ಚೆಟ್ಟಳ್ಳಿ, ಜ. ೯: ಕಾಫಿ ಮಂಡಳಿ ಹಾಗೂ ಎಚ್‌ಐಎಲ್ (ಇಂಡಿಯಾ) ಲಿಮಿಟೆಡ್ ಸಹಯೋಗದೊಂದಿಗೆ ಸಮಗ್ರ ಕೀಟ ನಿರ್ವಹಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೀಟನಾಶಕಗಳ ಸುರಕ್ಷಿತ ಮತ್ತು ವಿವೇಚನಾಯುಕ್ತ ಬಳಕೆಯ ಕುರಿತು ಕಾಫಿ ಬೆಳೆಗಾರರಿಗೆ ವಿಚಾರ ಸಂಕಿರಣ ತಾ. ೧೩ರಂದು ಬೆಳಿಗ್ಗೆ ೧೦ ಗÀಂಟೆಗೆ ಸೋಮವಾರಪೇಟೆಯ ಸಾಕ್ಷಿ ಕನ್ವೆನ್ಸನ್ ಹಾಲ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ. ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ನಿವೇದಿತಾ ಶುಕ್ಲಾ ವರ್ಮಾ, ಅತಿಥಿಗಳಾಗಿ ಕುಲದೀಪ್ ಸಿಂಗ್, ಕಿಶೋರ್ ಕುಮಾರ್ ಟಿ.ಎ, ನಂದ ಬೆಳ್ಳಿಯಪ್ಪ, ಶಶಾಂಕ್ ಚತುರ್ವೇದಿ ಭಾಗವಹಿಸಲಿದ್ದಾರೆ.