ಮಡಿಕೇರಿ, ಫೆ. ೫: ರಸ್ತೆಗಳಿಗೆ ಸಾಮಾನ್ಯವಾಗಿ ಸ್ವಾತಂತ್ರö್ಯ ಹೋರಾಟಗಾರರು, ಯೋಧರುಗಳ ಹೆಸರುಗಳನ್ನಿಡಲಾಗುತ್ತದೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ವಿಶೇಷವೆಂಬAತೆ ಜಿಲ್ಲಾಧಿಕಾರಿಯೊಬ್ಬರ ಹೆಸರನ್ನು ರಸ್ತೆಗಿಟ್ಟು ಗೌರವ ಸಲ್ಲಿಸಲಾಗಿದೆ. ಕೊಡಗು ಮೂಲದ ಐ.ಎ.ಎಸ್. ಅಧಿಕಾರಿ ಎಸ್.ಎಸ್. ನಕುಲ್ ಅವರೇ ಈ ಗೌರವಕ್ಕೆ ಭಾಜನರಾದವರು. ಇವರ ನಿಸ್ವಾರ್ಥ ಸೇವೆಯ ನೆನಪಿಗೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರದ ಕಪ್ಪಗಳ್ಳು ಎಂಬ ಪ್ರದೇಶದಲ್ಲಿನ ಒಂದು ಸಂಪರ್ಕ ರಸ್ತೆಗೆ ‘ಎಸ್.ಎಸ್. ನಕುಲ್ ಮಾರ್ಗ’ ಎಂದು ಹೆಸರಿಡಲಾಗಿದೆ.
ಬಳ್ಳಾರಿಯ ಜಿಲ್ಲಾಧಿಕಾರಿಯಾಗಿ ೨೦೨೦ ರಿಂದ ೨೦೨೨ ರವರೆಗೆ ಕಾರ್ಯನಿರ್ವಹಿಸಿದ್ದ ನಕುಲ್ ಅವರು ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.
ಅಲ್ಲದೇ ಕೋವಿಡ್ ಸಂದರ್ಭ ಕೂಡ ಸಾಂಕ್ರಾಮಿಕದ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ಮಾಡಿದ್ದರು. ಇದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡ ಸ್ಥಳೀಯರು, ಅವರ ನೆನಪಿಗಾಗಿ ರಸ್ತೆಗೆ ಅವರ ಹೆಸರನ್ನು ಇಟ್ಟಿದ್ದಾರೆ. ಇಷ್ಟೆ ಅಲ್ಲದೆ ಬಳ್ಳಾರಿಯ ಒಂದು ದಂಪತಿ ತಮ್ಮ ಮಗುವಿಗೆ ನಕುಲ್ ಎಂದು ಹೆಸರಿಟ್ಟಿ ದ್ದಾರೆ. ಕೋವಿಡ್ ಸೋಂಕಿನಿAದ ಬಳಲುತ್ತಿದ್ದಾಗ ಅವರುಗಳಿಗೆ ಜಿಲ್ಲಾಸ್ಪತ್ರ್ರೆಯಲ್ಲಿ ದೊರಕಿದ ಉತ್ತಮ ಚಿಕಿತ್ಸೆ ಹಿನ್ನೆಲೆಯಲ್ಲಿ ದಂಪತಿ ತಮ್ಮ ಪುತ್ರನಿಗೆ ಜಿಲ್ಲಾಧಿಕಾರಿಯ ಹೆಸರನ್ನಿಟ್ಟಿರುವುದು ವಿಶೇಷ.
ಕರ್ನಾಟಕ ಕ್ಯಾಡರ್ ೨೦೧೦ನೇ ಬ್ಯಾಚ್ನ ಐ.ಎ.ಎಸ್. ಅಧಿಕಾರಿ ಯಾಗಿರುವ ನಕುಲ್ ಅವರು, ಪ್ರಸ್ತುತ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಶಾಲನಗರ ಕಾವೇರಿ ಟೆಕ್ಸ್ಟೈಲ್ಸ್ ಮಾಲೀಕ ಎಸ್.ಕೆ. ಸತೀಶ್ ಮತ್ತು ಶೋಭಾ ದಂಪತಿಯ ಪುತ್ರ.