ಮಡಿಕೇರಿ, ಫೆ. ೪: ಸಿಕ್ಕಿಂನ ಬೌದ್ಧ ಬಿಕ್ಷÄಗಳಿಗೆ "ಸಂಘ" ವರ್ಚುವಲ್ ಇಂಟ್ಯಾAಜಿಬಲ್ (ಅದೃಶ್ಯ) ಮತ ಕ್ಷೇತ್ರದ ರೀತಿಯಲ್ಲಿ ಆದಿಮಸಂಜಾತ ಕೊಡವರಿಗೂ ಕೂಡ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ, ಅಥವಾ ಪರ್ಯಾಯವಾಗಿ, ಕೊಡವ ಸಾಂಪ್ರದಾಯಿಕ ಆವಾಸಸ್ಥಾನವನ್ನು ಒಳಗೊಂಡಿರುವ ವಿಶೇಷ ಕೊಡವ ವಿಧಾನಸಭಾ ಕ್ಷೇತ್ರ ಮತ್ತು ಸಂಸದೀಯ ಕ್ಷೇತ್ರವನ್ನು ರಸಚಿಸುವಂತೆ ಸಿಎನ್‌ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರು ಒತ್ತಾಯಿಸಿದರು. ತಲಕಾವೇರಿ ಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ೨೦೨೬ರಲ್ಲಿ ಸಂಸತ್ತಿನ ಮತ್ತು ವಿಧಾನಸಭಾ ಕ್ಷೇತ್ರ ಗಡಿ ಮತ್ತು ಸಂಖ್ಯೆ ಪುನರ್ ನಿರ್ಣಯಿಸಲಾಗುತ್ತದೆ. ಇದಕ್ಕಾಗಿ ಪ್ರಕ್ರಿಯೆಯು ಪ್ರಾರಂಭ ವಾಗಿದೆ. ಇದರ ದುರ್ಲಾಭವನ್ನು ಪಡೆದುಕೊಂಡು ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ನಿರ್ಮಿಸುವ ನೆಪದಲ್ಲಿ ಸುಳ್ಯ ತಾಲೂಕನ್ನು ಕೊಡಗಿಗೆ ಸೇರಿಸಿ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರ ನಿರ್ಮಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇದು ಆದಿಮಸಂಜಾತ ಕೊಡವರ ಹಿತಾಸಕ್ತಿಗೆ ಹಾನಿಕಾರಕವಾಗಿದೆ ಎಂದರು.

ಕಳೆದ ೩೫ ವರ್ಷಗಳಿಂದ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆದಿಮಸಂಜಾತ ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕುಗಳಿಗಾಗಿ ಸಂವಿಧಾನ ೩೭೧ ಮತ್ತು ೨೪೪ ವಿಧಿ ಹಾಗೂ ೬ನೇ ಮತ್ತು ೮ನೇ ಶೆಡ್ಯೂಲ್, ಅಂತರ ರಾಷ್ಟಿçÃಯ ಕಾನೂನಿನ ಅಡಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶ್ವ ರಾಷ್ಟç ಸಂಸ್ಥೆಯ ಇಂಡಿಜಿನಸ್ ಹಕ್ಕುಗಳ ಮಾನ್ಯತೆ ಮತ್ತು ಸಂವಿಧಾನದ ೩೪೦-೩೪೨ ವಿಧಿಗಳ ಅಡಿಯಲ್ಲಿ ಆದಿಮ ಸಂಜಾತ ಕೊಡವರಿಗೆ ಬುಡಕಟ್ಟು ಸ್ಥಾನಮಾನಕ್ಕಾಗಿ ಶಾಂತಿಯುತವಾಗಿ ಶ್ರಮಿಸುತ್ತಿದೆ. ಆದುದರಿಂದ ನ್ಯಾಯಯುತ ದೃಷ್ಟಿಕೋನದಿಂದ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಕಸರತ್ತನ್ನು ಪ್ರಕ್ರಿಯೆಗೊಳಿಸುವಾಗ ನ್ಯಾಯ ಮತ್ತು ಸಮಾನತೆಯ ಹಿತಾಸಕ್ತಿಯಲ್ಲಿ ಅಪ್ರತಿಮ ದೇಶಭಕ್ತಿಯ ಆದಿಮಸಂಜಾತ ಕೊಡವರ ಈ ನ್ಯಾಯಸಮ್ಮತ ಹಕ್ಕುಗಳನ್ನು ಸರಕಾರವು ಅರಿತು ಡಿಲಿಮಿಟೇಷನ್ ಪ್ರಕ್ರಿಯೆ ನಡೆಸಬೇಕಿದೆ. ಡಿಲಿಮಿಟೇಶನ್ ಪ್ರಕ್ರಿಯೆ ೨೦೨೬ರಲ್ಲಿ ಪೂರ್ಣಗೊಳ್ಳುವವರೆಗೆ ಜಾಗೃತಿ ನಡೆಸುತ್ತ ಬೆಂಬಲವನ್ನು ಪಡೆಯುವ ಕಾರ್ಯವನ್ನು ಇಂದಿನಿAದಲೇ ಸಿ.ಎನ್.ಸಿ ಪ್ರಾರಂಭಿಸಲಿದೆ ಎಂದರು.

