ಸೋಮವಾರಪೇಟೆ, ಫೆ. ೪: ಮೀನುಗಾರರಿಗೆ ಬಲೆ, ಕ್ರೇಟ್ ಸೇರಿದಂತೆ ಇನ್ನಿತರ ಉಪಕರಣಗಳು, ಮೀನು ಮರಿಗಳ ವಿತರಣೆ, ಸಹಾಯ ಧನಗಳಿಗಷ್ಟೇ ಸೀಮಿತವಾಗಿದ್ದ ಮೀನುಗಾರಿಕೆ ಇಲಾಖೆಯಿಂದ ಇತ್ತೀಚಿನ ದಿನಗಳಲ್ಲಿ ವಿನೂತನ ಯೋಜನೆಗಳು ಜಾರಿಯಾಗುತ್ತಿದ್ದು, ಸಾರ್ವಜನಿಕರಿಗೆ ಉಪಯೋಗ ವಾಗುತ್ತಿದೆ. ಶಾಸಕ ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ಈಗಾಗಲೇ ಕ್ಷೇತ್ರದ ಮೂರು ಕಡೆಗಳಲ್ಲಿ ಮತ್ಸö್ಯ ಸಂಜೀವಿನಿ ಹೊಟೇಲ್‌ಗಳು ಕಾರ್ಯಾರಂಭ ಮಾಡಿದ್ದು, ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳಿAದ ನಿರ್ವಹಣೆಯಾಗುತ್ತಿದೆ. ಮಹಿಳಾ ಸ್ವಾವಲಂಬನೆಯ ದೃಷ್ಟಿಯಿಂದ, ಪ್ರವಾಸೋದ್ಯಮ ಇಲಾಖೆಯ ಸಹಕಾರದಿಂದ ಈ ಯೋಜನೆ ಈಗಾಗಲೇ ಜಾರಿಯಲ್ಲಿದೆ.

ಇದೀಗ ಜಿಲ್ಲೆಯಲ್ಲಿಯೇ ಪ್ರಥಮ ಎಂಬAತೆ ಸೋಮವಾರಪೇಟೆಯಲ್ಲಿ ಮತ್ಸö್ಯ ವಾಹಿನಿ ಮೊಬೈಲ್ ಕ್ಯಾಂಟೀನ್ ಯೋಜನೆಗೆ ಶಾಸಕ ಮಂತರ್ ಗೌಡ ಅವರು ಚಾಲನೆ ನೀಡಿದ್ದಾರೆ.

ತಾಲೂಕು ಮೀನುಗಾರಿಕಾ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸಹಕಾರದೊಂದಿಗೆ ಪ್ರಧಾನಮಂತ್ರಿ ಮತ್ಸö್ಯ ಸಂಪದ ಯೋಜನೆಯ ಮೂಲಕ ಪಟ್ಟಣದಲ್ಲಿ ಮೊಬೈಲ್ ಕ್ಯಾಂಟೀನ್ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.

ರಾಜ್ಯ ಮೀನುಗಾರಿಕಾ ಇಲಾಖಾ ಸಚಿವ ಮಂಕಾಳು ವೈದ್ಯ ಅವರ ಗಮನ ಸೆಳೆದ ಶಾಸಕ ಮಂತರ್ ಗೌಡ ಅವರು, ಮೀನುಗಾರಿಕಾ ಇಲಾಖೆ ಯಲ್ಲಿರುವ ವಿವಿಧ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಮತ್ಸö್ಯ ಸಂಜೀವಿನಿ ಹೊಟೇಲ್‌ಗಳು ಕ್ಷೇತ್ರ ವ್ಯಾಪ್ತಿಯ ಮಲ್ಲಳ್ಳಿ ಜಲಪಾತ, ಚಿಕ್ಲಿಹೊಳೆ, ಹಾರಂಗಿಯಲ್ಲಿ ಕಾರ್ಯಾರಂಭ ಮಾಡಿದ್ದು, ಮತ್ಸö್ಯ ಸಂಪದ ಯೋಜನೆಯಡಿ ಪಟ್ಟಣದಲ್ಲಿ ಮತ್ಸö್ಯ ವಾಹಿನಿ ಮೊಬೈಲ್ ಕ್ಯಾಂಟೀನ್‌ಗೆ ಚಾಲನೆ ನೀಡಲಾಗಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮೀಪ ನೂತನವಾಗಿ ಅನುಷ್ಠಾನ ಗೊಳಿಸಿರುವ ಮೊಬೈಲ್ ಕ್ಯಾಂಟೀನ್‌ಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಮೀನಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳಿದ್ದು, ಆಸ್ಪತ್ರೆಯ ಆವರಣದಲ್ಲಿಯೇ ಯೋಜನೆ ಅನುಷ್ಠಾನಗೊಂಡಿರುವುದರಿAದ ರೋಗಿಗಳಿಗೂ ಹೆಚ್ಚಿನ ಅನುಕೂಲ ವಾಗಲಿದೆ. ಕಡಿಮೆ ಬೆಲೆಯಲ್ಲಿ ಶುಚಿ ಹಾಗೂ ರುಚಿಯಾದ ಆಹಾರ ಲಭಿಸಲಿದೆ. ನಿರ್ವಹಣೆ ಮಾಡುವವರು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಮೀನುಗಾರಿಕಾ ಇಲಾಖೆಯ ಮೂಲಕ ಹಲವಷ್ಟು ವಿನೂತನ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸ್ವ ಉದ್ಯೋಗಕ್ಕೂ ಇಂತಹ ಯೋಜನೆಗಳು ಸಹಕಾರಿ ಯಾಗಿವೆ. ಪಟ್ಟಣದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಎನ್‌ಆರ್ ಎಲ್‌ಎಂ ಯೋಜನೆಯಡಿ ತಾಲೂಕಿನ ಮೂರು ಕಡೆಗಳಲ್ಲಿ ಮೊಬೈಲ್ ಕ್ಯಾಂಟೀನ್ ಅನುಷ್ಠಾನ ಗೊಳ್ಳುತ್ತಿದೆ. ಕುಶಾಲನಗರ ಮತ್ತು ಹಾರಂಗಿಯಲ್ಲಿಯೂ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಮೀನಿನ ಅಮೂಲ್ಯವಾದ ಉತ್ಪನ್ನ ಗಳಿಗೆ ಪ್ರೋತ್ಸಾಹ, ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು. ಸಮುದ್ರ ಮತ್ತು ಸ್ಥಳೀಯ ಕೆರೆಕಟ್ಟೆ, ಹೊಳೆಗಳ ಮೀನಿನಲ್ಲಿ ಒಂದೇ ರೀತಿಯ ಪೌಷ್ಟಿಕಾಂಶಗಳು ಇರುತ್ತವೆ. ಕಡಿಮೆ ಬೆಲೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಶುಚಿ-ರುಚಿಯ ಆಹಾರ ಒದಗಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಇಲಾಖೆಯಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ನಾಮನಿರ್ದೇಶಿತ ಸದಸ್ಯ ನಾಗರಾಜು, ಮುಖ್ಯಾಧಿಕಾರಿ ಸತೀಶ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರಮುಖರಾದ ಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.