ಮಡಿಕೇರಿ: ಮಡಿಕೇರಿ ಮಹದೇವಪೇಟೆಯ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ೭೬ನೇ ಗಣರಾಜ್ಯೋತ್ಸವ ಸಮಾರಂಭ ವನ್ನು ಡಾ. ಅಬ್ದುಲ್ ಕಲಾಂ ಬಡಾವಣೆ ಸೌಹಾರ್ದ ಸಮಿತಿಯ ಆಶ್ರಯದಲ್ಲಿ ಆಚರಿಸಲಾಯಿತು.

ಬೆಳಿಗ್ಗೆ ೯.೩೦ ಗಂಟೆಗೆ ಸಮಿತಿ ಅಧ್ಯಕ್ಷ ಎಂ.ಎ. ಸಾದಿಕ್ (ಸಾಧು) ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಸರಕಾರಿ ಹೆಡ್‌ಕ್ವಾರ್ಟರ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚೇತನ್ ಅವರು ಧ್ವಜಾರೋಹಣ ಮಾಡಿದರು. ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಹಾಗೂ ಸಮಿತಿಯ ಗೌರವ ಅಧ್ಯಕ್ಷ ಎಂ.ಎ. ನಜೀರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭ ಡಾ. ಚೇತನ್ ಅವರು ಮಾತನಾಡಿ, ಸಂವಿಧಾನ ವನ್ನು ಬಲಪಡಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾವೆಲ್ಲರು ಶ್ರಮಿಸಬೇಕೆಂದರು.

ಬಳಿಕ ಮಾತನಾಡಿದ ಅಮೀನ್ ಮೊಹಿಸಿನ್ ಅವರು, ಸಂವಿಧಾನದ ಮೊದಲ ಸಭೆ ಡಿಸೆಂಬರ್ ೨೬, ೧೯೪೬ ರಂದು ನಡೆಯಿತು.

ಕೊನೆಯ ಸಭೆ ನವೆಂಬರ್ ೨೬, ೧೯೪೯ ರಂದು ಕೊನೆಗೊಂಡಿತು. ಆನಂತರ ಸಂವಿಧಾನ ಅಂಗೀಕಾರವಾಯಿತು. ಇದು ಸರ್ವ ಜನಾಂಗದವರ ಬದುಕು ಕಟ್ಟಿಕೊಳ್ಳಲು ನೆರವಾಯಿತೆಂದು ಹೇಳಿದರು.

ಪ್ರಾರಂಭದಲ್ಲಿ ಸಬಿನಾ ಅವರು ಕ್ರೀಡಾ ಸಮಿತಿಯ ಸಂಚಾಲಕ ಪಾಡಿಯಂಡ ಮಣಿ ಮೇದಪ್ಪ ಅವರ ಉಸ್ತುವಾರಿಯಲ್ಲಿ ಗೀತೆ ಗಾಯನದೊಂದಿಗೆ ಅತಿಥಿಗಳನ್ನು ಸಮಾರಂಭಕ್ಕೆ ಬರಮಾಡಿ ಕೊಂಡರು. ಆದ್ಯಾ ವರ್ಣಿಕರ್, ಸೀಜಾ, ಜೋಯ ಮತ್ತು ನಷ್ಪ ಅವರು ನಾಡಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಎಂ.ಎ. ನಾಸಿರ್ ಅಹಮ್ಮದ್, ಎಂ.ಬಿ. ಕೌಸರ್, ಟಿ.ಆರ್. ಜೀವನ್, ಬಿ.ಪಿ. ಗುರು ಕಿರಣ್, ಝಕ್ರಿಯಾ, ಎಂ.ಎ. ಮನ್ಸೂರ್, ಬಿ.ಎಂ. ಹರೀಶ್, ಎಂ.ಎ. ಭಾಷಾ, ಎಂ.ಕೆ. ಆಸಿಫ್, ಆಸಿಫ್ ಆಲಿ ಹಾಜರಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.ಕಾಟಕೇರಿ ಹರ್‌ಮಂದಿರ ಶಾಲೆ

