ಕೊಡಗಿನ ಕಾಫಿ ತೋಟಗಳಿಗೆ ತೆರಳಬೇಕಾದರೆ ಪ್ರತೀಯೋರ್ವ ಬೆಳೆಗಾರನೂ ಯುದ್ದಕ್ಕೆ ಹೊರಟಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡೇ ತೆರಳಬೇಕಾಗಿದೆ. ಯಾವಾಗ ಯಾವ ಮೂಲೆಯಿಂದ ಶತ್ರುಗಳಂತೆ ಆನೆ, ಹುಲಿ, ಕರಡಿ ಧಾಳಿ ಮಾಡು ತ್ತದೆಯೋ ಎಂದು ಗೊತ್ತಾಗದಂತಹ ಪರಿಸ್ಥಿತಿಯಲ್ಲಿ ಬೆಳೆಗಾರ ನಿಜವಾದ ಅರ್ಥದಲ್ಲಿಯೂ ಸೈನಿಕನಂತೆ ಆಗಿಬಿಟ್ಟಿದ್ದಾನೆ!

ಗಮನಿಸಿ ನೋಡಿದರೆ, ಕೊಡಗಿನ ಬಹುತೇಕ ತೋಟಗಳು ಮೃಗಾಲಯವೇ ಆಗಿಬಿಟ್ಟಿವೆ. ಕಾಡಿನಲ್ಲಿರಬೇಕಾದ ವನ್ಯಜೀವಿಗಳು ಕಾಡು ಬಿಟ್ಟು ತೋಟ ಸೇರಿಕೊಂಡು ಬಿಟ್ಟಿದೆ. ಆನೆ, ಹುಲಿ, ಚಿರತೆ, ಕರಡಿ, ನವಿಲು, ಕಾಡೆಮ್ಮೆ, ಕಾಡುಕೋಣ, ಜೊತೆಗೆ ಸಾವಿರಾರು ಮಂಗಗಳಿಗೂ ಕಾಫಿ ತೋಟಗಳೇ ಆಶ್ರಯ ತಾಣವಾಗಿದೆ.

ಕೊಡಗಿಗೆ ಬರುವ ಪ್ರವಾಸಿಗರು ವನ್ಯಜೀವಿ ನೋಡಬೇಕೆಂದು ಬಯಸಿದರೆ ಇಲ್ಲಿನ ಕಾಫಿ ತೋಟಗಳಿಗೆ ಕರೆದೊಯ್ಯಬಹುದು ಎಂಬುದು ತಮಾಷೆಯ ಮಾತಂತೂ ಅಲ್ಲವೇ ಅಲ್ಲ. !

ಕೊಡಗಿನ ಕೃಷಿಕರನ್ನು ಆನೆಗಳಲ್ಲಿ ಎಷ್ಟು ವಿಧ ಎಂದು ಕೇಳಿ ನೋಡಿದರೆ ದೊರಕುವ ಉತ್ತರ - ಸಾಕಾನೆ, ಕಾಡಾನೆ ಮತ್ತು ತೋಟದಾನೆ!

ಕಾಡಾನೆ, ಸಾಕಾನೆ ಗೊತ್ತು. ಇದು ಯಾವುದಿದು ತೋಟದಾನೆ? ಎಂದರೆ, ನೊಂದ ಬೆಳೆಗಾರ ಹೇಳುತ್ತಾನೆ...

ನನ್ನದೇ ತೋಟದಲ್ಲಿ ೨೦ ವರ್ಷಗಳಿಂದ ಬೀಡುಬಿಟ್ಟಿರುವ ಆನೆಗಳಿವು. ನಾನು ಸಾಕದೇ ಇದ್ದರೂ ನನ್ನ ತೋಟದಲ್ಲಿ ಸಿಕ್ಕುವ ಹಲಸು, ಬಿದಿರು, ಸೊಪ್ಪು ತಿಂದು, ಕೆರೆ ನೀರು ಕುಡಿದು ನೆಮ್ಮದಿಯಿಂದ ಜೀವಿಸುತ್ತಾ ನಮ್ಮ ನೆಮ್ಮದಿ ಹಾಳು ಮಾಡುತ್ತಿವೆ. ವಿಪರ್ಯಾಸ ಎಂದರೆ ತೋಟದಲ್ಲಿಯೇ ಹುಟ್ಟಿ ಬೆಳೆದ ಅನೇಕ ಆನೆಗಳು ೧೫-೨೦ ವರ್ಷಗಳಿಂದ ಕಾಡನ್ನೇ ನೋಡದೇ ತೋಟಗಳಲ್ಲಿಯೇ ಸುತ್ತಾಡಿಕೊಂಡು ತೋಟದ ಆನೆಗಳಾಗಿಯೇ ಬೆಳೆದಿವೆ. ಇವೇ ತೋಟದ ಆನೆಗಳು!

ರಾಜ್ಯದಲ್ಲಿ ಕಾಡಾನೆಗಳ ದಾಂಧಲೆಯ ಸಮಸ್ಯೆಗಳನ್ನು ಮೊದಲು ಎದುರಿಸಿದ್ದೇ ಕೊಡಗು ಜಿಲ್ಲೆ. ಈ ಸಮಸ್ಯೆಗೆ ಈಗ ೨೫-೨೬ ವರ್ಷಗಳಾಗಿದೆ. ನಂತರದ ವರ್ಷ ಗಳಲ್ಲಿ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರಗಳಂತಹ

ಜಿಲ್ಲೆಗಳಲ್ಲಿಯೂ ಕಾಡಾನೆ ಧಾಳಿ ಸಮಸ್ಯೆ ವ್ಯಾಪಕವಾಯಿತು.

