ಮಡಿಕೇರಿ, ಜ. ೨೮: ಇಲ್ಲಿನ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಉತ್ಸವ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ಹೊರತರಲಾಗಿರುವ ದಶಮಿ ಸ್ಮರಣ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ರಾಜಾಸೀಟು ಬಳಿ ಇರುವ ಹೊಟೇಲ್ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆಯಿತು.

ದಸರಾ ಸಮಿತಿ ಅಧ್ಯಕ್ಷ ರವಿ ಕರ್ಕೆರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಮೇರಿ - ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಂಚಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೈಸೂರು ವಲಯ ಜಮಾಅತೆ ಇಸ್ಲಾಮಿ ಹಿಂದ್ ಸಂಚಾಲಕ ಮೌಲಾನ ಯು. ಅಬ್ದುಸಲಾಮ್, ಸಂತ ಮೈಕಲರ ದೇವಾಲಯ ಧರ್ಮಾಧಿಕಾರಿ ರೆ.ಫಾ. ಜಾರ್ಜ್ ದೀಪಕ್, ಕುಂದುರುಮೊಟ್ಟೆ ದೇವಾಲಯ ಟ್ರಸ್ಟ್ನ ಮ್ಯಾನೇಜರ್ ಟ್ರಸ್ಟಿ ಎಂ.ಪಿ. ಸುನಿಲ್ ಸುಬ್ರಮಣಿ, ಟ್ರಸ್ಟಿ ಟಿ.ಪಿ. ರಮೇಶ್, ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ದಶಮಿ ಸ್ಮರಣ ಸಂಚಿಕೆ ಪೋಷಕ ಸಂಪಾದಕರಾದ ಡಾ. ಹೆಚ್.ವಿ. ದೇವದಾಸ್ ಉಪಸ್ಥಿತರಿದ್ದರು.