ಈ ಸಂದರ್ಭ ಕಲಿಯಂಡ ಮೀನಾ ಪ್ರಕಾಶ್, ಪುಲ್ಲೆರ ಸ್ವಾತಿ, ರೇಖಾ ನಾಚಪ್ಪ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೋಳಪಂಡ ಜ್ಯೋತಿ, ನಂದಿನೆರವAಡ ನಿಶಾ, ಅಪ್ಪಾರಂಡ ನಂದಿನಿ, ಕಲಿಯಂಡ ಪ್ರಕಾಶ್, ಕಾಂಡೆರ ಸುರೇಶ್, ಪಟ್ಟಮಾಡ ಕುಶ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅರೆಯಡ ಗಿರೀಶ್, ಮಂದಪAಡ ಮನೋಜ್, ಚಂಬAಡ ಜನತ್, ಬೊಟ್ಟಂಗಡ ಗಿರೀಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕಿರಿಯಮಾಡ ಶೆರಿನ್, ಮೇದುರ ಕಂಠಿ, ಬಾಚಿನಾಡಂಡ ಗಿರಿ, ಮೂಕೊಂಡ ದಿಲೀಪ್, ಕೂಪದಿರ ಸಾಬು, ನಂದಿನೆರವAಡ ವಿಜು, ಅಪ್ಪಾರಂಡ ಪ್ರಸಾದ್, ಪಾರ್ವಂಗಡ ನವಿನ್, ಅಪ್ಪೆಂಗಡ ಮಾಲೆ, ಚೋಳಪಂಡ ನಾಣಯ್ಯ, ನಂದಿನೆರವAಡ ಬೋಪಣ್ಣ, ಮೂಕೊಂಡ ದಿಲೀಪ್, ಅಪ್ಪಚ್ಚಿರ ಮಂದಣ್ಣ, ಬೊಳ್ಳಾರ್‌ಪಂಡ ಸಾಬು ಚಂಗಪ್ಪ, ಕುಂಚೆಟಿರ ಸುರೇಶ್ ನಂಜಪ್ಪ, ಚೀಯಬೆರ ಸತೀಶ್ ಸೋಮಣ್ಣ, ಪಟ್ಟಮಾಡ ಅಶೋಕ್, ಬಡ್ಡಿರ ನಂದ, ಕಾಂಡAಡ ಅಪ್ಪಸ್ವಾಮಿ, ಕೇಕಡ ಸೂರಿ ಪಳಂಗಪ್ಪ, ಕೇಕಡ ರಮೇಶ್ ಉತ್ತಪ್ಪ, ಅಪ್ಪಾರಂಡ ಶ್ರೀನಿವಾಸ್, ಕೇಕಡ ಸುಬ್ರಮಣಿ, ಮಂದಪAಡ ವೇಣಾ, ಮಂದಪAಡ ಸೂರಜ್, ಪುಲ್ಲೆರ ಕಾಳಪ್ಪ ಹಾಜರಿದ್ದರು.