ಕೊಡಗಿನಲ್ಲಿ ಮೊದಲು ಸಮಸ್ಯೆ ಕಾಣಿಸಿಕೊಂಡಾಗಲೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊAಡಿದ್ದರೆ ರಾಜ್ಯವ್ಯಾಪಿ ೮ ಜಿಲ್ಲೆಗಳಲ್ಲಿ ಕಾಡಾನೆ ಸಮಸ್ಯೆ ಇಷ್ಟೊಂದು ವ್ಯಾಪಕವಾಗಿ ವಿಸ್ತರಿಸುತ್ತಲೇ ಇರಲಿಲ್ಲ.

ವಿಪರ್ಯಾಸ ನೋಡಿ. ಕರ್ನಾಟಕದಲ್ಲಿಯೇ ವರ್ಷಕ್ಕೆ ೪೫-೫೦ ಜನ ಕಾಡಾನೆ ಧಾಳಿಯಿಂದ ಸಾವನ್ನಪ್ಪುತ್ತಿದ್ದಾರೆ ೨೦೦ಕ್ಕೂ ಅಧಿಕ ಜನ ಕಾಡಾನೆ ಧಾಳಿಯಿಂದ ಗಾಯಾಳುಗಳಾಗುತ್ತಿದ್ದಾರೆ. ಕಾಡಾನೆ ಧಾಳಿಯಿಂದಾಗಿ ಹಾಸಿಗೆ ಹಿಡಿದಿರುವ ಕೊಡಗಿನ ೬ ಮಂದಿ ಸೇರಿದಂತೆ ರಾಜ್ಯದ ೨೨ ಮಂದಿಯ ಸ್ಥಿತಿ ದಾರುಣವಾಗಿದೆ.

ಹೀಗಿದ್ದರೂ ರಾಜ್ಯ ಸರ್ಕಾರಕ್ಕೆ (ಹಾಲಿ ಮತ್ತು ಈ ಹಿಂದಿನ ಸರ್ಕಾರ ಸೇರಿ) ಕಾಡಾನೆ ಸಮಸ್ಯೆ ಎಂಬುದು ಗಂಭೀರ ಸಮಸ್ಯೆಯೇ ಅನ್ನಿಸಿಲ್ಲ. ಮಾನವ - ಕಾಡಾನೆ ಸಂಘರ್ಷ ಎಂಬ ಪ್ರಶ್ನೆ ಎದುರಾದಾಗಲೆಲ್ಲಾ, ಕಾಡಿನಲ್ಲಿ ವನ್ಯಜೀವಿಗಳಿಗೆ ಸೂಕ್ತ ಆಹಾರ ಕಲ್ಪಿಸುತ್ತೇವೆ. ಕಾಡಿನಲ್ಲಿ ಆಹಾರ, ನೀರು ದೊರಕದೇ ವನ್ಯಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ ಎಂಬ ಸಿದ್ಧ ಸಹಜ ಉತ್ತರ ದೊರಕುತ್ತಲೇ ಇದೆ. ಕಾರ್ಯಪಡೆ ರಚಿಸಿದ್ದೇವೆ, ಸೂಕ್ತ ವಾಹನ ನೀಡಿದ್ದೇವೆ. ನಿಯಂತ್ರಣ ಕೊಠಡಿಗಳು ತೆರೆದಿವೆ ಎಂಬೆಲ್ಲಾ ಉತ್ತರಗಳನ್ನು ಕೇಳಿ ಕೇಳಿ, ಕಿವಿ ಸುಸ್ತಾಗಿದೆ.

ಕಳೆದ ಎರಡೂವರೆ ದಶಕಗಳಿಂದ ಕಾಡಾನೆ ಮತ್ತು ವನ್ಯಜೀವಿ ಸಮಸ್ಯೆಯ ಬಗ್ಗೆ ಆಡಳಿತದಲ್ಲಿರುವವರನ್ನು ಪ್ರಶ್ನಿಸಿ ಪತ್ರಕರ್ತರಿಗೆ ಸಾಕಾಗಿದೆ ಕಾರ್ಯಪಡೆಯ ವಾಹನಗಳು ಹಳತ್ತಾಗಿವೆ. ಸಿಬ್ಬಂದಿಗಳು ನಿವೃತ್ತರಾಗುತ್ತಿದ್ದಾರೆ. ಕಾಡೇ ನೋಡದ, ಆನೆಗಳನ್ನೇ ಕಾಣದ ಅಧಿಕಾರಿಗಳು ಬೆಂಗಳೂರಿನ ಎಸಿ ರೂಮಿನಲ್ಲಿ ಕುಳಿತು ಹೊಸ ಹೊಸ ಆದೇಶಗಳನ್ನು ವನ್ಯಜೀವಿ ಸಮಸ್ಯೆ ಬಗೆಹರಿಸಲು ನೀಡುತ್ತಾ ಬಂದಿದ್ದಾರೆ.

ಸಮಸ್ಯೆ ಏನಾಗಿದೆ? ಸಮಸ್ಯೆ ಬಿಗಡಾಯಿಸಿದೆ. ಕಾಡಾನೆ, ಹುಲಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಕಾಫಿ ತೋಟಗಳು ವನ್ಯಜೀವಿಗಳ ತಾಣವಾಗಿದೆ. ತನ್ನದೇ ತೋಟಕ್ಕೇ ತೋಟ ಮಾಲೀಕ ಜೀವ ಭಯದಿಂದ ಕಾಲಿಡಬೇಕಾದ ದುಸ್ಥಿತಿ ಮುಂದುವರಿದೇ ಇದೆ.