ಮಡಿಕೇರಿ: ಮಡಿಕೇರಿ ತಾಲೂಕಿನ ಕಾಟಕೇರಿ ಹೆರವನಾಡು ಗ್ರಾಮದಲ್ಲಿನ ಹರ್‌ಮಂದಿರ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಚಾರ್ಯ ರಾಘವೇಂದ್ರ ಜಿ. ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿಯ ವಕೀಲ ನಾಗೇಶ್ ಹೆಚ್.ಯು. ಸ್ವಾತಂತ್ರ‍್ಯ ನಂತರದ ದೇಶದ ಸುಗಮ ಆಡಳಿತಕ್ಕಾಗಿ ರಚಿಸಲಾದ ಸಂವಿಧಾನವನ್ನು ರಕ್ಷಿಸುವುದು ಮತ್ತು ಬೆಳೆಸುವುದು ಎಲ್ಲರ ಕರ್ತವ್ಯ ಎಂಬುದಾಗಿ ಹೇಳಿದರು. ನಿವೃತ್ತ ಯೋಧ ತಳೂರು ಕಾಳಪ್ಪನವರು, ಮಕ್ಕಳು ದೇಶ ಸೇವೆಯ ಕಡೆ ಆಸಕ್ತಿಯನ್ನು ತೋರಿಸಿ ಯಶಸ್ವಿಯಾಗಬೇಕು ಎಂದು ಪ್ರೇರಣಾದಾಯಕ ಮಾತುಗಳನ್ನು ನೀಡಿ ಮಕ್ಕಳಲ್ಲಿ ದೇಶಭಕ್ತಿಯ ಉತ್ಸಾಹವನ್ನು ಬೆಳೆಸಿದರು. ಚೇರಂಬಾಣೆ ಕ್ಲಸ್ಟರ್ ಸಿಆರ್‌ಪಿಗಳಾದ ಕಾವೇರಮ್ಮ ಅವರು ಮಾತನಾಡಿ, ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನದ ಪ್ರಾಮುಖ್ಯತೆಯನ್ನು ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳ ಪಥಸಂಚಲನ, ನೃತ್ಯ ಮತ್ತು ನಾಟಕ ಪ್ರದರ್ಶನಗಳು ನಡೆದವು. ಶಾಲೆಯ ಶಿಕ್ಷಕಿ ಶ್ರೀದೇವಿ ಕೃಷ್ಣ ಮೋಹನ್ ಸ್ವಾಗತ ಕೋರಿದರು. ಶಿಕ್ಷಕಿ ದೇಚಮ್ಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸಹನಾ ವಂದಿಸಿದರು.

ವೀರಾಜಪೇಟೆ ಕರ್ನಾಟಕ ಸಂಘ ಕೂಡಿಗೆ: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕ್ರೀಡಾ ಪ್ರೌಢಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸ ಲಾಯಿತು.

ಧ್ವಜಾರೋಹಣವನ್ನು ಶಾಲೆಯ ಹಿರಿಯ ಶಿಕ್ಷಕರಾದ ಪ್ರೇಮ ನಾರ್ಥನ್ ನೆರವೇರಿಸಿದರು. ದಿನದ ಮಹತ್ವದ ಬಗ್ಗೆ ಕ್ರೀಡಾ ಶಾಲೆಯ ನಿವೃತ್ತ ತರಬೇತಿದಾರ ಆಂಟೋನಿ ಡಿಸೋಜ ತಿಳಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಮುರುಳಿ, ತರಬೇತುದಾರರಾದ ವೆಂಕಟೇಶ, ದಿನಮಣೆ, ಸುರೇಶ್, ಶಿಕ್ಷಕರಾದ ರಂಜಿನಿ, ಅರ್ಷಿತ್, ಮದುರ ಸೇರಿದಂತೆ ಶಿಕ್ಷಕರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.ಮಡಿಕೇರಿ: ಸಂತ ಮೈಕಲರ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು. ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ಸಂಜಯ್ ಕುಮಾರ್ ಅವರು ಮಾತನಾಡಿ, ಈ ದಿನ ವಿಶೇಷವಾದ ದಿನ. ಮನೋಜ್ಞ ವಾದ ದಿನ. ನಮ್ಮ ದೇಶದಲ್ಲಿ ವಿಶೇಷತೆಗಳು, ವಿಭಿನ್ನ ಸಂಸ್ಕೃತಿಗಳಿವೆ. ಪ್ರತಿಯೊಬ್ಬ ಪ್ರಜೆಯು ಈ ದೇಶಕ್ಕೆ ತನ್ನ ಕಾಣಿಕೆಗಳನ್ನು ನೀಡಬೇಕು. ನಾವುಗಳು ಆಲಸ್ಯ ಮನೋಭಾವವನ್ನು ತೊರೆದು, ನಮ್ಮ ದೇಶವನ್ನು ಸುಸಂಪನ್ನ ರಾಷ್ಟçವಾಗಿ ಮಾಡಬೇಕು ಎಂದರು.

