ಮಡಿಕೇರಿ, ಫೆ. ೪: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ನೀಡಲಾಗುವ ವಾರ್ಷಿಕ ದತ್ತಿ ಪ್ರಶಸ್ತಿಯನ್ನು ರಿಪಬ್ಲಿಕ್ ವಾಹಿನಿಯ ಕೊಡಗು ಜಿಲ್ಲಾ ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಸ್ವೀಕರಿಸಿದರು.
‘೬ ವರ್ಷಗಳಿಂದ ಪಿಂಚಣಿ ಬರದೆ ಪರದಾಟ’ ಎಂಬ ವರದಿಗೆ ಮೈಸೂರು ದಿಗಂತ ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಅನು ಕಾರ್ಯಪ್ಪ ಅವರಿಗೆ ಪ್ರದಾನ ಮಾಡಲಾಯಿತು.