ರಾಜ್ಯದಲ್ಲಿ ಅರಣ್ಯ ಸಚಿವರಿದ್ದಾರೆ. ಹೇಳಿ ಕೇಳಿ ಇವರು ಅರಣ್ಯ ಸಚಿವರು. ಕರ್ನಾಟಕದಲ್ಲಿ ಕಾಡು ಇರುವುದೇ ಅಬ್ಬಬ್ಬಾ ಎಂದರೆ ೮ ಜಿಲ್ಲೆಗಳಲ್ಲಿ ಮಾತ್ರ. ಓರ್ವ ಅರಣ್ಯ ಸಚಿವರಿಗೆ ಈ ೮ ಜಿಲ್ಲೆಗಳಲ್ಲಿನ ಆಗುಹೋಗುಗಳನ್ನು ಗಮನಿಸಿ ಅಲ್ಲಿನ ದುಸ್ಥಿತಿ ಪರಿಹರಿಸಲು ಏನಿದೆ ಕಷ್ಟ? ಕಳೆದ ೧೦ ವರ್ಷಗಳಿಂದ ಎಷ್ಟು ಅರಣ್ಯ ಸಚಿವರು ಕೊಡಗಿಗೆ ಭೇಟಿ ನೀಡಿದ್ದಾರೆ. ಎಷ್ಟು ಸಚಿವರು ಕಾಡಿನ ಸಮಸ್ಯೆ, ವನ್ಯಜೀವಿಗಳ ದಾಂಧಲೆ ಸಂಬAಧಿತ ಕೊಡಗೂ ಸೇರಿದಂತೆ ಮಲೆನಾಡು ಜಿಲ್ಲೆಗಳ ಬೆಳೆಗಾರರೊಂದಿಗೆ ಚರ್ಚಿಸಿದ್ದಾರೆ? ಸಚಿವರ ಸಭೆಗಳು ಏನಿದ್ದರೂ ಅಧಿಕಾರಿ ವರ್ಗಕ್ಕೆ ಮಾತ್ರ ಸೀಮಿತ. ಅದೂ ಬೆಂಗಳೂರಿನಲ್ಲಿಯೇ ಸಭೆ ನಡೆಸಿ ಮಲೆನಾಡ ಕಾಡಿನ ಬಗ್ಗೆ ಚರ್ಚಿಸಲಾಗುತ್ತಿದೆ. ಎಂತಹ ವಿಪರ್ಯಾಸ!

ಕೊಡಗಿನ ಕಾಡಾನೆಗಳ ಬಗ್ಗೆ ಹೇಳುವುದಾದರೆ, ಮೊದಲೆಲ್ಲಾ ತನ್ನ ಎದುರಿಗೆ ಸಿಕ್ಕಿದವರ ಮೇಲೆ ಧಾಳಿ ಮಾಡುತ್ತಿದ್ದ ಆನೆಗಳು ಇತ್ತೀಚಿನ ವರ್ಷಗಳಲ್ಲಿ ಎಲ್ಲೆ ಮೀರಿ ದಾಂಧಲೆ, ಧಾಳಿ ಮುಂದುವರೆಸಿದೆ. ಕೃಷಿ ಫಸಲನ್ನೇ ನಾಶ ಮಾಡುತ್ತಿದ್ದ ಕಾಡಾನೆಗಳು ಕೆಲವು ವರ್ಷಗಳಿಂದ ಕಾಫಿ ಹಣ್ಣಿನ ರುಚಿಯನ್ನೂ ಸವಿಯಲಾರಂಭಿಸಿದೆ. ಕಾಫಿ ಫಸಲು ಇರುವ ತೋಟಗಳಲ್ಲಿ ಬೃಹತ್ ಗಾತ್ರದ ಆನೆಗಳು ಹೆಜ್ಜೆಯಿರಿಸುತ್ತಾ ಮನಬಂದAತೆ ಸಾಗಿದಾಗ ನೂರಾರು ಗಿಡಗಳು, ಫಸಲು ಸಂಪೂರ್ಣ ನೆಲಕಚ್ಚುತ್ತವೆ. ಇದಿಷ್ಟೇ ಸಾಲದು ಎಂಬAತೆ ಇತ್ತೀಚಿನ ದಿನಗಳಲ್ಲಿ ಕಾಫಿ ಹಣ್ಣನ್ನೂ ತಿನ್ನುವ ಮೂಲಕ ಹೊಟ್ಟೆಬಾಕ ಆನೆಗಳು ಬೆಳೆಗಾರನ ನೆಮ್ಮದಿ ಕಸಿದುಕೊಂಡಿವೆ. ದಕ್ಷಿಣ ಕೊಡಗಿನ ಅನೇಕ ತೋಟಗಳಲ್ಲಿ ಕಾಫಿ ಹಣ್ಣು ಕಾಡಾನೆಗಳ ಆಹಾರವಾಗಿದೆ.