ಪ್ರೌಢಶಾಲಾ ವಿಭಾಗದ ಶಿಕ್ಷಕಿ ಭವ್ಯಾ ಅವರು ಮಾತನಾಡಿ, ಸಂವಿಧಾನ ರಚನೆಯಾದಾಗ ೩೯೫ ವಿಧಿಗಳು ೨೨ ಭಾಗಗಳು ೮ ಅನುಸೂಚಿಗಳನ್ನು ಹೊಂದಿತ್ತು. ಇಂದು ಹಲವು ತಿದ್ದುಪಡಿಗಳನ್ನು ಹೊಂದಿ ೪೭೦ ವಿಧಿಗಳು, ೨೫ ಭಾಗಗಳು, ೧೨ ಅನುಸೂಚಿಯನ್ನು ಹೊಂದಿದೆ. ವಿಶ್ವದ ಬೃಹತ್ ಹಾಗೂ ಲಿಖಿತ ಸಂವಿಧಾನ ನಮ್ಮದಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದನ್ನು ನಮ್ಮ ಸಂವಿಧಾನ ಸಾರುತ್ತದೆ. ನಮ್ಮ ಸಂವಿಧಾನ ಇದು ಕೇವಲ ದಾಖಲೆಯಲ್ಲ. ನಮ್ಮ ಪ್ರಜಾಪ್ರಭುತ್ವ ರಾಷ್ಟçದ ಆತ್ಮವಾಗಿದೆ. ಎಲ್ಲರಿಗೂ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರö್ಯವನ್ನು ಖಾತ್ರಿಪಡಿಸುತ್ತದೆ ಎಂದರು. ವೇದಿಕೆಯಲ್ಲಿ ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ಸಂಜಯ್ ಕುಮಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ಎ. ಜಾನ್ಸನ್ ಅವರು ಉಪಸ್ಥಿತರಿದ್ದರು. ಕೇಶವ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಸಿಸಿಲಿಯಾ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಲವೀನ ವಂದಿಸಿದರು. ಈ ಸಂದರ್ಭ ಶಿಕ್ಷಕ, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವೀರಾಜಪೇಟೆ: ೭೬ನೇ ಗಣರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆ ಕರ್ನಾಟಕ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಮಾಳೇಟಿರ ಎಂ. ಬೆಲ್ಲು ಬೋಪಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಗಣರಾಜ್ಯೋತ್ಸವ ಸಂವಿಧಾನದ ಹಬ್ಬವಾಗಿದೆ ಎಂದರು. ಧ್ವಜಾರೋಹಣ ಸಂದರ್ಭ ಕರ್ನಾಟಕ ಸಂಘದ ಕಾರ್ಯದರ್ಶಿ ಮುಂಡ್ಯೋಳAಡ ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೆರ ಯು. ಗಣೇಶ್ ತಮ್ಮಯ್ಯ, ನಿರ್ದೇಶಕರುಗಳಾದ ಸಿ.ಪಿ. ಕಾವೇರಪ್ಪ, ಸಿ.ಎಂ. ಸುರೇಶ್ ನಾಣಯ್ಯ, ಎಂ. ರಾಣು ಮಂದಣ್ಣ, ಬಿ.ಎಂ. ಸುರೇಶ್, ಎಂ.ಬಿ. ದೇವಯ್ಯ ಚುಮ್ಮಿ, ಕಚೇರಿ ಕಾರ್ಯದರ್ಶಿ ರಾಧ ಹಾಗೂ ಮತ್ತಿತರರು ಹಾಜರಿದ್ದರು.

ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಸುಂಟಿಕೊಪ್ಪ: ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಸೀಮ, ಉಪಾಧ್ಯಕ್ಷ ಮನು, ಗ್ರಾ.ಪಂ. ಸದಸ್ಯ ಕೆ.ಎ. ಲತೀಫ್, ಮುಖ್ಯೋಪಾಧ್ಯಾಯ ಮಂಜಯ್ಯ, ಶಿಕ್ಷಕಿ ಶೋಭ, ಸದಸ್ಯ ಅಣಿ ಉಪಸ್ಥಿತರಿದ್ದರು.

ನಿವೃತ್ತ ಸೈನಿಕರ ಸಂಘ ವೀರಾಜಪೇಟೆ: ವೀರಾಜಪೇಟೆ ಪುರಸಭೆಯ ವತಿಯಿಂದ ಕಚೇರಿಯ ಮುಂಭಾಗ ದಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

೭೬ನೇ ಗಣರಾಜ್ಯೋತ್ಸವದ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಹಾ ತಬ್ಸಂ, ಸದಸ್ಯರುಗಳಾದ ಡಿ.ಪಿ. ರಾಜೇಶ್, ಮತೀನ್ ಮಹಮ್ಮದ್ ರಾಫಿ, ಆಶಾ ಸುಬ್ಬಯ್ಯ, ಅಗಸ್ಟಿನ್, ರಜನಿಕಾಂತ್ ಸೇರಿದಂತೆ ಎಲ್ಲ ಸದಸ್ಯರುಗಳು, ನಾಮ ನಿರ್ದೇಶಿತ ಸದಸ್ಯರುಗಳು, ಕಚೇರಿ ಸಿಬ್ಬಂದಿಗಳು, ಪೌರಕಾರ್ಮಿಕರು ಹಾಜರಿದ್ದರು.ಚೆಟ್ಟಳ್ಳಿ: ಕಂಡಕರೆ ಹಯತುಲ್ ಇಸ್ಲಾಂ ಮದರಸದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫಿ ನೆರವೇರಿಸಿದರು.

