ನಾಪೋಕ್ಲು, ನ. ೩೦: ವಿಷಪೂರಿತ ಹಾವು ಕಚ್ಚಿ ಗಬ್ಬದ ಹಸು ಸಾವನ್ನಪ್ಪಿದ ಘಟನೆ ಕೈಕಾಡು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೊಳ್ಳಂಡ ಸುಬ್ಬಯ್ಯ ಎಂಬವರು ಗಬ್ಬದ ಹಸುವನ್ನು ತಮ್ಮ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಸಂಜೆ ಸುಬ್ಬಯ್ಯ ಅವರು ಗದ್ದೆಗೆ ತೆರಳಿದ ಸಂದರ್ಭ ಹಸು ಸಾವನ್ನಪ್ಪಿ ರುವುದು ಗೋಚರಿಸಿದೆ.
ಬಳಿಕ ಪಾರಾಣೆ ಪಶುವೈದ್ಯಾ ಧಿಕಾರಿ ಲತಾ ಅವರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮರಣೋತ್ತರ ಪರೀಕ್ಷೆ ಮಾಡಿದ ಸಂದರ್ಭ ಹಾವು ಕಚ್ಚಿ ಸಾವು ಸಂಭವಿಸಿರುವುದು ದೃಢಪಟ್ಟಿದೆ.