ಮಂಗಗಳAತೂ ಜಿಲ್ಲೆಯ ಬಹುತೇಕ ತೋಟಗಳ ಮರಗಳಲ್ಲಿ ನೆಗೆಯುತ್ತಿದೆ, ಕಾಫಿ ತೋಟದಲ್ಲಿನ ಹಣ್ಣುಗಳು ಮಾತ್ರವಲ್ಲದೇ ಮನೆ ಮುಂದೆ, ಹಿಂದಿನ ತರಕಾರಿಗಳನ್ನೂ ಬಿಡದೇ ತಿನ್ನುತ್ತಿವೆ. ಮರಕ್ಕಿಂತಲೂ ಜಾಸ್ತಿಯಾಗಿ ವಾನರ ಪಡೆ ಮನೆ ವ್ಯಾಪ್ತಿಯಲ್ಲಿಯೇ ಇರುವಂತಾಗಿದೆ ಪಟಾಕಿ ಸಿಡಿತ, ನಾಯಿ ಬೊಗಳುವಿಕೆಗಳಿಗೆಲ್ಲಾ ಕ್ಯಾರೇ ಮಾಡದೇ ತಾನು ಆಡಿದ್ದೇ ಆಟ ಎಂಬAತೆ ಮಂಗಗಳು ಕಾಡಿನ ಮರ ಬಿಟ್ಟು ಮನೆ ಬಳಿಯ ಮರ ಸೇರಿಕೊಂಡಿವೆ.

ಹುಲಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ ಹುಲಿಗಳ ಸಂಖ್ಯೆಯೊAದಿಗೆ ಹುಲಿಗಳು ಅತಿಕ್ರಮಿಸುವ ಪ್ರದೇಶ ಕೂಡ ವಿಸ್ತರಿಸಿದೆ. ಕಳೆದ ೨೦ ವರ್ಷಗಳಲ್ಲಿ ಹುಲಿಗಳು ಶೇ. ೩೦ ರಷ್ಟು ಪ್ರದೇಶಗಳನ್ನು ಹೆಚ್ಚುವರಿಯಾಗಿ ವಿಸ್ತರಿಸಿಕೊಂಡಿವೆ.

ಕಾಡಾನೆಗಳ ಸ್ಥಳಾಂತರದ ಪ್ರಸ್ತಾಪವೂ ಸರ್ಕಾರದ ಬಳಿಯಿದೆ. ಆದರೆ ಕೊಡಗಿನ ಮಟ್ಟಿಗೆ ಹೇಳುವುದಾದಲ್ಲಿ ಜಿಲ್ಲೆಯಲ್ಲಿ ೧೮೦ ಕಾಡಾನೆಗಳು ತೋಟಗಳಲ್ಲಿ ದಾಳಿ ನಡೆಸುವ ಆನೆಗಳು ಎಂದು ಗುರುತಿಸಲ್ಪಟ್ಟಿವೆ. ಕೊಡಗಿನಲ್ಲಿ ಈ ಆನೆಗಳಿಗಾಗಿಯೇ ೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರತ್ಯೇಕವಾದ ಆನೆಧಾಮ ಮಾಡುವ ಪ್ರಸ್ತಾಪವೂ ಅರಣ್ಯ ಇಲಾಖೆ ಬಳಿಯಿದೆ. ಆದರೆ ೧೮೦ ಆನೆಗಳಿಗಾಗಿ ಜಿಲ್ಲೆಯಲ್ಲಿ ೨೦೦೦ ಹೆಕ್ಟೇರ್ ಪ್ರದೇಶ ಗುರುತಿಸಿ ಆನೆ ಧಾಮ ಮಾಡುವದು ಸೂಕ್ತವೇ ಎಂಬ ಪ್ರಶ್ನೆಯೂ ಕಂಡುಬAದಿದೆ.

ಸಾಕಾನೆ ಶಿಬಿರದಲ್ಲಿಯೇ ಪ್ರಸ್ತುತ ಆನೆಯೊಂದರ ನಿರ್ವಹಣೆಗಾಗಿ ವಾರ್ಷಿಕ ಕನಿಷ್ಟ ರೂ. ೨೦ ಲಕ್ಷ ವೆಚ್ಚವಾಗುತ್ತಿದೆ. ಹೀಗಿರುವಾಗ ೨೦೦ ಆನೆಗಳ ಸಾಕಾನೆ ಧಾಮದಲ್ಲಿ ಉಂಟಾಗುವ ನಿರ್ವಹಣೆಯ ವೆಚ್ಚ ಸರ್ಕಾರಕ್ಕೆ ಮತ್ತಷ್ಟು ಆರ್ಥಿಕ ಹೊರೆಯಾಗದೇ? ಜಿಲ್ಲೆಯಲ್ಲಿ ಒಂದೇ ಪ್ರದೇಶದಲ್ಲಿ ೨ ಸಾವಿರ ಹೆಕ್ಟೇರ್ ಜಾಗ ದೊರಕುವದೂ ಕಷ್ಟಸಾಧ್ಯ. ಇದಕ್ಕಾಗಿ ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಮತ್ತಷ್ಟು ಕಸರತ್ತನ್ನು ಕಾನೂನಾತ್ಮಕವಾಗಿ ನಡೆಸಬೇಕಾಗಿದೆ. ವಿಪರ್ಯಾಸ ಎಂದರೆ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಸಂಬAಧ ಸರ್ಕಾರ ೫ ಮಂದಿ ತಜ್ಞರ ಸಮಿತಿ ರಚಿಸಿದೆ. ಅಲ್ಲ, ಸರ್ಕಾರಿ ಜಾಗ ಒತ್ತುವರಿ ಎಲ್ಲೆಲ್ಲಿ ಆಗಿದೆ ಎಂದು ಸ್ಪಷ್ಟ ಮಾಹಿತಿ ಕಂದಾಯ ಇಲಾಖೆ ಯಲ್ಲಿಯೇ ಇದೆ. ಹೀಗಿರುವಾಗ ಇದಕ್ಕೆ ಮತ್ತೊಂದು ಸಮಿತಿ ಅಗತ್ಯ ಇದೆಯೇ?