ತದನಂತರ ನಡೆದ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷತೆಯನ್ನು ಮಹಲ್ ಕತಿಬ್ ಮುಸ್ತಫಾ ಸಖಾಫಿ ವಹಿಸಿದ್ದರು. ಮದರಸ ಮುಖ್ಯಪ್ರಾಧ್ಯಾಪಕರಾದ ಹುಸೈನ್ಬಾದುಷಾ ಸಖಾಫಿ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮದರಸ ಪ್ರಾಧ್ಯಾಪಕರು ಮತ್ತು ಸಮಿತಿ ಸದಸ್ಯರಾದ ನಿಜಾಮ್, ಜಂಶಿದ್ ಹಾರಿಸ್, ಮುಂತಾದವರು ಭಾಗವಹಿಸಿದ್ದರು.ಚೆಯ್ಯಂಡಾಣೆ: ಸಮೀಪದ ಕಿಕ್ಕರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೬ನೇ ಗಣರಾಜ್ಯ ದಿನವನ್ನು ಆಚರಿಸಲಾಯಿತು. ಕಿಕ್ಕರೆ ಗ್ರಾಮದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಯೂಸುಫ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಪ್ರಮುಖರಾದ ರಾಯಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪವಿತ್ರ ಅವರು ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ, ಹಾಡು, ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಅತಿಥಿಗಳು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸಿಹಿ ಹಂಚಲಾಯಿತು. ಮುಖ್ಯ ಶಿಕ್ಷಕಿ ಸುಮಿತ್ರ ಸ್ವಾಗತಿಸಿ, ವಂದಿಸಿದರು.ಸAಪಾಜೆ: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೭೬ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರೂ ಆದ ರಮಾದೇವಿ ಕಳಗಿ ಅವರು ಧ್ವಜಾರೋಹಣ ಮಾಡಿ, ದೀಪಬೆಳಗುವ ಮುಖಾಂತರ ಗಣರಾಜ್ಯೋತ್ಸವ ಬಗ್ಗೆ ಹಿತನುಡಿಗಳನ್ನಾಡಿದರು. ವೈದ್ಯಾಧಿಕಾರಿಗಳಾದ ಡಾ. ಶಶಾಂಕ್ ಈ ಸಂದರ್ಭ ಉಪಸ್ಥಿತರಿದ್ದರು. ಕೇಂದ್ರದ ಆಡಳಿತ ಅಧಿಕಾರಿ ಪಿ. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ಸಿಸ್ಟರ್ ಯಶೋಧ ಸ್ವಾಗತಿಸಿದರು. ಹೆಚ್.ಐ.ಓ. ದರ್ಶನ್ ಮತದಾರರ ಪ್ರತಿಜ್ಞೆ ನೆರವೇರಿಸಿದರು. ಹೆಚ್.ಐ.ಓ. ರಾಕೇಶ್ ವಂದಿಸಿದರು.ಗೋಣಿಕೊಪ್ಪಲು: ೭೬ನೆಯ ಗಣರಾಜ್ಯೋತ್ಸವವನ್ನು ಕಳತ್ಮಾಡುವಿನ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಆಚರಿಸ ಲಾಯಿತು. ಗೋಣಿಕೊಪ್ಪ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಸಿ.ಟಿ. ಅಪ್ಪಣ್ಣ ಧ್ವಜಾರೋಹಣ ನೆರವೇರಿಸಿದರು. ಲಯನ್ಸ್ ಕಾರ್ಯದರ್ಶಿ ಶ್ರೀಮಂತ್ ಮುತ್ತಣ್ಣ, ಲಯನ್ಸ್ ಟ್ರಸ್ಟ್ನ ಅಧ್ಯಕ್ಷ ಪಿ.ಎನ್. ಪೆಮ್ಮಯ್ಯ, ಉಪಾಧ್ಯಕ್ಷರಾದ ಧನು ಉತ್ತಯ್ಯ, ಲಯನ್ಸ್ ಕ್ಲಬ್‌ನ ಅಧಿಕಾರಿಗಳು, ಲಯನ್ಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಸಿ.ಬಿ. ಲತ ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.