ಚೆಯ್ಯಂಡಾಣೆ, ಫೆ. ೫: ಯುಎಇ ಯಲ್ಲಿ ಕಾರ್ಯಾಚರಿಸುತ್ತಿರುವ ಎಮ್ಮೆಮಾಡು ಅನಿವಾಸಿ ಒಕ್ಕೂಟದ ೨೦೨೪-೨೫ನೇ ಸಾಲಿನ ಮಹಾಸಭೆ ಇತ್ತೀಚೆಗೆ ದುಬೈನಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ಜಲೀಲ್ ನಿಝಾಮಿ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಾಸರ್ ಸಅದಿ ಸಭೆಯನ್ನು ಉದ್ಘಾಟಿಸಿದರು.

ಕಳೆದ ಸಾಲಿನ ವರದಿ ಮತ್ತು ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಮಾಹಿನ್ ಬಾದುಶ ಅವರು ಸಭೆಯಲ್ಲಿ ಮಂಡಿಸಿದರು. ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಸಲಹಾ ಸಮಿತಿಗೆ ಅಬ್ದುಲ್ ಜಲೀಲ್ ನಿಝಾಮಿ, ಅಲಿ,ಸಲಾಂ ಹಿಮಮಿ, ನಾಸಿರ್ ಸಅದಿ, ಶಫೀಕ್ ಹಿಶಾಮಿ ಹಾಗೂ ಹಂಝ ಬಿ.ಯು. ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಝುಬೈರ್ ಕೂರುಳಿ, ಕಾರ್ಯನಿರ್ವಹಣಾ ಅಧ್ಯಕ್ಷರಾಗಿ ಹಂಝ ಸಿ.ಹೆಚ್., ಉಪಾಧ್ಯಕ್ಷರಾಗಿ ಉಸ್ಮಾನ್ ಬರಾಕೊಲ್ಲಿ, ಕೋಶಾಧಿಕಾರಿಯಾಗಿ ಅಶ್ರಫ್ ಇ.ಸಿ. ಕಾರ್ಗೋ, ಪ್ರಧಾನ ಕಾರ್ಯದರ್ಶಿ ಯಾಗಿ ಹಂಝ ಸಿ.ಎಂ., ಸಹ ಕಾರ್ಯದರ್ಶಿಗಳಾಗಿ ಮಾಹಿನ್ ಬಾದುಶ ಮತ್ತು ಆರಿಫ್ ಸಿ.ಎ., ದಆವಾ ಕಾರ್ಯದರ್ಶಿಯಾಗಿ ಉಬೈದ್ ಕಾಳೇರ, ಮಾಧ್ಯಮ ಉಸ್ತುವಾರಿಯಾಗಿ ಸಯೀದ್ ಕುನ್ನಿತ್ತೊಡಿ, ಕ್ರೀಡಾ ಕೋರ್ಡಿನೇಟರ್ ಆಗಿ ಇರ್ಶಾದ್ ಚೇಂಬರAಡ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಗಫೂರ್ ಎನ್.ಎ., ಅಶ್ರಫ್ ಕೂರುಳಿ, ಹಾರಿಸ್ ಕನ್ನಡಿಯಂಡ, ಹಾರಿಸ್ ಪಾಟೀಲತ್, ಮೂಸ ಪರಂಬ್ ಅವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಅಜೀಜ್ ತಂಗಳ್ ಪ್ರಾರ್ಥಿಸಿ, ಕಾರ್ಯದರ್ಶಿ ಸಹೀದ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಹಂಝ ಸಿ.ಎಂ. ವಂದಿಸಿದರು.