ಕೊಡಗು ಸೇರಿದಂತೆ ಕರ್ನಾಟಕದ ಕಾಫಿ ತೋಟಗಳಲ್ಲಿ ಕಾಡಾನೆ ಸಮಸ್ಯೆ ತೀವ್ರವಾಗಿದ್ದರೂ ಈ ಬಗ್ಗೆ ಕೇಂದ್ರದ ಗಮನ ಸೆಳೆಯುವಲ್ಲಿ ಕಾಫಿ ಜಿಲ್ಲೆಗಳಿಗೆ ಸೇರಿದ ಸಂಸದರು ಪ್ರಮುಖ ಪಾತ್ರ ವಹಿಸಲೇಬೇಕಾಗಿದೆ ಯಾಕೆಂದರೆ ವನ್ಯಜೀವಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಾಂಗಿ ನಿರ್ಧಾರ ಕೈಗೊಳ್ಳಲಾಗದು. ಹಲವಷ್ಟು ವಿಚಾರಗಳಿಗೆ ಕೇಂದ್ರದ ಅನುಮತಿ ಅಗತ್ಯವಿರುತ್ತದೆ ಇಂತಹ ಸಂದರ್ಭದಲ್ಲಿ ವನ್ಯಜೀವಿ ದಾಂಧಲೆ ಸಂಬAಧಿತ ಪರಿಹಾರ ಕೇಂದ್ರ ಸರ್ಕಾರದಿಂದ ಸುಲಭಸಾಧ್ಯವಿದೆ.

ಕಾಡಾನೆ ಸೇರಿದಂತೆ ವನ್ಯಜೀವಿ ಸಮಸ್ಯೆ ಬಗ್ಗೆ ಇಂದಿಗೂ ವೈಜ್ಞಾನಿಕವಾಗಿ ಯಾರೂ ಚರ್ಚಿಸಲೇ ಇಲ್ಲ. ಸಾಕಷ್ಟು ಸಭೆಗಳು ಬೆಂಗಳೂರಿನಲ್ಲಿ ನಡೆದಿದ್ದರೂ ಅನೇಕರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಪರಿಹಾರೋಪಾಯ ಸೂಚಿಸುತ್ತಿದ್ದಾರೆ. ವಾಸ್ತವವಾಗಿ ಅಂತಹವರು ಇನ್ನೂ ೧ನೇ ತರಗತಿಯನ್ನೇ ಅಭ್ಯಾಸ ಮಾಡಿಲ್ಲ!

ಕಾಡಾನೆಗಳ ಧಾಳಿ ತಡೆಗೆ ರೈಲ್ವೇ ಬ್ಯಾರಿಕೇಡ್ ನಿರ್ಮಾಣ, ಕಂದಕ ತೋಡುವಿಕೆ ಇತ್ಯಾದಿ ಹಲವಾರು ವರ್ಷಗಳಿಂದ ಇದೇ ಪರಿಹಾ ರೋಪಾಯ ಕೇಳಿಬರುತ್ತಿದೆಯೇ ಹೊರತಾಗಿ ಬೇರೆ ಯಾವುದೇ ಉಪಾಯ ವ್ಯಕ್ತವಾಗುತ್ತಿಲ್ಲ. ಹೊರ ರಾಜ್ಯಗಳಲ್ಲಿ ಇಂತಹ ಸಮಸ್ಯೆ ನಿವಾರಣೆಗೆ ಯಾವೆಲ್ಲಾ ಪರಿಹಾ ರೋಪಾಯ ಕಂಡು ಹಿಡಿದಿದ್ದಾರ ಎಂಬ ಅಧ್ಯಯನ ಕೂಡ ಗಂಭೀರ ವಾಗಿ ಆಗಿಲ್ಲ. ಪ್ರತೀ ವರ್ಷವೂ ಅದೇ ಸೋಲಾರ್ ಬೇಲಿ, ರೈಲ್ವೇ ಕಂಬಿ, ಕಂದಕ ನಿರ್ವಹಣೆ.. ಕಾಡಾನೆಗಳ ಧಾಳಿ ಮಾತ್ರ ನಿತ್ಯ ನಿರಂತರ!

ತೋಟದಿAದ ಕಾಡಾನೆಗಳನ್ನು ಸ್ಥಳಾಂತರ ಮಾಡಿ ಕಾಡಿಗೆ ಬಿಟ್ಟರೆ ಪ್ರಯೋಜನ ಉಂಟೇ?

ಕಾಡನ್ನೇ ನೋಡದ ತೋಟದಲ್ಲಿಯೇ ಜನಿಸಿ ಇಲ್ಲಿಯೇ ಕಾಫಿ ತೋಟಗಳ ಮಧ್ಯೆ ಬೆಳೆದ ಅನೇಕ ಆನೆಗಳನ್ನು ಸ್ಥಳಾಂತರಗೊಳಿಸಿ ಕಾಡಿಗೆ ಬಿಟ್ಟರೆ ಅವು ಕಾಡಿನ ಜೀವನ ಅಭ್ಯಾಸ ಇಲ್ಲದೇ ಮರಳಿ ತೋಟಕ್ಕೆ ವಾಪಾಸ್ಸಾಗುವ ಸಂಭವವೇ ಹೆಚ್ಚು. ಇಂತಹ ಸಲಹೆಗಳು ವಾಸ್ತವವಾಗಿ ಉಪಯೋಗಕ್ಕೆ ಬಾರದು ಎನ್ನುತ್ತಾರೆ ವನ್ಯಜೀವಿ ತಜ್ಞರು. ಕೊಡಗಿನಲ್ಲಿ ಕೆಲವು ಕಡೆ ಸೋಲಾರ್ ತಂತಿ ಬೇಲಿ ಅಳವಡಿಸಿದ ಪ್ರದೇಶಗಳಲ್ಲಿ ನಡುನಡುವೇ ಖಾಲಿ ಬಿಡಲಾಗಿದೆ. ಇಂತಲ್ಲಿ ರಾಜಾರೋಷವಾಗಿ ಗಜಪಡೆ ತೋಟಗಳಿಗೆ ನುಗ್ಗುತ್ತಿವೆ. ಇವುಗಳ ನ್ನೆಲ್ಲಾ ಯಾರು ಪರಿಶೀಲಿಸುತ್ತಾರೆ? ಸಿಬ್ಬಂದಿ, ಅಧಿಕಾರಿಗಳ ಕೊರತೆಯೂ ಕೊಡಗಿನಲ್ಲಿ ವನ್ಯಜೀವಿ ಧಾಳಿ ತಡೆಗೆ ತೊಡಕಾಗಿ ಪರಿಣಮಿಸಿದೆ.

