*ಸಿದ್ದಾಪುರ, ಜ.೯ : ತೋಟದ ಗಿಡಗಳಿಂದಲೇ ಕಾಫಿ ಕಳ್ಳತನ ಮಾಡಿರುವ ಪ್ರಕರಣ ನಂಜರಾಯಪಟ್ಟಣ ಗ್ರಾ.ಪಂ ವ್ಯಾಪ್ತಿಯ ದಾಸವಾಳ ಎಂಬಲ್ಲಿ ನಡೆದಿದೆ.

ಸ್ಥಳೀಯ ಬೆಳೆಗಾರ ಟಿ.ಕೆ.ರಘು ಅವರ ತೋಟಕ್ಕೆ ನುಗ್ಗಿರುವ ಕಿಡಿಗೇಡಿಗಳು ಕಾಫಿ ತುಂಬಿದ ಗಿಡಗಳ ರೆಂಬೆಗಳನ್ನು ಕಿತ್ತು ಅದರಿಂದ ಕಾಫಿ ಹಣ್ಣನ್ನು ಕದ್ದೊಯ್ದಿರುವುದು ಕಂಡು ಬಂದಿದೆ. ಭಾನುವಾರ ಸಂಜೆ ಈ ಪ್ರಕರಣ ನಡೆದಿದ್ದು, ತೋಟದ ಮಾಲೀಕ ರಘು ಅವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.