ್ವ ವಿಕಸನವಾಗುತ್ತದೆ. ಕುವೆಂಪು ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ನಾಡಗೀತೆ ರಚಿಸಿದರು. ಅವರ ಅಧ್ಯಯನ ಎಷ್ಟಿತ್ತು ಎಂದು ಇದರಿಂದ ತಿಳಿಯುತ್ತದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಹೃದಯ, ಮೆದುಳನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಈ ಕೆಲಸವನ್ನು ಪಂಜೆ ಅವರು ಮಾಡಿದ್ದಾರೆ ಎಂದರು.

ಕಥಾಪ್ರಕಾರ ಜೀವನಕ್ಕೆ ಬಹಳ ಆಪ್ತವಾದ ಸಾಹಿತ್ಯವಾಗಿದ್ದು, ಕಥೆ ಹೇಳುವುದು, ಕೇಳುವುದು ಪೂರ್ವಜರು ನೀಡಿದ ಬಳುವಳಿ. ಮೊದಲು ಕಥೆ ಕೇಳುವ ಪ್ರವೃತ್ತಿ ಇತ್ತು. ಹಿರಿಯರಲ್ಲಿ ಕಥೆ ಹೇಳುವ ಚಪಲವಿತ್ತು. ಇದೀಗ ಇವೆರಡು ಮಾಸಿಹೋಗಿದೆ. ಬದುಕು ಹಾಗೂ ಸಾಹಿತ್ಯಕ್ಕೆ ಸಂಬAಧವಿದ್ದು, ವರ್ಷಕ್ಕೊಂದು ಕೃತಿಯನ್ನಾದರು ಓದಬೇಕು ಎಂದು ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸಾಹಿತ್ಯ ಸಿರಿ ಮೂಡಿಸಿದವರು ಪಂಜೆ ಮಂಗೇಶರಾಯರು. ಕನ್ನಡ ಶಾಲೆಯನ್ನು ಉಳಿಸಬೇಕು. ಕನ್ನಡ ನಾಡಿನ ಗೌರವ ಕಾಪಾಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೆಂಟ್ರಲ್ ಶಾಲೆಯಾಗಿದ್ದ ಸಂದರ್ಭ ಇಲ್ಲಿ ಪಂಜೆ ಮಂಗೇಶರಾಯರು ಕೆಲಸ ಮಾಡಿದ್ದು, ಇದು ಪುಣ್ಯಭೂಮಿಯಾಗಿದೆ. ಶಿಶು ಸಾಹಿತ್ಯದ ಜನಕರಾಗಿರುವ ಇವರು ಕೊಡಗಿನ ಹುತ್ತರಿ ಹಾಡಿನ ಸೃಷ್ಟಿಕರ್ತರು. ಇದು ಕೊಡಗಿನ ನಾಡಗೀತೆ ಆಗಿದೆ. ಬ್ರಿಟಿಷರೇ ಮುಖ್ಯಶಿಕ್ಷಕರಾಗಿದ್ದ ಕಾಲಘಟ್ಟದಲ್ಲಿ ಮಂಗೇಶರಾಯರು ಮೊದಲ ಭಾರತೀಯ ಮುಖ್ಯಶಿಕ್ಷಕರಾಗಿ ನೇಮಕಗೊಂಡರು. ಹುತ್ತರಿ ಹಾಡು ಕೊಡಗಿನ ಸಂಸ್ಕೃತಿ, ಪರಂಪರೆ, ಪರಿಸರ, ಧೀರೋದತ್ತ ಹಿನ್ನೆಲೆ ವಿವರಿಸುತ್ತದೆ. ಸೃಜನಶೀಲತೆಯೊಂದಿಗೆ ಶಾಸ್ತಿçÃಯ ಪಾಂಡಿತ್ಯವನ್ನು ಹೊಂದಿದ್ದರು. ಕನ್ನಡವನ್ನು ಸಿಂಗರಿಸಿರುವುದರಲ್ಲಿ ಪಂಜೆ ಮಂಗೇಶರಾಯರು ಕೂಡ ಒಬ್ಬರು ಎಂದರು.

ಪAಜೆ ಮಂಗೇಶರಾಯ ರಚಿತ ಹುತ್ತರಿ ಸಾಹಿತ್ಯಕ್ಕೆ ಟಿ.ಡಿ. ಮೋಹನ್ ಧ್ವನಿಯಾದರು. ಕಲಾವಿದ ಸತೀಶ್ ಅವರು ಹಾಡಿನೊಂದಿಗೆ ಪಂಜೆ ಮಂಗೇಶರಾಯ ಚಿತ್ರವನ್ನು ರಚಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್, ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್ ನಿರೂಪಿಸಿ, ಪುದಿಯನೆರವನ ರೇವತಿ ರಮೇಶ್ ಸ್ವಾಗತಿಸಿ, ಎಸ್.ಎಸ್. ಸಂಪತ್ ಕುಮಾರ್ ವಂದಿಸಿದರು.