ವನ್ಯಜೀವಿ ದಾಂಧಲೆ ಸಂದರ್ಭ ಕಾರ್ಯಾಚರಣೆಗಾಗಿ ನಿಯೋಜನೆ ಗೊಂಡ ಅರಣ್ಯ ಇಲಾಖೆಯ ಕ್ಷಿಪ್ರಪಡೆ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ ಸಿಬ್ಬಂದಿಗಳ ಕೊರತೆ, ವೇತನದ ಸಮಸ್ಯೆ, ಸೂಕ್ತ ಮಾರ್ಗದರ್ಶನ ಕೇಂದ್ರ ಮಟ್ಟದಿಂದ ದೊರಕದೇ ಇರುವುದು ಕೂಡ ಕ್ಷಿಪ್ರಪಡೆ ನಿರೀಕ್ಷಿತ ರೀತಿಯಲ್ಲಿ ಕಾರ್ಯೋನ್ಮುಖವಾಗಲು ತೊಡಕಾಗಿ ಪರಿಣಮಿಸಿದೆ.

ಹುಲಿ ಧಾಳಿ ಸಂಬAಧಿತ ಅರಣ್ಯ ಇಲಾಖೆಯಲ್ಲಿ ಇನ್ನೂ ವೈಜ್ಞಾನಿಕ ರೀತಿಯ ಸಂಶೋಧನೆ ಆಗಲೇ ಇಲ್ಲ. ಹಸು ಕೂಗಿದೆ, ಜಿಂಕೆ ಹಾರಿದೆ, ಮಂಗ ನೆಗೆದಿದೆ.. ಅದೋ ಹುಲಿ ಕಂಡಿದ ಎಂಬAತಹ ಓಬಿರಾಯನ ಕಾಲದ ಮಾಹಿತಿಯೇ ಹುಲಿ ಪತ್ತೆಯಲ್ಲಿಯೂ ಇರುವಂತಿದೆ. ಹುಲಿ ಪತ್ತೆಗೆ ಸೂಕ್ತ ಟ್ರ‍್ಯಾಕಿಂಗ್ ವ್ಯವಸ್ಥೆ ಅಗತ್ಯವಿದೆ.

ಕೊಡಗಿನಲ್ಲಿ ಸಂಭವಿಸಿದ ಕಾಡಾನೆ, ಹುಲಿ ಧಾಳಿಯ ಪ್ರಕರಣಗಳನ್ನೇ ಗಮನಿಸುವುದಾದಲ್ಲಿ, ಈ ಪ್ರಾಣಿಗಳ ಧಾಳಿಯಿಂದ ಸತ್ತವರು ಬಹುತೇಕರು ಕೂಲಿ ಕಾರ್ಮಿಕರು, ಬಡವರು. ತುತ್ತಿನ ಕೂಳು ಅರಸಿ ಬೆಳ್ಳಂಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ತೆರಳುವಾಗ ಕಾಡಾನೆ, ಹುಲಿ ಯಿಂದಾಗಿ ಕೊನೆ ಉಸಿರೆಳೆದವರು. ಗಂಜಿ ತರಲೆಂದು ಹೋದ ಕಾರ್ಮಿಕ ಶವವಾಗಿ ಮನೆಗೆ ಮರಳಿದ ಉದಾಹರಣೆಗಳೇ ಹೆಚ್ಚು. ಶ್ರೀಮಂತರು ತೋಟದ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಪಕ್ಕದ ಬಡವರ ತೋಟ ಗಳಿಗೆ ಕಾಡಾನೆಗಳು ನುಗ್ಗುತ್ತಿರುವುದೂ ವಾಸ್ತವ.

ಪರಿಹಾರವೇನು?

ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಸ್ಥಳೀಯವಾಗಿಯೇ ಕಂಡುಕೊಳ್ಳಬೇಕು. ಕಾಡಿನಿಂದ ಆನೆಗಳು ನಾಡಿಗೆ ಬಾರದಂತೆ ಮಾಡಲು ಇನ್ನಾದರೂ ಕಾಡಿನಲ್ಲಿ ಸೂಕ್ತ ಆಹಾರ, ಹಣ್ಣು ಗಿಡಗಳನ್ನು ಬೆಳೆಸಿ, ಕೆರೆಗಳನ್ನು ಹೆಚ್ಚು ನಿರ್ಮಾಣ ಮಾಡಿ. ಕಾಡಾನೆ ಧಾಳಿಗೆ ತುತ್ತಾಗುವ ಬೆಳೆಗಾರರಿಂದಲೇ ಸಮಸ್ಯೆ ತಿಳಿದುಕೊಂಡು ಸ್ಥಳೀಯವಾಗಿ ಪರಿಹಾರೋಪಾಯ ಕಂಡುಕೊಳ್ಳಿ. ಬೆಂಗಳೂರಿನ ಅರಣ್ಯ ಕಛೇರಿಯ ಪುಸ್ತಕಗಳಿಂದ ಅವೈಜ್ಞಾನಿಕ ಪರಿಹಾರ ಖಂಡಿತಾ ದೊರಕದು ಕೊಡಗಿನಲ್ಲಿಯೇ ಬೆಳೆಗಾರರ ಸಭೆ ನಡೆಸಿ ಸೂಕ್ತ ರೀತಿಯಲ್ಲಿ ಪರಿಹಾರೋಪಾಯ ಕಂಡುಕೊಳ್ಳಿ. ಗ್ರೌಂಡ್ ರಿಯಾಲಿಟಿಯನ್ನು ಯುದ್ಧದ ಮೈದಾನದಲ್ಲಿಯೇ ಕಂಡುಕೊಳ್ಳಬೇಕೇ ವಿನಾಃ ಕಾಫಿ ತೋಟದಲ್ಲಿನ ಕಾಡಾನೆ ಸಮಸ್ಯೆಗೆ ಬೆಂಗಳೂರಿನಲ್ಲಿ ಉಪಗ್ರಹಾಧಾರಿತ ಪರಿಹಾರ ಸೂಕ್ತವಲ್ಲ. ಅರಣ್ಯ ಸಿಬ್ಬಂದಿಗಳಿಗೆ ಸೂಕ್ತ ಸೌಲತ್ತು, ಸೌಕರ್ಯ ನೀಡಿ. ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಿ, ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿ. ಇಲ್ಲದೇ ಹೋದಲ್ಲಿ ಈ ತೋಟದಿಂದ ಆ ತೋಟಕ್ಕೆ, ಆ ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಲೇ ಇವರ ಸಮಯ ವ್ಯರ್ಥವಾದೀತು. ಬೆಳೆಗಾರನಿಗೆ ಯಾವುದೇ ಪ್ರಯೋಜನ ಆಗದು.

ಈಗಾಗಲೇ ವನ್ಯಜೀವಿ ಧಾಳಿ ಇರುವಂತಿದೆ. ಹುಲಿ ಪತ್ತೆಗೆ ಸೂಕ್ತ ಟ್ರ‍್ಯಾಕಿಂಗ್ ವ್ಯವಸ್ಥೆ ಅಗತ್ಯವಿದೆ.

ಕೊಡಗಿನಲ್ಲಿ ಸಂಭವಿಸಿದ ಕಾಡಾನೆ, ಹುಲಿ ಧಾಳಿಯ ಪ್ರಕರಣಗಳನ್ನೇ ಗಮನಿಸುವುದಾದಲ್ಲಿ, ಈ ಪ್ರಾಣಿಗಳ ಧಾಳಿಯಿಂದ ಸತ್ತವರು ಬಹುತೇಕರು ಕೂಲಿ ಕಾರ್ಮಿಕರು, ಬಡವರು. ತುತ್ತಿನ ಕೂಳು ಅರಸಿ ಬೆಳ್ಳಂಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ತೆರಳುವಾಗ ಕಾಡಾನೆ, ಹುಲಿ ಯಿಂದಾಗಿ ಕೊನೆ ಉಸಿರೆಳೆದವರು. ಗಂಜಿ ತರಲೆಂದು ಹೋದ ಕಾರ್ಮಿಕ ಶವವಾಗಿ ಮನೆಗೆ ಮರಳಿದ ಉದಾಹರಣೆಗಳೇ ಹೆಚ್ಚು. ಶ್ರೀಮಂತರು ತೋಟದ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಪಕ್ಕದ ಬಡವರ ತೋಟ ಗಳಿಗೆ ಕಾಡಾನೆಗಳು ನುಗ್ಗುತ್ತಿರುವುದೂ ವಾಸ್ತವ.

ಪರಿಹಾರವೇನು?

ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಸ್ಥಳೀಯವಾಗಿಯೇ ಕಂಡುಕೊಳ್ಳಬೇಕು. ಕಾಡಿನಿಂದ ಆನೆಗಳು ನಾಡಿಗೆ ಬಾರದಂತೆ ಮಾಡಲು ಇನ್ನಾದರೂ ಕಾಡಿನಲ್ಲಿ ಸೂಕ್ತ ಆಹಾರ, ಹಣ್ಣು ಗಿಡಗಳನ್ನು ಬೆಳೆಸಿ, ಕೆರೆಗಳನ್ನು ಹೆಚ್ಚು ನಿರ್ಮಾಣ ಮಾಡಿ. ಕಾಡಾನೆ ಧಾಳಿಗೆ ತುತ್ತಾಗುವ ಬೆಳೆಗಾರರಿಂದಲೇ ಸಮಸ್ಯೆ ತಿಳಿದುಕೊಂಡು ಸ್ಥಳೀಯವಾಗಿ ಪರಿಹಾರೋಪಾಯ ಕಂಡುಕೊಳ್ಳಿ. ಬೆಂಗಳೂರಿನ ಅರಣ್ಯ ಕಛೇರಿಯ ಪುಸ್ತಕಗಳಿಂದ ಅವೈಜ್ಞಾನಿಕ ಪರಿಹಾರ ಖಂಡಿತಾ ದೊರಕದು ಕೊಡಗಿನಲ್ಲಿಯೇ ಬೆಳೆಗಾರರ ಸಭೆ ನಡೆಸಿ ಸೂಕ್ತ ರೀತಿಯಲ್ಲಿ ಪರಿಹಾರೋಪಾಯ ಕಂಡುಕೊಳ್ಳಿ. ಗ್ರೌಂಡ್ ರಿಯಾಲಿಟಿಯನ್ನು ಯುದ್ಧದ ಮೈದಾನದಲ್ಲಿಯೇ ಕಂಡುಕೊಳ್ಳಬೇಕೇ ವಿನಾಃ ಕಾಫಿ ತೋಟದಲ್ಲಿನ ಕಾಡಾನೆ ಸಮಸ್ಯೆಗೆ ಬೆಂಗಳೂರಿನಲ್ಲಿ ಉಪಗ್ರಹಾಧಾರಿತ ಪರಿಹಾರ ಸೂಕ್ತವಲ್ಲ. ಅರಣ್ಯ ಸಿಬ್ಬಂದಿಗಳಿಗೆ ಸೂಕ್ತ ಸೌಲತ್ತು, ಸೌಕರ್ಯ ನೀಡಿ. ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಿ, ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿ. ಇಲ್ಲದೇ ಹೋದಲ್ಲಿ ಈ ತೋಟದಿಂದ ಆ ತೋಟಕ್ಕೆ, ಆ ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಲೇ ಇವರ ಸಮಯ ವ್ಯರ್ಥವಾದೀತು. ಬೆಳೆಗಾರನಿಗೆ ಯಾವುದೇ ಪ್ರಯೋಜನ ಆಗದು.

