ವೀರಾಜಪೇಟೆ, ಫೆ. ೧೦: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ನಿಲ್ದಾಣದ ನಿರ್ಮಾಣ ಹಂತದ ಕಟ್ಟಡದಲ್ಲಿ ೪೫ ವರ್ಷ ಪ್ರಾಯದ ಪುರುಷನÀ ಮೃತ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಪುರಸಭೆಯ ಕಿರಿಯ ಆರೋಗ್ಯ ಸಹಾಯಕಿ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮಡಿಕೇರಿ ಶವಾಗಾರದಲ್ಲಿರಿಸಲಾಗಿದೆ. ಮೃತರ ವಾರಿಸುದಾರರು ಅಥವಾ ಮಾಹಿತಿ ತಿಳಿದು ಬಂದಲ್ಲಿ ವೀರಾಜಪೇಟೆ ನಗರ ಠಾಣೆ ೦೮೨೭೪-೨೫೭೩೩೩ ಮತ್ತು ಠಾಣಾಧಿಕಾರಿಗಳು ೯೪೮೦೮೦೪೯೫೫ ಸಂಖ್ಯೆಯನ್ನು ಸಂಪರ್ಕಿಸುವAತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.