*ಗೋಣಿಕೊಪ್ಪ, ಫೆ. ೨೧: ದಕ್ಷಿಣ ಕೊಡಗಿನಲ್ಲಿ ಪೋಕ್ಸೊ, ಸೈಬರ್ ಪ್ರಕರಣಗಳು, ಹೆಚ್ಚಾಗುತ್ತಿದೆ. ಈ ಬಗ್ಗೆ ಸಮಾಜಮುಖಿ ಜಾಗೃತಿಯಾಗಿ ಪೊಲೀಸರು ಕಾರ್ಯನಿರ್ವಹಿಸಲು ಜನರ ಸಹಕಾರ ಬಹು ಅಗತ್ಯ ಎಂದು ವೀರಾಜಪೇಟೆ ಡಿ.ವೈ.ಎಸ್.ಪಿ. ಮಹೇಶ್ ಕುಮಾರ್ ತಿಳಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡ ಸಭಾಂಗಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ದಕ್ಷಿಣ ಕೊಡಗಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಪೋಕ್ಸೋ ಪ್ರಕರಣಗಳು ಬೆಳವಣಿಗೆ ಕಾಣುತ್ತಿದೆ. ಕಾರ್ಮಿಕ ವರ್ಗಗಳಲ್ಲಿ ಈ ಪ್ರಕರಣಗಳು ದಾಖಲಾಗುತ್ತಿದೆ. ಮಾಲೀಕರು ತಮ್ಮ ತೋಟದ ಕಾರ್ಮಿಕರಲ್ಲಿ ಈ ವಿಚಾರವಾಗಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು. ಇಂದು ಬೀದಿ ಕಳ್ಳರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದರೂ ಸೈಬರ್ ಕಳ್ಳರ ವ್ಯಾಪ್ತಿ ವಿಸ್ತರಿಸುತ್ತಿದೆ. ಇಂತಹ ಅವ್ಯವಸ್ಥೆಯನ್ನು ಮಟ್ಟಹಾಕಲು ಪೊಲೀಸರು ಜಾಗೃತರಾಗಿದ್ದಾರೆ. ಒಂದAಕಿ ಲಾಟರಿ, ಕೇರಳ ಲಾಟರಿಗಳ ಮಾರಾಟ ಮಾಡುವವರ ಮೇಲೆ ಗಮನಹರಿಸಿದ್ದು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಮುದಾಯ ಮಾದಕ ವ್ಯಸನಗಳಿಂದ ಹಾದಿ ತಪ್ಪಿರುವ ಬಗ್ಗೆ ಗಂಭೀರವಾಗಿ ಸಭೆಯಲ್ಲಿ ಚರ್ಚಿಸಿದ ಡಿ.ವೈ.ಎಸ್.ಪಿ. ಮಹೇಶ್‌ಕುಮಾರ್ ಅವರು ಸುಭದ್ರ, ಸೂಕ್ತ ಸಮಾಜ ನಿರ್ಮಿಸಲು ಯುವ ಸಮುದಾಯದ ಶಕ್ತಿ ಅತ್ಯಮೂಲ್ಯವಾದದ್ದು, ಇಂತಹ ಬಲಿಷ್ಠವಾದ ಬಲವನ್ನು ಮಾದಕ ವ್ಯಸನಗಳಿಂದ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಮಾಜ ಜಾಗೃತಿಯಾಗುವ ಮೂಲಕ ಪೊಲೀಸರಿಗೆ ಸಹಕಾರ ನೀಡಿದಾಗ ಮಾದಕ ಪದಾರ್ಥಗಳ ಸೇವನೆ ಮತ್ತು ಮಾರಾಟ ಮಾಡುವವರ ಬಗ್ಗೆ ತೀಕ್ಷ÷್ಣ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ಜಾಗೃತಿ ಮೂಡಿಸುವ ಕಾರ್ಯ ಪೊಲೀಸರ ಜವಾಬ್ದಾರಿಗಳಲ್ಲಿ ಒಂದಾಗಿದೆ. ಅದನ್ನು ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಬರುವ ವಾಹನ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಲು ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗುವುದು, ಟ್ರಾಫಿಕ್ ಸಮಸ್ಯೆಗೆ ಕಾರಣವಾಗುವ ಆಟೋ ಚಾಲಕರ ಮೇಲೆ ಕ್ರಮ ಜರುಗಿಸಲಾಗುವುದು. ಯಾವುದೇ ಅಪರಾಧ, ಅಪಘಾತ ಘಟನೆಗಳು ನಡೆದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಧೈರ್ಯವನ್ನು ಜನರು ಹೊಂದಬೇಕಾಗಿದೆ. ಈ ಮೂಲಕ ಜನರು ಪೊಲೀಸರೊಂದಿಗೆ ಸ್ನೇಹಮಯವಾಗಿ ವ್ಯವಹರಿಸುವ ವಾತಾವರಣ ನಿರ್ಮಿಸಿ ಕೊಡಲಾಗುತ್ತಿದೆ. ಸೂಕ್ಷö್ಮ ವಿಚಾರಗಳನ್ನು ಪೊಲೀಸರಿಗೆ ತಿಳಿಸಿದಾಗ ತಿಳಿಸಿದವರÀನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗೋಣಿಕೊಪ್ಪ ಜುಮ್ಮ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಗ್ರಾ.ಪಂ. ಸದಸ್ಯ ಶರತ್ ಕಾಂತ್, ಟ್ಯಾಕ್ಸಿ ಚಾಲಕರ ಸಂಘದ ಮಾಜಿ ಅಧ್ಯಕ್ಷ ರಫೀಕ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಿಮ್ಮಾ ಸುಬ್ಬಯ್ಯ, ಪತ್ರಕರ್ತ ಟಿ.ಎಲ್. ಶ್ರೀನಿವಾಸ್, ಜಗದೀಶ್ ಜೋಡುಬೀಟಿ, ಗೋಣಿಕೊಪ್ಪದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಿಸಲು, ಹೆಲ್ಮೆಟ್ ಧರಿಸದ ಯುವಕರ ಮೇಲೆ ಕ್ರಮ, ಒಂದAಕಿ ಲಾಟರಿ ವ್ಯವಹಾರದಲ್ಲಿ ತೊಡಗಿಸಿಕೊಂಡವರ ಬಗ್ಗೆ ಗಮನ ಹರಿಸುವಂತೆ, ಪೊನ್ನಂಪೇಟೆ ರಸ್ತೆ ತಿರುವಿನಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ, ಪಟ್ಟಣದುದ್ದಕ್ಕೂ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ನೀಡಿದ ಸಲಹೆಗಳನ್ನು ಪುರಸ್ಕರಿಸಿ ಡಿ.ವೈ.ಎಸ್.ಪಿ. ಮಾತನಾಡಿದರು.

ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಪಟ್ಟಣದಲ್ಲಿರುವ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಿಬ್ಬಂದಿಗಳ ಕೊರತೆ ಎದುರಾಗಿದೆ. ಹೆಚ್ಚಿನ ಸಿಬ್ಬಂದಿಗಳು ನೇಮಿಸಿದ್ದಲ್ಲಿ ಬಹಳಷ್ಟು ಸಮಸ್ಯೆಗಳು ನೀಗಿಸಬಹುದು ಮತ್ತು ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಸಲಹೆ ನೀಡಿದರು. ಪೊಲೀಸ್ ಉಪನಿರೀಕ್ಷಕ ಪ್ರದೀಪ್ ಕುಮಾರ್ ಉಪಸ್ಥಿತಿಯಲ್ಲಿ ಎಎಸ್‌ಐ ದೇವರಾಜ್, ಸಿಬ್ಬಂದಿ ವೀರೇಶ್ ಇದ್ದರು.