ಈಗಾಗಲೇ ವನ್ಯಜೀವಿ ಧಾಳಿ ಸಂಬAಧಿತ ಸರ್ಕಾರದ ಮಟ್ಟದಲ್ಲಿ ಕೆಲವು ಸಭೆಗಳಾಗಿದೆ. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ತಮ್ಮದೇ ಸಿದ್ಧಸೂತ್ರದಿಂದ ಹೊರಬಂದು ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸಲೇ ಬೇಕಾಗಿದೆ. ಕೊಡಗಿನ ಸಮಸ್ಯೆ ಬಗ್ಗೆ ಸಮಗ್ರವಾಗಿ ನಾನೂ ಸಭೆಗಳಲ್ಲಿ ವಾದಮಂಡಿಸಿದ್ದೇನೆ. ಎಲ್ಲಿಯವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾವೆಲ್ಲಾ ವಿಫಲರಾಗುತ್ತೆವೆಯೋ ಅಲ್ಲಿವರೆಗೆ ಬೆಂಗಳೂರಿನಲ್ಲಿ ಕುಳಿತ ಅಧಿಕಾರಿಗಳದ್ದೇ ಅಂತಿಮ ತೀರ್ಮಾನ ಎಂಬAತಾಗಿದೆ. ಸಮಸ್ಯೆ ಸಂಬAಧಿತ ದಿನನಿತ್ಯ ಹೋರಾಡುತ್ತಿರುವ ಇಲಾಖೆಯ ಸಿಬ್ಬಂದಿಗಳ ಸಮಸ್ಯೆಗೂ ಸರ್ಕಾರ ಕಿವಿಕೊಟ್ಟು ಅವರಿಗೆ ಸೂಕ್ತ ಸೌಲಭ್ಯಗಳ ಮೂಲಕ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ.

ಕಾಫಿ ತೋಟಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ವನ್ಯಜೀವಿ ದಾಂಧಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ ಕಾಫಿಗೆ ಚಿನ್ನದಂತಹ ಬೆಲೆ ಬಂದರೂ, ತೋಟಗಳಲ್ಲಿನ ಅಲ್ಪಸ್ವಲ್ಪ ಫಸಲೂ ವನ್ಯಜೀವಿಗಳ ಹೊಟ್ಟೆ ಸೇರಿ ಕಾಫಿ ಕೃಷಿಕನಿಗೆ ತಣ್ಣೀರು ಬಟ್ಟೆಯೇ ಗತಿಯಾದೀತು. ವನ್ಯಜೀವಿಗಳು ಯಾವಾಗ ಧಾಳಿ ಮಾಡುತ್ತದೆ ಎಂದು ಸದಾ ಭಯದಿಂದಲೇ ಜೀವಿಸುತ್ತಿರುವ ಕಾಫಿ ತೋಟ ಮಾಲೀಕ, ಸಾವಿನ ಭಯದಿಂದ ಹೊರಬರಬೇಕಾಗಿದೆ.

ತನ್ನದೇ ತೋಟಕ್ಕೆ ಆನೆಗಳ ಭಯದಿಂದ ಹೋಗಲಾಗದ ಬೆಳೆಗಾರನ ದಯನೀಯ ಸ್ಥಿತಿಯ ಬದಲಿಗೆ ಕಾಫಿ ತೋಟಗಳಿಗೆ ಹೆಜ್ಜೆ ಹಾಕಲು ಆನೆಗಳು ಭಯಪಡಬೇಕಾದ ದಿನಗಳ ಸುವರ್ಣ ಕಾಲ ಕಾಫಿ ಬೆಳೆಗಾರನ ಪಾಲಿಗೆ ಬರಲೇಬೇಕಾಗಿದೆ. ಇಲ್ಲದೇ ಹೋದಲ್ಲಿ ವನ್ಯಜೀವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವಿಸಬೇಕಾದ ಹೀನಾಯ ಸ್ಥಿತಿ ಮುಂದುವರಿಯಬಹುದು...!

- ಅನಿಲ್ ಎಚ್.ಟಿ., ಮಡಿಕೇರಿ.